ಮೈಸೂರು ನ್ಯೂಸ್…

ಮೈಸೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಒಕ್ಕೂಟದ ವತಿಯಿಂದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ಮೈಸೂರು ಮಹಾನಗರ ಪಾಲಿಕೆಯ ನೇರಪಾವತಿ ಮತ್ತು ಹೆಚ್ಚುವರಿ ನೇಮಕವಾಗಿರುವ ಪೌರಕಾರ್ಮಿಕರು ಸುಮಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸುಮಾರು 40ರಿಂದ 50 ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ. ಪಾಲಿಕೆಯು ಮೃತಪಟ್ಟವರ ಕುಟುಂಬದ ಅವಲಂಬಿತರಿಗೆ ಪರಿಹಾರ ವನ್ನಾಗಲಿ ಅಥವಾ ಅನುಕಂಪದ ಆಧಾರದ ಮೇಲಿನ ಕೆಲಸವಾಗಲಿ ನೀಡಿರುವುದಿಲ್ಲ.ಈ ಕೂಡಲೇ ಮೃತ ಪೌರಕಾರ್ಮಿಕರ ಅವಲಂಬಿತರಿಗೆ 10 ಲಕ್ಷ ಪರಿಹಾರ ನೀಡಿ ಕುಟುಂಬಸ್ಥರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು ಎಂದರು.

ನೇರ ಪಾವತಿ ಮತ್ತು ಹೆಚ್ಚುವರಿಯಾಗಿ ನೇಮಕವಾದ ಪೌರಕಾರ್ಮಿಕರಿಗೆ ಜ್ಞಾಪನ ಪತ್ರವನ್ನು ಸಾಂಕೇತಿಕವಾಗಿ ಒಂದಷ್ಟು ಪೌರಕಾರ್ಮಿಕರಿಗೆ ನೀಡಿರುತ್ತಾರೆ ಆದಷ್ಟು ಬೇಗ ಎಲ್ಲಾ ಪೌರಕಾರ್ಮಿಕರಿಗೆ ನೀಡಲು ಕ್ರಮವಹಿಸಬೇಕು.

ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ 20ರಿಂದ 35 ರೂ ಗಳಿಗೆ ಹೆಚ್ಚಿಸಿ ಸರ್ಕಾರ ಆದೇಶಿಸಿದೆ ಆದರೆ ಮಹಾನಗರಪಾಲಿಕೆಯು ಈವರೆಗೂ ಉಪಹಾರ ನೀಡುತ್ತಿಲ್ಲ.
ನಗರ ಪಾಲಿಕೆ ಆಯುಕ್ತರು ಈ ಕೂಡಲೇ ಗಮನ ವಹಿಸಿ ಉತ್ತಮ ಗುಣಮಟ್ಟದ ಉಪಹಾರವನ್ನು ನೀಡಲು ಕ್ರಮವಹಿಸಬೇಕು ಎಂದರು.

ನಗರಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ನೇರಪಾವತಿ ಹಾಗೂ ಹೆಚ್ಚುವರಿ ಪೌರಕಾರ್ಮಿಕರ ಪ್ರತಿ ತಿಂಗಳ ವೇತನ ಪಟ್ಟಿಯನ್ನು ಪ್ರತಿಯೊಬ್ಬ ಪೌರಕಾರ್ಮಿಕರಿಗೂ ನೀಡಬೇಕು.

ಬಾಬಾಸಾಹೇಬ ಅಂಬೇಡ್ಕರ ಜಯಂತಿಯಂದು ಖಾಯಂ ಪೌರಕಾರ್ಮಿಕರಿಗೆ 21 ಸಾವಿರ ರೂಪಾಯಿ ಹಾಗೂ ನೇರಪಾವತಿ ಪೌರಕಾರ್ಮಿಕರಿಗೆ 5000 ಗುರುಗಳು ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯು ನೀಡುತ್ತಿದ್ದು ಇದೇ ರೀತಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯು ಎಲ್ಲಾ ಪೌರ ಕಾರ್ಮಿಕರಿಗೂ ಸದರಿ ಸೌಲಭ್ಯವನ್ನು ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷರು ಎನ್ ರಾಜು ಮತ್ತು ಗೌರವ ಅಧ್ಯಕ್ಷರು ರಾಮು ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು

ವರದಿ ಸಂತೋಷ್ ರಾಮ್…