ಶಿವಮೊಗ್ಗ : ನವ ಭಾರತವು ನವ ಶಕ್ತಿಯೊಂದಿಗೆ ಮುನ್ನಡೆಯಲಿದೆ, ಯುವಕರ ಸಬಲೀಕರಣಕ್ಕೆ ಶ್ರೀ ನರೇಂದ್ರ ಮೋದೀಜಿ ನೇತೃತ್ವದ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ನೀಡಿದೆ. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗೆ ಒಂದೂವರೆ ವರ್ಷದೊಳಗೆ ತುರ್ತು ನೇಮಕಾತಿ ಮಾಡುವಂತೆ ಸೂಚಿಸಿದ್ದಾರೆ, ಹಾಗೂ ಸೇನೆಗೆ 46000 ಅಗ್ನಿ ವೀರರನ್ನು 4 ವರ್ಷದ ಸೇವಾವದಿಯನ್ನು ನೇಮಕ ಮಾಡಿಕೊಳ್ಳಲಿದೆ.

‘ಅಗ್ನಿ ಪಥ್ ‘ ಯೋಜನೆ ಜಾರಿಗೆ ತಂದಿರುವುದು ನಮ್ಮ ಉತ್ಸಾಹಿ ದೇಶಭಕ್ತ ಯುವಕರಿಗೆ ಸೇನೆಗೆ ಸೇರುವ ಸದಾವಕಾಶವನ್ನು ಕಲ್ಪಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದೀಜಿ ಅವರಿಗೆ, ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಹಾಗೂ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್‌ ವರಿಗೆ ಧನ್ಯವಾದವನ್ನು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.

ಇದು ಯುವಕರ ಪಾಲಿಗೆ ಕೇವಲ ಉದ್ಯೋಗಾವಕಾಶವಲ್ಲ. ಶಿಸ್ತು, ಮ್ಯಾನೇಜೆಂಟ್, ಜೀವನ ಕೌಶಲ್ಯಗಳನ್ನು
ಮೈಗೂಡಿಸಿಕೊಳ್ಳೋದಕ್ಕೆ ಭಾರತೀಯ ಸೇನೆಗಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ಸದೃಢ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುತ್ತಿರುವ ಕ್ರಾಂತಿಕಾರಿ ಹೆಜ್ಜೆ ಇದಾಗಿದೆ.

‘ಅಗ್ನಿಪಥ’ ಯೋಜನೆಯಡಿ ‘ಅಗ್ನಿವೀರ’-ಸ್ವಯಂ ಸೇವಕರಾಗಿ ಆಯ್ಕೆಯಾಗಲು ಎಸ್.ಎಸ್.ಎಲ್.ಸಿ. ಪಾಸಾದ 17.5 ರಿಂದ 21 ರ ನಡುವಿನ ವಯೋಮಾನದವರು ಅರ್ಹರು. ‘ಅಗ್ನಿವೀರರಿಗೆ’ ಸಶಸ್ತ್ರ ಪಡೆಗಳಲ್ಲಿ ದೇಶಕ್ಕಾಗಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ಸುವರ್ಣಾವಕಾಶವಿದೆ.

ಸಶಸ್ತ್ರ ಪಡೆಗಳಾದ ಭೂಸೇನೆ, ವಾಯುಸೇನೆ ಹಾಗೂ ನೌಕಾ ಪಡೆಗಳಲ್ಲಿ ಸೇವೆ ಸಲ್ಲಿಸಬಹುದು. • 4 ವರ್ಷಗಳ ಬಳಿಕ ಅರ್ಹತ- ಫಿಟ್‌ನೆಸ್ ಆಧರಿಸಿ ಶೇ. 25 ಅಗ್ನಿವೀರರುಗಳ ಮರು-ಸೇರ್ಪಡೆ- ಸೇವಾ ಮುಂದುವರಿಕೆಗೂ ಅವಕಾಶವಿದೆ.

ಹೆಚ್ಚಿನ ಮಾಹಿತಿಯನ್ನು ಕೆಳಗಿನ ಲಿಂಕ್ ಮೂಲಕ ಪಡೆದು ದೇಶ ಸೇವೆಗೆ ನಮ್ಮ ಯುವಕ/ಯುವತಿಯುರು ಉತ್ಸಾಹ ತೋರಿಸುವಂತೆ ಸಂಸದ ಶ್ರೀ ಬಿ.ವೈ. ರಾಘವೇಂದ್ರರವರು ಕರೆ ನೀಡಿದ್ದಾರೆ https://www.mod.gov.in/

ವರದಿ ಮಂಜುನಾಥ್ ಶೆಟ್ಟಿ…