ಶಿವಮೊಗ್ಗ: ಸ್ಥಳೀಯ ಸಂಸ್ಕೃತಿ ಕಲೆಯನ್ನು ಬಿಂಬಿಸುವ, ಪುರಾತನ ಕಾಲದಿಂದಲೂ ತನ್ನದೇ ಆದ ಅಸ್ತಿತ್ವವನ್ನು ಇಟ್ಟುಕೊಂಡಿರುವ ಜನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಹೇಳಿದರು.

ಕುವೆಂಪು ರಂಗಮಂದಿರದ ಆವರಣದಲ್ಲಿ ನಮ್ಮ ಟಿವಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಲಲಿತಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಜಾನಪದ ಕಲಾ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಲಕ್ಷ್ಮಿ ರಾಮಪ್ಪ ಅವರಿಗೆ ಅಭಿನಂದಿಸಿ ಮಾತನಾಡಿದರು.
ಮಲೆನಾಡಿನ ಅಪ್ಪಟ ಕಲೆ, ಹಸೆ ಚಿತ್ತಾರದ, ಜಾನಪದ ಗೀತೆ, ಸೋಬಾನೆ ಪದ, ಗೌರಿಹಬ್ಬದ ಹಾಡು, ಬಿಸೂ ಕಲ್ಲಿನ ಪದ ಹೀಗೆ ಹಲವಾರು ಪ್ರತಿಭೆ ಇರುವ ಲಕ್ಷಿö್ಮÃ ರಾಮಪ್ಪ ಅವರು ಚಿತ್ತಾರ ಲಕ್ಷ್ಮಿ ಎಂದೇ ಖ್ಯಾತರಾಗಿದ್ದಾರೆ ಎಂದು ತಿಳಿಸಿದರು.

ನಮ್ಮ ಟಿವಿ ನಿರೂಪಕ, ವರದಿಗಾರ ಜಿ.ವಿಜಯ್‌ಕುಮಾರ್ ಮಾತನಾಡಿ, ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಲಕ್ಷಿö್ಮÃ ರಾಮಪ್ಪ ಅವರ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿ ಹಾಗೂ ದಾರಿದೀಪವಾಗಿದೆ ಎಂದು ಹೇಳಿದರು.
ರಾಜ್ಯ, ರಾಷ್ಟç ಹಾಗೂ ವಿದೇಶದ ಅನೇಕರಿಗೆ ಜಾನಪದ ಕಲೆ, ಹಸೆ ಚಿತ್ತಾರದ ಬಗ್ಗೆ ತರಬೇತಿ ನೀಡಿ ಸಾವಿರಾರು ಜನರಿಗೆ ಕಲೆಯನ್ನು ಧಾರೆ ಎರೆದು ಇಂದಿಗೂ ಜನಪದ ಕಲೆ ಉಳಿಸಲು ತಮ್ಮ ಸಂಪೂರ್ಣ ಕುಟುಂಬವನ್ನು ತೊಡಗಿಸಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಕಲೆಗಳನ್ನು ನಾವು ನೀವು ಉಳಿಸುವ ಮೂಲಕ ಯುವಜನತೆಗೆ ಪರಿಚಯಿಸಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲಕ್ಷ್ಮಿ ರಾಮಪ್ಪ ಮಾತನಾಡಿ, ರಾಜ್ಯ, ರಾಷ್ಟçಮಟ್ಟದ ಸನ್ಮಾನ, ಗೌರವದ ಜತೆಯಲ್ಲಿ ತವರು ಜಿಲ್ಲೆಯಲ್ಲಿಯೂ ಆಗುತ್ತಿರುವ ಸನ್ಮಾನ ಹೆಮ್ಮೆ ತಂದಿದೆ. ಇಂದಿಗೂ ಜನಪದ ಕಲೆ ಕಲಿಯಲು ಯಾರಿಗಾದರೂ ಆಸಕ್ತಿ ಇದ್ದರೆ ಅವರಿಗೆ ನಮ್ಮ ಮನೆಯಲ್ಲಿ ತರಬೇತಿ ನೀಡುತ್ತೇನೆ ಎಂದರು.
ವೀರಗಾಸೆ ಕಲಾವಿದೆ ಶಿಲ್ಪಾ, ಶಿವಕುಮಾರ್, ನಮ್ಮ ಟಿವಿಯ ಶ್ರೀಕಾಂತ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…