ಜೆ.ಸಿ.ಐ. ಶಿವಮೊಗ್ಗ ಸಹ್ಯಾದ್ರಿ, ರೋಟರಿ ಶಿವಮೊಗ್ಗ ಪೂರ್ವ ನೆಪ್ಚೂನ್ ಆಟೋವರ್ಕ್ಸ್ ಹಾಗೂ ಎಸ್.ಎನ್. ಎಂಟರ್ಪ್ರೈಸಸ್ ಸಂಸ್ಥೆ ವತಿಯಿಂದ “ವಿಶ್ವ ರಕ್ತದಾನಿಗಳ ದಿನಾಚರಣೆ” ಅಂಗವಾಗಿ ರಕ್ತದಾನ ಹಾಗೂ ಮಾಹಿತಿ ಶಿಬಿರವನ್ನು ನೆಪ್ಚೂನ್ ಆಟೋವರ್ಕ್ಸ್ನಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯರಾದ ಶ್ರೀಯುತ ಡಿ.ಎಸ್. ಅರುಣ್‌ರವರು ಉದ್ಘಾಟಿಸಿ ಮಾತನಾಡುತ್ತಾ, ಜೀವ ಪೋಷಿಸುವ ರಕ್ತದಾನ ಎಲ್ಲಾ ದಾನಗಳಿಗಿಂತ ಶ್ರೇಷ್ಠದಾನವಾಗಿದೆ ಎಂದರು.

ರಕ್ತದ ಕೊರತೆ ನೀಗಿಸಲು, ಯುವಕರು ರಕ್ತದಾನದಲ್ಲಿ ಮುಂದಾಗಬೇಕು ಮೂಢನಂಬಿಕೆ ಬಿಟ್ಟು,ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಅಭಿವೃದ್ಧಿಯಾಗುತ್ತದೆ.ಅಲ್ಲದೆ,ಉತ್ತಮ ಆರೋಗ್ಯ ಹೊಂದಬಹುದು ಇದರಿಂದ ದಾನಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.ಈ ಒಂದು ವರ್ಷದಲ್ಲಿ ಜೆ.ಸಿ.ಐ. ಸಹ್ಯಾದ್ರಿ ಹಾಗೂ ನೆಪ್ಚೂನ್ ಆಟೋ ವರ್ಕ್ಸ್ನವರು ೨೨೮ ಯೂನಿಟ್ ರಕ್ತದಾನ ಮಾಡಿ ಮಾನವೀಯತೆಯನ್ನು ಮೆರೆದಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ರೋಟರಿ ರಕ್ತನಿಧಿಯಿಂದ, ಸೇವಾ ಪುರಸ್ಕಾರ ಪತ್ರವನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೆ.ಸಿ.ಐ. ಸಹ್ಯಾದ್ರಿಯ ಅಧ್ಯಕ್ಷರಾದ ಸತೀಶ್ ಚಂದ್ರ ಮಾತನಾಡುತ್ತಾ, ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಮಾಡುವ ಮೂಲಕ ಹೃದಯಾಘಾತವಾಗುವುದನ್ನು ಶೇ.೮೦ರಷ್ಟು ಕಡಿಮೆ ಮಾಡಬಹುದು ಮತ್ತು ರಕ್ತದ ಒತ್ತಡ ಮಧುಮೇಹದಂತಹ ರೋಗಗಳನ್ನು ದೂರವಿಡಲು ರಕ್ತದಾನ ಸಹಕಾರಿಯಾಗಿದೆ ಎಂದು ತಿಳಿಸಿದರು. ಶಿಬಿರದಲ್ಲಿ ಎಲ್ಲಾ ಕಾರ್ಮಿಕರು, ಸಿಬ್ಬಂಧಿ ವರ್ಗದವರು ರಕ್ತದಾನ ಮಾಡಿದರು. ಪ್ರತಿ ತಿಂಗಳು ನಮ್ಮ ಸಂಸ್ಥೆಯ ವತಿಯಿಂದ ನಿರಂತರವಾಗಿ ರಕ್ತದಾನ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಜಿಲ್ಲಾ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಿ. ವಿಜಯ್‌ಕುಮಾರ್ ಮಾತನಾಡುತ್ತಾ, ರಕ್ತದಾನದಿಂದ ಧೀರ್ಘಯುಷ್ಯವುಳ್ಳರಾಗಿ ನಮ್ಮ ದೇಹದಲ್ಲಿರುವ ಅನೇಕ ಖಾಯಿಲೆಗಳ ಬಗ್ಗೆ ಮಾಹಿತಿ ತಿಳಿಯುತ್ತದೆ. ರಕ್ತದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ ಎಲ್ಲಾ ಯುವಕರು ರಕ್ತದಾನ ಮಾಡುವುದರ ಮುಖಾಂತರ ಸಮಾಜದಲ್ಲಿ ಶ್ರೇಷ್ಠದಾನಿಗಳಾಗೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ, ಜೆ.ಸಿ.ಐ.ನ ಕಿಶೋರ್, ಅನುಷ್‌ಗೌಡ, ಸತೀಶ್, ಮಂಜುನಾಥ್ ಎನ್.ಬಿ., ಗುರು, ಗೋಪಿ, ಮತ್ತು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಮಾಜಿ ಅಧ್ಯಕ್ಷ ಜೆ.ಆರ್. ವಾಸುದೇವ್ ಇವರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…