ಭಾರತೀಯ ಜನಸಂಘದ ಹುಟ್ಟಿಗೆ ಕಾರಣೀಭೂತರಾದ ಪ್ರಮುಖರು ಶ್ರೀ ಡಾಕ್ಟರ್ ಶ್ಯಾಮಪ್ರಸಾದ್ ಮುಖರ್ಜಿ ಯವರ ಬಲಿದಾನದ ದಿನವನ್ನು ಇಂದು ಪ್ರೇರಣಾ ಸಂಘಕಾರ್ಯಾಲಯದಲ್ಲಿ ಆಚರಿಸಲಾಯಿತು. ಕಾಶ್ಮೀರದ ವಿಚಾರದಲ್ಲಿ ಮುಖರ್ಜಿಯವರ ಬದ್ಧತೆಯನ್ನು ಸ್ಮರಿಸಲಾಯಿತು. ಏಕ್ ದೇಶ್ ಮೇ ದೋ ವಿಧಾನ್, ದೋ ಪ್ರಧಾನ್, ದೋ ನಿಶಾನ್, ನಹಿ ಚಲೇಂಗೆ ನಹಿ ಚಲೇಂಗೆ ಎನ್ನುವುದು ಮುಖರ್ಜಿಯವರ ಘೋಷವಾಕ್ಯವಾಗಿದ್ದಿತ್ತು.
1947 ರ ಹೊತ್ತಗೆ ದೇಶದಲ್ಲಿರುವ ಅನೇಕ ಸಣ್ಣ ಪುಟ್ಟ ಸಂಸ್ಥಾನಗಳನ್ನು ರಾಷ್ಟ್ರದ ಹಿತಕ್ಕಾಗಿ ಒಟ್ಟುಗೂಡಿಸುವುದರರಲ್ಲಿ ಮುಖರ್ಜಿಯವರ ಪಾತ್ರವು ವಿಶೇಷವಾಗಿತ್ತು ಎನ್ನುವುದನ್ನು ಶ್ರೀ ದಿನೇಶ್ ಭಾರತೀಪುರ ನೆನಪಿಸಿದರು.
ಮುಖರ್ಜಿಯವರು ಕಾಶ್ಮೀರದ ವಿಚಾರದಲ್ಲಿ , ಅಂದಿನ ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದ್ದರು.
ಹೀಗೆ ಮುಖರ್ಜಿಯವರ ಆದರ್ಶಗಳನ್ನು ನೆನಪಿಕೊಳ್ಳುವುದರ ಮೂಲಕ ಅವರ ಬಲಿದಾನದ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಗೌರವಾಧ್ಯಕ್ಷರಾದ ಶ್ರೀ ಎಂ ಎ ಪ್ರಭಾಕರ್, RSS ನ ಪ್ರಾಂತೀಯ ಕಾರ್ಯಕಾರಿಣಿ ಸದಸ್ಯರಾದ ಶ್ರೀ ದಿನೇಶ್ ಜಿ ಭಾರತೀಪುರ, ಬಿಜೆಪಿ ತೀರ್ಥಹಳ್ಳಿ ಮಂಡಲದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಬಾಳೆಬೈಲು , ಮಹಿಳಾ ಮೋರ್ಚಾ ಅಧ್ಯಕ್ಷರಾದ ಸವಿತಾ ಉಮೇಶ್, ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಜ್ಯೋತಿ ಮೋಹನ್ , ಜ್ಯೋತಿ ಗಣೇಶ್ ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153