BREAKING NEWS…

ಶಿವಮೊಗ್ಗದ ಪೆಸಿಟ್ ಕಾಲೇಜ್ ಹತ್ತಿರ ಇರುವ ಶಕ್ತಿ ಧಾಮ ಲೇಔಟ್ ಎದುರುಗಡೆ ಎರಡು ಕಾರುಗಳು ಡಿಕ್ಕಿಯಾಗಿದೆ.

ಸಾಗರದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಸ್ವಿಫ್ಟ್ ಕಾರು ಶಕ್ತಿದಾಮ ಬಳಿ ತಿರುವಿನಲ್ಲಿ ಬಲ ತಿರುವು ಪಡೆಯುತ್ತಿದ್ದ ಮತ್ತೊಂದು ಕಾರನ್ನು ತಪ್ಪಿಸಲು ಹೋಗಿ ನಿಂತಿದ್ದ ವ್ಯಾಗನಾರ್ ಕಾರಿಗೆ ಡಿಕ್ಕಿಯಾಗಿದೆ. ವ್ಯಾಗನಾರ್ ಕಾರಿನಲ್ಲಿರುವ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಶಕ್ತಿಧಾಮದ ಎದುರಿನಲ್ಲಿರುವ ತಿರುವಿನಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ವರದಿ ಮಂಜುನಾಥ್ ಶೆಟ್ಟಿ…