
ಶಿವಮೊಗ್ಗ: ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ನಡೆಯುತ್ತಿರುವ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಬಾರಿ ಸುಮಾರು 31 ಕ್ಕೂ ಅಧಿಕ ರ್ಯಾಂಕ್ ಹಾಗೂ ವಿಶೇಷ ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಸಂಸ್ಥೆಗೆ, ತಮ್ಮ ತಮ್ಮ ಕಾಲೇಜುಗಳಿಗೆ ಕೀರ್ತಿ ತಂದಿದ್ದಾರೆ.

ಇಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಚೇರಿಯಲ್ಲಿ ಆಡಳಿತ ಮಂಡಳಿ ಆಯೋಜಿಸಿದ್ದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಶಾಲೆಯ ಶಿಕ್ಷಕರು ಹಾಗೂ ತಮ್ಮ ಪೋಷಕರ ನಡುವೆ ಹಂಚಿಕೊಂಡರು.ಎನ್ಇಎಸ್ ಅಡಿಯಲ್ಲಿ ಕಮಲಾ ನೆಹರೂ ಕಾಲೇಜ್, ಎ.ಟಿ.ಎನ್.ಸಿ. ಕಾಲೇಜ್, ಎಸ್.ಆರ್.ಎನ್.ಎಂ. ಕಾಲೇಜ್, ಎನ್ಇಎಸ್ ಅಡ್ವಾನ್ಸ್ ಸ್ಟಡೀಸ್ ಕಾಲೇಜ್, ಎ.ಟಿ.ಎನ್.ಸಿ. ಸಂಜೆ ಕಾಲೇಜ್, ಕೋಣಂದೂರಿನ ಪ್ರಥಮ ದರ್ಜೆ ಕಾಲೇಜ್ ಹಾಗೂ ಹೈಸ್ಕೂಲ್ ನಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕಮಲಾ ನೆಹರೂ ಕಾಲೇಜಿನ ಬಿಕಾಂನಲ್ಲಿ ಎಸ್.ವಿ. ಕೌಶಲ್ಯ 2 ನೇ ರ್ಯಾಂಕ್, ಎ. ಸುಷ್ಮಿತಾ 3 ನೇ ರ್ಯಾಂಕ್, ಎಸ್.ಆರ್. ಅನಘಾ 4 ನೇ ರ್ಯಾಂಕ್, ಅಫ್ಜಲ್ ಸುಲ್ತಾನಾ 5 ನೇ ರ್ಯಾಂಕ್, ಬಿ.ಪಿ. ಪಂಕಜಾ 8 ನೇ ರ್ಯಾಂಕ್ ಪಡೆದರೆ, ಯೋಷಿತಾ ಎಸ್. ಸೊನಾಲೆ ಹಾಗೂ ಐಚ್ಛಿಕ ಇಂಗ್ಲಿಷ್ ಸಾದಿಯಾ ಲಮಿಜ್, ಉರ್ದು ವಿಷಯದಲ್ಲಿ ಆರ್ಶಿಯಾ, ಅಲ್ಮನ್ ಸಾನಿಯಾ, ಅಜೀರ್ ಫರ್ವೀನ್, ಹೀನಾ ಕೌಸರ್ ಅತಿಹೆಚ್ಚು ಅಂಕ ಪಡೆದು ವಿಶೇಷ ಚಿನ್ನದ ಪದಕ ಪಡೆದಿದ್ದಾರೆ.

ಬಿಕಾಂ ಪದವಿಯಲ್ಲಿ ಎ.ಟಿ.ಎನ್.ಸಿ. ಕಾಲೇಜಿನ ಮೇಘನಾ ವಿ. 1 ನೇ ರ್ಯಾಂಕ್, ಪ್ರಮೋದ್ ಆರ್. 4 ನೇ ರ್ಯಾಂಕ್, ಪ್ರಿಯಾಂಕಾ ಜಿ. 7 ನೇ ರ್ಯಾಂಕ್, ನಂದೀಶ್ ಬಿ. ಹೊಸಂಗಡಿ 9 ನೇ ರ್ಯಾಂಕ್, ಮೈತ್ರಿ ಜೆ. 10 ನೇ ರ್ಯಾಂಕ್ ಪಡೆದಿದ್ದಾರೆ. ಹಾಗಾಗಿ, ಮೊದಲ 10 ರ್ಯಾಂಕ್ ಗಳು ಕೂಡ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಬಂದಿರುವುದು ವಿಷೇಷವಾಗಿದೆ. ಬಿಬಿಎ ಪದವಿಯಲ್ಲಿ ಹೆಚ್.ಎಂ. ಬಸವರಾಜ್ 4 ನೇ ರ್ಯಾಂಕ್, ಪ್ರಿಯಾಂಕಾ 4 ನೇ ರ್ಯಾಂಕ್ ಪಡೆದರೆ, ಹಿಂದಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಮನಾಲಿ ವಿಶೇಷ ಚಿನ್ನದ ಪದಕ ಪಡೆದಿದ್ದಾರೆ. ಎಸ್.ಆರ್.ಎನ್.ಎಂ. ಕಾಲೇಜಿನ ಬಿಸಿಎ ಪದವಿಯಲ್ಲಿ ಎಂ.ಪಿ. ಸಮೀಕ್ಷಾ 2 ನೇ ರ್ಯಾಂಕ್, ಎನ್.ಪೈ. ನಿಶಾಂತ್ 6 ನೇ ರ್ಯಾಂಕ್, ಜಿ.ಆರ್. ಶಿವಕುಮಾರ್ 10 ನೇ ರ್ಯಾಂಕ್ ಪಡೆದರೆ, ಬಿಎಸ್ಸಿ ಪದವಿಯಲ್ಲಿ ವಿನ್ಯಾ ಎಂ.ಎಂ. 10 ನೇ ರ್ಯಾಂಕ್ ಪಡೆದಿದ್ದಾರೆ. ಹಾಗೆಯೇ ಮೈಕ್ರೋ ಬಯಾಲಜಿಯಲ್ಲಿ ಅತಿಹೆಚ್ಚು ಅಂಕ ಪಡೆದ ಎಸ್.ಹೆಚ್. ಸುಪ್ರಿಯಾ ವಿಶೇಷ ಚಿನ್ನದ ಪದಕ ಪಡೆದಿದ್ದಾರೆ.

ಎನ್ಇಎಸ್ ಅಡ್ವಾನ್ಸ್ ಸ್ಟಡೀಸ್ ಕಾಲೇಜಿನ ಬಿಬಿಎ ಪದವಿಯಲ್ಲಿ ಬಿ.ಯು. ನೇಹಾ 1 ನೇ ರ್ಯಾಂಕ್, ಜುನೈದ್ ಅಹಮ್ಮದ್ 3 ನೇ ರ್ಯಾಂಕ್, ಕೆ.ಎಸ್. ಅನ್ವಿತಾ 9 ನೇ ರ್ಯಾಂಕ್ ಹಾಗೂ ಬಿಕಾಂನಲ್ಲಿ ಸಾಕ್ಷಿಕೆ ಖಾತ್ರಿ 2 ನೇ ರ್ಯಾಂಕ್ ಪಡೆದಿದ್ದಾರೆ. ಎ.ಟಿ.ಎನ್.ಸಿ. ಸಂಜೆ ಕಾಲೇಜಿನ ಬಿಕಾಂ ಪದವಿಯಲ್ಲಿ ಕೆ.ಆರ್. ರಾಹುಲ್ 6 ನೇ ರ್ಯಾಂಕ್ ಪಡೆದಿದ್ದಾರೆ. ಕೋಣಂದೂರಿನ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ಪದವಿ ಪರೀಕ್ಷೆಯಲ್ಲಿ ಅಜೀಜ್ ಸೇಠ್ ಹೆಸರಿನ ಚಿನ್ನದ ಪದಕವನ್ನು ಮೊಹಮ್ಮದ್ ಆದಿಲ್ ಪಡೆದಿದ್ದಾರೆ. ಹೈಸ್ಕೂಲ್ ವಿಭಾಗದಲ್ಲಿ ಮುಕ್ತಾ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯದಲ್ಲಿಯೇ ಎರಡನೇ ಸ್ಥಾನ ಪಡೆದಿದ್ದಾರೆ.ರ್ಯಾಂಕ್ ಪಡೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡು ನಮ್ಮ ಸಾಧನೆಗಳಿಗೆ ತಂದೆ –ತಾಯಿಗಳು, ಗುರುಗಳು ಮತತ್ಉ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರಣವಾಗಿದೆ. ಮುಂದೆಯೂ ಈ ಸಾಧನೆಯನ್ನು ಕಾಪಾಡಿಕೊಳ್ಳುವುದು ನಮ್ಮ ಇಚ್ಛೆಯಾಗಿದೆ. ನಮ್ಮ ತಂದೆ, ತಾಯಿಗಳ ಕಷ್ಟವನ್ನು ರ್ಯಾಂಕ್ ಪಡೆಯವುದರ ಮೂಲಕ ಅವರ ಕಣ್ಣಲ್ಲಿ ಸಂತಸವನ್ನು ಕಂಡಿದ್ದೇವೆ. ಮುಂದೆ ಒಳ್ಳೆಯ ಸರ್ಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡುವ ಮೂಲಕ ಪಡೆಯಬೇಕು ಎಂಬುದು ನಮ್ಮ ಇಚ್ಛೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಡಾ. ಹೆಚ್.ಎಂ. ನಾಗಭೂಷಣ್, ಡಾ.ಕೆ.ಟಿ. ಪಾರ್ವತಮ್ಮ, ಡಾ.ಕೆ.ಎಲ್. ಅರವಿಂದ್, ಬಿ.ಎಸ್. ಶಿವಪ್ರಸಾದ್ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣರಾವ್, ಉಪಾಧ್ಯಕ್ಷ ಸಿ.ಆರ್. ನಾಗರಾಜ್, ಕಾರ್ಯದರ್ಶಿ ಎಸ್.ಎನ್. ನಾಗರಾಜ್, ಸಹಕಾರ್ಯದರ್ಶಿ ಡಾ.ಪಿ. ನಾರಾಯಣ, ಅಶ್ವತ್ಥನಾರಾಯಣ ಶೆಟ್ಟಿ ಇದ್ದರು.