ಶಿವಮೊಗ್ಗ: ಸಾಧನೆಗೆ ಹೆಸರು ಮಾಡಿರೋ ಜಿಲ್ಲೆ ಎಂದರೆ ಅದು ಶಿವಮೊಗ್ಗ ಜಿಲ್ಲೆ.ಇಂಥಹ ಜಿಲ್ಲೆಯಲ್ಲಿ ಯಾರ ಕಣ್ಣಿಗೂ ಕಾಣದೆ ಯಾವ ಪಲಾಪೇಕ್ಷೆಯೂ ಬಯಸದೆ ಎಲೆಮರೆಯಲ್ಲಿ. ಸೇವೆ ಯನ್ನು ಮಾಡುತ್ತಿರೋ ಪಡ್ಡು ಅಣ್ಣಪ್ಪರಿಗೆ ಎಎಪಿ ವತಿಯಿಂದ ಸನ್ಮಾನಿಸಲಾಯಿತು.

ಪಡ್ಡು ಅಣ್ಣಪ್ಪ ಸುಮಾರು 20 ವರ್ಷಗಳಿಂದ ಯಾರಿಗೂ ಕಾಣದೆ ಪ್ರಚಾರವನ್ನು ಬಯಸದೆ, ನಿತ್ಯವೂ ಸುಮಾರು 20 ಹಸಿದ ಹೊಟ್ಟೆಗಳಿಗೆ ಅನ್ನ ನೀಡೋ ಮಹತ್ ಕಾರ್ಯವನ್ನು ಮಾಡುತ್ತಿದ್ದಾರೆ. ಇಷ್ಟೆ ಮಾತ್ರವಲ್ಲದೇ ಸಂಜೆಯ ವೇಳೆಗೆ ಗೋವುಗಳಿಗೆ ಆಹಾರದ ವ್ಯವಸ್ಥೆ ಮಾಡುತ್ತಿದ್ದು ಈವರ ಈ ಸಾಧನೆಯನ್ನು ಜನರಿಗೆ ಮುಟ್ಟಿಸುವ ಗುರಿಯಿಂದ ಎಎಪಿ ಮುಖಂಡರು ಹಾಗೂ ಶಿವಮೊಗ್ಗದ ಮಾಜೀ ಮೇಯರ್ ಏಳುಮಲೈ ಕೇಬಲ್ ಬಾಬು ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮ ಶಿವಮೊಗ್ಗದ ಗೋಪಿ ವೃತ್ತದಲ್ಲಿ ನಡೆಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಪಡ್ಡು ಅಣ್ಣಪ್ಪನವರು ಸನ್ಮಾನ ಸ್ವಿಕರಿಸಿ ಎಎಪಿ ಪಕ್ಷಕ್ಕೆ ಧನ್ಯವಾದಗಳನ್ನು ಹೇಳಿದರು. ಇವರ ಜೊತೆಗೆ ಅಣ್ಣಪ್ಪನವರ ತಾಯಿಯವರು ಭಾಗವಹಿಸಿದ್ದರು ಅವರಿಗೂ ಸನ್ಮಾನಿಸಲಾಯಿತು.

ಕಾರ್ಯಕ್ರಮ ದಲ್ಲಿ ಎಎಪಿ ಮುಖಂಡರಾದ ಏಳುಮಲೈ(ಕೇಬಲ್ ಬಾಬು) ಕಿರಣ್. ಕೆ, ಆಲ್ಬರ್ಟ್ ವಿಜಯ್, ಪೀಟರ್ ಸೇರಿದಂತೆ ಮಹಿಳಾ ಮುಖಂಡರಾದ ಶ್ರವಂತಿ ಬಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…