
ಸಾಮಾಜಿಕ ಕಳಕಳಿ ಮೂಲಕ ಅನೇಕ ಯುವಕರ ಮನ ಗೆದ್ದಿರುವ ವಾಲ್ಮೀಕಿ ಯುವ ಪಡೆ ಶಿವಮೊಗ್ಗದ ಜಿಲ್ಲಾಧ್ಯಕ್ಷರಾದ ಹರೀಶ್ ಆರ್ ರವರು ಇಂದು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಗಾಡಿಕೊಪ್ಪದ ಸರ್ಕಾರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಲೇಖನಿ ನೀಡುವ ಮೂಲಕ ತಮ್ಮ ಅನುಯಾಯಿಗಳಿಗೆ ಆದರ್ಶರಾದರು. ಈ ಸಂದರ್ಭದಲ್ಲಿ ಪುನೀತ್ ಗಿರೀಶ್ ಸಾಯಿರಾಮ್ ಮನೋಜ್ ಹಾಗೂ ಇನ್ನಿತರರು ಭಾಗವಹಿಸಿದ್ದರು.