ಶಿವಮೊಗ್ಗ: ಇಂದು ಸಂಜೆಯ ವೇಳೆಗೆ ಶಿವಮೊಗ್ಗ ನಗರದ ವಿದ್ಯಾನಗರ ಮುಖ್ಯರಸ್ತೆ ಹಾಗೂ ಅಕ್ಕಪಕ್ಕದ ಬಡಾವಣೆ ಯಲ್ಲಿ ಎಎಪಿ ಭರ್ಜರಿ ಪ್ರಚಾರ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಸ್ಥಳೀಯ ಮಹಿಳೆಯರು ಹಾಗು ಸಾರ್ವಜನಿಕರು ಎಎಪಿ ಪಕ್ಷದ ಸದಸ್ಯರನ್ನು ಕಂಡು ಭಾವುಕರಾದರು.

ಹತ್ತಾರು ವರ್ಷಗಳಿಂದ ಈ ಜನರು ಇಲ್ಲಿಯೇ ವಾಸವಾಗಿದ್ದು ಇವರು ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಬಗ್ಗೆ ಅಳಲನ್ನು ತೋರಿಕೊಂಡರು.ಇವರ ಈ ಮಾತುಗಳನ್ನು ಆಲಿಸಿದ ಎಎಪಿ ಮುಖಂಡ ಹಾಗೂ ಶಿವಮೊಗ್ಗ ಮಾಜೀ ಮೇಯರ್ ಆಗಿರುವ ಏಳುಮಲೈ(ಕೇಬಲ್ ಬಾಬು) ಈ ಬಡಜನರ ಸಮಸ್ಯೆ ಯನ್ನು ಬಗೆಹರಿಸಲು ಇವರೊಂದಿಗೆ ಕೈಜೊಡಿಸಿ ಹೋರಾಟ ನಡೆಸುವುದಾಗಿ ಭರವಸೆಯನ್ನು ಕೊಟ್ಟರು.

ಏಳುಮಲೈಯವರ ಮಾತುಗಳನ್ನು ಕೇಳಿದ ಮಹಿಳೆಯರು ಹಾಗೂ ಸಾರ್ವಜನಿಕರು ಆ ತಕ್ಷಣಕ್ಕೆ ಎಎಪಿ ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡರು, ಹೀಗೆ ಪಕ್ಷ ಸೇರಿದವರ ಸಂಖ್ಯೆ ಸುಮಾರು 80 ಜನರದಾಗಿತ್ತು.ಇದೇ ವೇಳೆ ಮಾತನಾಡಿದ ಏಳುಮಲೈ ನಾವುಗಳು ಜನರ ಮನೆಯ ಬಾಗಿಲಿಗೆ ಹೋದಾಲೆ ನಿಜವಾದ ಸಮಸ್ಯೆ ಗಳ ಅರಿವಾಗೊದು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಅಧಿಕಾರದ ಗದ್ದುಗೆ ಅನುಭವಿಸುತ್ತುರೋ ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಕೇವಲ ಅವರವರ ವೈಯಕ್ತಿಕ ಏಳಿಗೆ ಮಾಡಿಕೊಂಡಿದಾರೆ ಹೊರತು ಜನರ ಮೂಲಭೂತ ಬೇಡಿಕೆಗಳನ್ನು ಈಡೆರಿಸಿಲ್ಲಾ ಎಂದರು.

ಇದೇ ವೇಳೆ ಮಾತನಾಡಿದ ಎಎಪಿ ಯುವ ಮುಖಂಡ ಕಿರಣ್. ಕೆ ದೆಹಲಿಯಲ್ಲಿ ಕೇರ್ಜಿವಾಲ್ ಅವರು ನುಡಿದಂತೆ ನಡೆದಿದ್ದಾರೆ. ದೆಹಲಿಯಂತೆ ಕರ್ನಾಟಕದಲ್ಲೂ ಸ್ವಚ್ಚ ಹಾಗೂ ಪಾರದರ್ಶಕ ಆಡಿತಕ್ಕಾಗಿ ನಮ್ಮ ರಾಜ್ಯದಲ್ಲೂ ಮುಂದಿನ ದಿನಗಳಲ್ಲಿ ಎಎಪಿಯನ್ನು ಜನರು ಅದಿಕಾರಕ್ಕೆ ತರಲ್ಲಿದಾರೆ ಎನ್ನು ಬರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಏಳುಮಲೈ ( ಕೇಬಲ್ ಬಾಬು) ಯುವ ಮುಖಂಡರಾದ ಕಿರಣ್.ಕೆ ,ಆಲ್ಬರ್ಟ್ ವಿಜಯ್,ಶ್ರೀನಿವಾಸ್,ಮುರುಗನ್,ದಿಲೀಪ್,ಮಾರ್ಕ್ ಇವರೊಂದಿಗೆ ಮಹಿಳಾ ಮುಖಂಟರಾದ ಶ್ರವಂತಿ ಕೋಡ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…