ಶಿವಮೊಗ್ಗ ನಗರದ ಗುರುಪುರದಲ್ಲಿರುವ ಡೆಲ್ಲಿ ಇಂಟರ್ನ್ಯಾಷನಲ್ ಶಾಲೆಯಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಅಂತರಾಷ್ಟ್ರೀಯ ಯೋಗ ಪಟು, ಯೋಗ ರತ್ನ, ಯೋಗ ಸೇವಾ ಯೋಗ ಸಾಧನೆಯೆಂಬ ಇನ್ನೂ ಮೊದಲಾದ ಬಹುಮಾನಗಳಿಗೆ ಕಾರಣೀಭೂತರಾದ ಶ್ರೀ ವೆಂಕಟೇಶ ಆಚಾರ್ ಎನ್. ಪಿ ರವರು ಮಕ್ಕಳಿಗೆ ಯೋಗವನ್ನು ಮಾಡಿಸುವ ಮೂಲಕ ಯೋಗ ದಿನಾಚರಣೆಗೆ ಉತ್ತಮ ಮೆರುಗು ತಂದು ಕೊಟ್ಟರು. ಡೆಲ್ಲಿ ಇಂಟರ್ನ್ಯಾಷನಲ್ ಶಾಲೆಯ ಫೌಂಡರ್ ಡೈರೆಕ್ಟರ್ ಆದ ಶ್ರೀ ಜಗದೀಶ್ ಗೌಡ ಎಸ್.ಬಿ ರವರು ಯೋಗ ದಿನಾಚರಣೆ ಕುರಿತು ಯೋಗ ಮಾಡುವವರಿಗೆ ರೋಗ ದೂರ ಎಂದು ಮಕ್ಕಳಿಗೆ ಯೋಗದ ಮಹತ್ವ ತಿಳಿಸಿದರು.

ನಮ್ಮ ಶಾಲೆಯಲ್ಲಿ ಪ್ರತಿ ವಾರಕ್ಕೊಮ್ಮೆ ಕಡ್ಡಾಯವಾಗಿ ಯೋಗ ಶಿಬಿರವನ್ನು ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಜೊತೆಗೆ ಮಕ್ಕಳೊಂದಿಗೆ ಅವರು ಸಹ ಯೋಗವನ್ನು ಮಾಡುವ ಮೂಲಕ ಮಕ್ಕಳಿಗೆ ಯೋಗದ ಬಗ್ಗೆ ಕಾಳಜಿಗೆ ಮತ್ತು ಆಸಕ್ತಿಯನ್ನು ಹೆಚ್ಚಿಸಿದರು. ಈ ಸಂದರ್ಭದಲ್ಲಿ ಡೆಲ್ಲಿ ಇಂಟರ್ನ್ಯಾಷನಲ್ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…