ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕೊರೋನಾ 2ನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಸತತವಾಗಿ ಸಮಾಜಮುಖಿ ಕಾರ್ಯಗಳಾದ ಹಸಿದವರಿಗೆ ಅನ್ನ, ಅವಶ್ಯಕತೆ ಇರುವವರಿಗೆ ಐಸೋಲೇಷನ್ ಕಿಟ್, ರೇಷನ್ ಕಿಟ್ ಅಂಬುಲೆನ್ಸ್ ಸೇವೆ ರಕ್ತದ ಅವಶ್ಯಕತೆ ಇರುವವರಿಗೆ ರಕ್ತದಾನ ಇನ್ನೂ ಹತ್ತು ಹಲವು ನೊಂದ ಜನರ ಧ್ವನಿಯಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರ ಕರೆಯಂತೆ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಕನ್ನಡಿಗ ಶ್ರೀ.ಬಿ.ವಿ.ಶ್ರೀನಿವಾಸ್‌ರವರ ಆದೇಶದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ನಾಯಕರು ಹಾಗೂ ಮುಖಂಡರುಗಳ ಮಾರ್ಗದರ್ಶನದಂತೆ ಕೆಲಸವನ್ನು ಮಾಡಿದ್ದಾರೆ . ಮೊದಲನೆದಾಗಿ ಎರಡು ದಿನ ವೀಕೆಂಡ್ ಕರ್ಫ್ಯೂ ಹಾಗೂ 55 ದಿನಗಳ ಕಾಲ ಲಾಕ್‌ಡೌನ್ ಸಂದರ್ಭದಲ್ಲಿ ಹಸಿದವರಿಗೆ ಅನ್ನ ಎಂಬ ಕಾರ್ಯಕ್ರಮದಡಿ ಆಹಾರದ ಅವಶ್ಯಕತೆ ಇರುವವರಿಗೆ ದೂರದ ಊರುಗಳಿಂದ ಬಂದಂತಹ ವಲಸೆ ಕಾರ್ಮಿಕರಿಗೆ ನಗರದ ಹಲವು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಸಂಬ೦ಧಿಗಳಿಗೆ ಹಾಗೂ ನಗರದ ಹಲವು ಭಾಗಗಳಲ್ಲಿ ಇರುವಂತಹ ನಿರಾಶ್ರಿತರಿಗೆ ಆಹಾರದ ಪೊಟ್ಟಣಗಳನ್ನು ಹಾಗೂ ನೀರಿನ ಬಾಟಲ್‌ಗಳನ್ನು ವಿತರಣೆ ಮಾಡಿದರು.

ಏಪ್ರಿಲ್ 24 ರಿಂದ ಜೂನ್ 20ರವರೆಗೆ ಒಟ್ಟು 57 ದಿನಗಳ ಕಾಲ ಹಸಿದವರಿಗೆ ಅನ್ನ ಕಾರ್ಯಕ್ರಮ ಕ್ರಮವನ್ನು ಜಿಲ್ಲಾದ್ಯಂತ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು ಪದಾಧಿಕಾರಿಗಳು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಅತ್ಯಂತ ಉತ್ಸಾಹಕರಾಗಿ ನಡೆಸಿದ್ದು, ಶಿವಮೊಗ್ಗ ನಗರದಲ್ಲಿ 15ಸಾವಿರಕ್ಕೂ ಹೆಚ್ಚೂ ಹಾಗೂ ಇನ್ನುಳಿದಂತೆ ತಾಲ್ಲೂಕು ಮಟ್ಟದಲ್ಲಿ 15ಸಾವಿರ ಒಟ್ಟು ಜಿಲ್ಲಾದ್ಯಂತ 30 ಸಾವಿರಕ್ಕೂ ಹೆಚ್ಚು ಜನರಿಗೆ ಆಹಾರವನ್ನು ನೀಡುವಂತಹ ಕಾರ್ಯ ಮಾಡಿದ್ದು
ಅದರಂತೆ ಐಸೋಲೇಶನ್ ಕಿಟ್‌ನ್ನು ಜಿಲ್ಲಾದ್ಯಂತ 5ಸಾವಿರಕ್ಕೂ ಅಧಿಕ ನಮ್ಮ ರಾಜ್ಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾದ ಶ್ರೀ.ರಕ್ಷಾರಾಮಯ್ಯನವರ ಸಹಕಾರದೊಂದಿಗೆ ವಿತರಿಸಿದ್ದು, ಹಾಗೆಯೇ ರಾಜ್ಯ ಯುವ ಕಾಂಗ್ರೆಸ್‌ನ ನಾಯಕರಾದ ಶ್ರೀ.ಮಹ್ಮದ್ ನಲ್‌ಪಾಡ್‌ರವರ ಸಹಕಾರೊಂದಿಗೆ ಆಂಬುಲೆನ್ಸ್ ಸೇವೆ ನೀಡಿ ಸಾವಿರಾರು ರೋಗಿಗಳಿಗೆ ನೆರವಾಗಿದ್ದಾರೆ. ಶಿವಮೊಗ್ಗ ಜಿಲ್ಲಾದ್ಯಂತ 4 ಸಾವಿರಕ್ಕೂ ಅಧಿಕ ರೇಷನ್ ಕಿಟ್‌ಗಳನ್ನು ವಿಶೇಷವಾಗಿ ಶಿವಮೊಗ್ಗ ನಗರದಲ್ಲಿ 85ಕ್ಕೂ ಹೆಚ್ಚು ಹೆಚ್.ಐ.ವಿ.ಸೋಂಕಿತರಿಗೆ ರೇಷನ್ ಕಿಟ್ ನೀಡುವುದರೊಂದಿಗೆ ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಹಾಗೂ ನೊಂದವರ ಪರವಾಗಿ ಸಹಾಯಹಸ್ತ ಚಾಚುವ ಕಾರ್ಯವನ್ನು ಮಾಡಿದರು .

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಪಿ ಗಿರೀಶ್ , ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ಹಾಗೂ ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ , ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್ ಕುಮರೇಶ್ , ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಈ.ಟಿ ನಿತಿನ್ ರಾವ್ , ಯುವ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿಗಳಾದ ಆರ್ ಕಿರಣ್ , ಟಿ ವಿ ರಂಜಿತ್ , ಪುಷ್ಪಕ್ ಕುಮಾರ್ , ವೆಂಕಟೇಶ್ ಕಲ್ಲೂರ್ , ಅರುಣ್ ನವಲೆ , ರಾಹುಲ್ ಸೀಗೆಹಟ್ಟಿ , ಇರ್ಫಾನ್ ಇತರರು ಉಪಸ್ಥಿತರಿದ್ದರು .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALE & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153