ಶಿವಮೊಗ್ಗ: ನಗರದ ಗಾಡಿಕೊಪ್ಪದ ನಗರಸಭೆ ಮಾಜಿ ಸದಸ್ಯ ರಾಜಣ್ಣ ಅವರ ಪುತ್ರ ಅನಿಲ್(27) ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ತಡರಾತ್ರಿ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ತೀವ್ರ ಹೃದಯಾಘಾತಕ್ಕೆ ಒಳಗಾದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. 8 ತಿಂಗಳ ಹಿಂದೆಯಷ್ಟೇ ಅವರ ಮದುವೆಯಾಗಿತ್ತು. ಇಂದು ಮಧ್ಯಾಹ್ನ 2.30 ಕ್ಕೆ ಲಗಾನ್ ಕಲ್ಯಾಣ ಮಂದಿರ ಸಮೀಪದ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜೆಡಿಎಸ್ ಜಿಲ್ಲಾಧ್ಯಕ್ಷ ಎಮ್ ಶ್ರೀಕಾಂತ್ ರವರು ಮೃತನ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…