ರೋಟರಿ ಆ್ಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಸಹಯೋಗದಲ್ಲಿ ರೋಟರಿ ರಕ್ತನಿಧಿಯಿಂದ ಶಾಲಾ ಮಕ್ಕಳಿಗೆ ರಕ್ತದ ಗುಂಪು ತಪಾಸಣಾ (blood grouping) ಕಾರ್ಯಕ್ರಮ ಇಂದು ದುರ್ಗಿಗುಡಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಶಿವಮೊಗ್ಗ ಮಿಡ್ ಟೌನ್ ಮತ್ತು ವಿಧಾನ ಪರಿಷತ್ ಸದಸ್ಯರಾದ ರೋ. ಡಿ.ಎಸ್.ಅರುಣ್ ಉದ್ಘಾಟಿಸಿದರು.ನಂತರ ಮಾತನಾಡಿ ಮಕ್ಕಳು ಶಾಲಾ ದಿನಗಳಲ್ಲಿ ತಮ್ಮ ರಕ್ತದ ಗುಂಪು ತಿಳಿಯುವುದು ಅವಶ್ಯಕವಾಗಿದ್ದು ತುರ್ತು ಪರಿಸ್ಥಿತಿಯಲ್ಲಿ, ಅಪಘಾತವಾದ ಸಂದರ್ಭಗಳಲ್ಲಿ ತಕ್ಷಣವೆ ಚಿಕಿತ್ಸೆ ನೀಡಲು ಸಹಕಾರಿಯಾಗುವುದಲ್ಲದೇ ತಮ್ಮ ಮುಂದಿನ ಶೈಕ್ಷಣಿಕ ದಾಖಲೆಗಳಲ್ಲಿ ರಕ್ತದ ಗುಂಪನ್ನು ನಮೂದಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್ ಆ್ಯನ್ಸ್ ಘಟಕದ ಅಧ್ಯಕ್ಷೆ ಆ್ಯನ್ ಪ್ರತಿಭಾ ಅರುಣ್ ಮಾತನಾಡಿ ಒಬ್ಬ ವ್ಯಕ್ತಿಯ ರಕ್ತದಾನದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದ್ದು ಈ ಬಗ್ಗೆ ಮಕ್ಕಳಲ್ಲಿ ಶಾಲಾ ದಿನಗಳಲ್ಲಿಯೇ ಇದರ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದರಿಂದ ಕುಟುಂಬದಲ್ಲಿ ಆಕಸ್ಮಿಕ ಅವಗಢಗಳು ನಡೆದ ಸಂದರ್ಬದಲ್ಲಿ ಹೆಚ್ಚು ಉಪಕಾರಿಯಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಇನ್ನೆರಡು ದಿನಗಳಲ್ಲಿ ಆಯೋಜನೆಗೊಳ್ಳಲಿರುವ ರಕ್ತದಾನ ಶಿಬಿರದಲ್ಲಿ ಮಕ್ಕಳ ಪೋಷಕರು ಹೆಚ್ಚು ರಕ್ತದಾನ ಮಾಡಿ ನಮ್ಮ ಕಾರ್ಯಕ್ರಮದ ಉದ್ದೇಶವನ್ನು ಸಾರ್ಥಕ ಪಡಿಸಬೇಕು ಎಂದು ವಿನಂತಿಸಿದರು.
ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ತಮ್ಮ ರಕ್ತದ ಗುಂಪು ತಿಳಿಯುವಲ್ಲಿ ಈ ಕ್ಯಾಂಪ್ ಸಹಕಾರಿಯಾಗಿದ್ದು ಕೆಲವೇ ದಿನಗಳಲ್ಲಿ ಉಳಿದ ಎಲ್ಲಾ ಮಕ್ಕಳಿಗೆ ರಕ್ತದ ಗುಂಪು ತಪಾಸಣೆ ಮಾಡಿಸಿ ರಕ್ತದ ಗುಂಪು ತಿಳಿಸಿ ಐಡಿ ಕಾರ್ಡ್ ನೀಡುವುದಾಗಿ ಕ್ಲಬ್ ನ ಕಮ್ಯೂನಿಟಿ ಸರ್ವೀಸ್ ವಿಭಾಗದ ಶ್ರೀ ಮಂಜುನಾಥ್ ತಿಳಿಸಿದರು.

ದುರ್ಗಿಗುಡಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯರಾದ ಶ್ರೀ ಮಲ್ಯಾ ನಾಯ್ಕ್, ಹಾಗೂ ಶಿಕ್ಷಕಿಯರಾದ ನುಸ್ರತ್, ಜೆಸಿಂತಾ, ರಾಧಾ ಮತ್ತು ಭಾರತಿರವರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರಾದ ಶ್ರೀ ನಾಗರಾಜ್ ಶೆಟ್ಟರ್ ಮತ್ತು ಶ್ರೀ ಜನಾರ್ಧನ್ ಭಾಗಿಯಾಗಿದ್ದರು.
ರಕ್ತ ನಿಧಿ ಕೇಂದ್ರದ ಸ್ಮಿತಾ, ಅರುಣ್, ಪ್ರಶಾಂತ್, ರವಿ ರಕ್ತದ ಗುಂಪು ಪತ್ತೆ ಹಚ್ಚುವ ಕಾರ್ಯ ನಡೆಸಿಕೊಟ್ಟರು. ಕ್ಲಬ್ ನ ಕಾರ್ಯದರ್ಶಿ ರೋ.ಅನಿಲ್ ಪಿ.ಶೆಟ್ಟಿ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…