ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ ಶಿವಮೊಗ್ಗ ಭಾವನಾ ಲೀಜನ್ ನ ಅಧ್ಯಕ್ಷರಾದ ಸೀನಿಯರ್‌ ಪುಷ್ಪ ಶೆಟ್ಟಿರವರು ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ನ ಪ್ರಫ್ರಥಮ ಗೋಲ್ಡನ್ ಕಾಲರ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನ ಶಕ್ತಿನಗರದಲ್ಲಿನ ಕಲಂಗ್ಯಾನ್ ಸಭಾಂಗಣದದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು.

115 ಜನ ಸದಸ್ಯರನ್ನು ಸಂಸ್ಥೆಗೆ ಸೇರ್ಪಡಿಸದ್ದಲ್ಲದೇ, ಲೀಜನ್ ನ ಸರ್ವಾಂಗೀಣ ಬೆಳವಣಿಗೆಗಾಗಿ ಭಾವನಾ ಲೀಜನ್ ಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗೆ ಭಾಜನರಾದ ಸಂಸ್ಥೆಯ ಅಧ್ಯಕ್ಷರಾದ ಪುಷ್ಪಶೆಟ್ಟಿರವರಿಗೆ, ಕಾರ್ಯದರ್ಶಿ ಸುರೇಖ ಮುರಳೀಧರ್, ಉಪಾಧ್ಯಕ್ಷೆ ಹೇಮಾ ಅಪ್ಪಾಜಿ, ಖಜಾಂಚಿ ಭಾರತಿ ರಾಮಕೃಷ್ಣ, ಸಹ ಕಾರ್ಯದರ್ಶಿ ಮೃದುಲಾ ಮಂಜುನಾಥ್ ಹಾಗೂ ಸಮಸ್ತ ಸದಸ್ಯರು ಅಭಿನಂದಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…