ಶಿವಮೊಗ್ಗ,ಜೂ .30: ವಿದ್ಯುತ್ ದರ ಏರಿಕೆ ಮಾಡದಂತೆ ಆಗ್ರಹಿಸಿ ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಸರ್ವಜ್ಞ ವೃತ್ತದಲ್ಲಿರುವ ಮೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿ ಮೆಸ್ಕಾಂ ಇಇ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಜುಲೈ ತಿಂಗಳಿAದ ವಿದ್ಯುತ್ ದರ ಏರಿಕೆ ಮಾಡುವ ಪ್ರಸ್ತಾವನೆ ಚರ್ಚೆಯಲಿದ್ದು, ಜುಲೈ ತಿಂಗಳಿAದ ವಿದ್ಯುತ್ ದರ ಹೆಚ್ಚಿಗೆ ಮಾಡುವ ಎಲ್ಲ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರ ಕೂಡಲೇ ಗಮನವಹಿಸಿ ಎಸ್ಕಾಂಗಳು ವಿದ್ಯುತ್ ದರ ಹೆಚ್ಚಳ ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.ಜುಲೈ ತಿಂಗಳಿAದ ಪ್ರತಿ ತಿಂಗಳು 100 ಯೂನಿಟ್‌ಗೂ ಹೆಚ್ಚು ಯೂನಿಟ್ ಬಳಸುವ ಗ್ರಾಹಕರಿಗೆ ಪ್ರತಿ ತಿಂಗಳು 19 ರೂ.ನಿಂದ 31 ರೂ.ವರೆಗೂ ಹೆಚ್ಚಿಸಲು ಎಸ್ಕಾಂಗಳು ಮುಂದಾಗಿವೆ. ಯಾವುದೇ ಕಾರಣ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಬಾರದು ಎಂದು ಒತ್ತಾಯಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ನೇತೃತ್ವ ವಹಿಸಿರುವ ಬಿಜೆಪಿ ಸರ್ಕಾರಗಳಿಂದ ಈಗಾಗಲೇ ಪೆಟ್ರೋಲ್. ಡಿಸೆಲ್, ಸಿಲಿಂಡರ್ ಸೇರಿದಂತೆ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ಜನರು ಮತ್ತಷ್ಟು ಕಷ್ಟದಿಂದ ಜೀವನ ನಡೆಸುತ್ತಿದ್ದಾರೆ. ವಿದ್ಯುತ್ ದರ ಏರಿಕೆಯು ಬಡ ಮತ್ತು ಮಧ್ಯಮ ವರ್ಗದ ಜನರ ಜೀವನವನ್ನು ಮತ್ತಷ್ಟು ದುಸ್ತರ ಮಾಡಲಿದೆ. ಆದ್ದರಿಂದ ವಿದ್ಯುತ್ ದರ ಏರಿಸದಂತೆ ಸಂಬAಧಪಟ್ಟ ಎಸ್ಕಾಂಗಳಿಗೆ ರಾಜ್ಯ ಸರ್ಕಾರ ಸೂಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ರೆ, ರಾಜ್ಯ ಕಾಂಗ್ರೆಸ್ ನಾಯಕ ಕೆ.ದೇವೇಂದ್ರಪ್ಪ, ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಬಾಲಾಜಿ, ಯುವ ಮುಖಂಡರಾದ ಶರತ್, ವಿನೋದ, ಪ್ರದೀಪ್, ರಘು, ಪ್ರಮೋದ್, ರಾಘವೇಂದ್ರ, ಪುರಲೆ ಮಂಜು, ಸುರೇಶ್, ಪ್ರಮೋದ್, ಅರ್ಜುನ್, ಸಂದೀಪ, ಮಂಜುನಾಥ್, ದರ್ಶನ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಮೋಹನ್, ಶಿವಮೊಗ್ಗ ಗ್ರಾಮಂತರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭರತ್, ಚಂದನ್, ವಿನಯ್, ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…