ಶಿವಮೊಗ್ಗ,ಜೂ.30: ರಾಜಸ್ಥಾನದ ಉದಯಪುರದಲ್ಲಿ ಹಾಡುಹಗಲೇ ನಡೆದ ಅಮಾಯಕ ಹಿಂದೂ ಟೈಲರ್ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್-ಬಜರಂಗದಳ ಕಾರ್ಯಾಕರ್ತರು ಇಂದು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಿದರು.

ಕನ್ಹಯ್ಯಲಾಲ್ ಅವರನ್ನು ಮುಸ್ಲಿಂ ಭಯೋತ್ಪದಕರಾದ ಮಹಮದ್ ರಿಯಾಜ್ ಮತ್ತು ಮಹಮದ್ ಗೌಸ್ ಮುಸ್ಲಿಂ ಜಿಹಾದಿ ಮಾನಸಿಕತೆ ಹೊಂದಿ ದ್ವೇಷ ಭಾವನೆಯಿಂದ ಕೋಮು ಭಾವನ ಕೆರಳಿಸುವ ದುರುದ್ದೇಶ ಹಾಗೂ ಹಿಂದೂ ಸಮಾಜವನ್ನು ಭಯಭೀತಿಗೊಳಿಸುವ ದೃಷ್ಟಿಯಿಂದ ಮಾಡಿರುವ ಇಬ್ಬರು ಕೊಲೆಗಾರರಿಗೆ ಶೀಘ್ರ ಶಿಕ್ಷೆಗೆ ಗುರಿಪಡಿಸಲು ಆದೇಶಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರನ್ನ್ನು ಇದೆ ಕತ್ತಿಯಿಂದ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿರುವುದು ಇಡಿ ದೇಶ ಖಂಡಿಸುತ್ತದೆ. ರಾಜಸ್ಥಾನದ ಉದಯಪುರದ ಕನ್ನಯ್ಯಲಾಲ್ ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದು ಇಬ್ಬರು ಹಂತಕರಲ್ಲಿ ಮೊಹಮದ್ ಗೌಸ್ ಎಂಬುವನು ಬಟ್ಟೆ ಅಳತೆ ಕೊಡುವ ನಾಟಕ ಆಡುತ್ತಿದ್ದನ್ನು ವಿಡಿಯೋ ಮಾಡುತ್ತಿದ್ದ ಮೊಹಮದ್ ರಿಯಾಜ್, ಮೊಹಮದ್ ಗೌಸ ಎಂಬ ಮುಸ್ಲಿಂ ಜಿಹಾದಿ ತನ್ನ ಸೊಂಟದಲ್ಲಿ ಇಟ್ಟಿದ ಕತ್ತಿಯನ್ನು ತೆಗೆದು ಅಮಾನುಷವಾಗಿ ಕನ್ನಯಲಾಲ್ ಕತ್ತಿಗೆ ಇರಿದಿದ್ದು, ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ.

ಕನ್ಹಯ್ಯಲಾಲ್ ಕೊಲೆ ಮಾಡಿದ ಮುಸ್ಲಿಂ ಜಿಹಾದಿಗಳು ಮತ್ತ ವಿಡಿಯೋ ಮಾಡಿ ಪ್ರವಾದಿ ಮಹಮದ್ ಪರವಾಗಿ ನಾವು ಕೊಲೆ ಮಾಡಿದ್ದೀವಿ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.ಉದಯಪುರದಲ್ಲಿ ನಡೆದ ಅಮಾನವೀಯ ಘಟನೆ ಆಗಿದ್ದು ಅಮಾಯಕ ಕನ್ಹಯ್ಯಲಾಲ್ ತನ್ನ ದಿನನಿತ್ಯ ದರ್ಜಿ ಕೆಲಸ ಮಾಡಿ ತನ್ನ ಕುಟುಂಬದ ಜೀವನ ನಿರ್ವಹಣ ನಡೆಸುತ್ತಿದ್ದು ತನ್ನ ಪಾಡಿನ ಜೀವನ ನಡೆಸುತ್ತಿದ್ದರು. ಯಾವ ಪ್ರವಾದಿ ಮಹಮದ್ ಬಗ್ಗೆ ಮಾತನಾಡದೆ ಕೇವಲ ನೂಪುರ ಶರ್ಮಗೆ ಬೆಂಬಲ ನೀಡಿ ಹಾಕಿದ ಪೋಸ್ಟ್ ಮತ್ತು ನೂಪುರ ಶರ್ಮ ಅವರ ಫೋಟೋ ಹಾಕಿದಕ್ಕೆ ಅಮಾನುಷವಾಗಿ ಕೊಲೆ ಮಾಡಿರುವುದು ಭಯೋತ್ಪದಕ ಕೃತ್ಯವಾಗಿದೆ. ಈ ಇಬ್ಬರು ಹಂತಕರು ಸಹ ಐಸಿಸ್ ಭಯೋತ್ಪದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದು ಸಾರ್ವಜನಿಕವಾಗಿ ಕತ್ತನ್ನು ಸೀಳುವ ಕೃತ್ಯ ನಡೆಸುತ್ತಿರುವುದು ಕೋಮುಭಾವನೆ ಕೆರಳಿಸುವ ಮತ್ತು ಶಾಂತಿ ಕದಡುವ ದುರುದ್ದೇಶದಿಂದ ಮಾಡಿರುವ ಕನ್ಹಯ್ಯಲಾಲ್ ಹತ್ಯೆ ಇಡೀ ದೇಶದ ಜನತೆ ಭಯಭೀತಿಗೊಳಿಸುವ ರೀತಿ ಇದೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕವಾಗಿ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡು ಪ್ರಚೋದನೆ ಮಾಡಿ ಪ್ರವಾದಿ ಬಗ್ಗೆ ಮಾತಾಡಿದರೆ ತಲೆ ಕಡೆದು ಹಾಕಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವ ಮಹಮದ್ ಗೌಸ್ ಮತ್ತು ಮಹಮದ್ ರಿಯಾಜ್ ಇಬ್ಬರನ್ನು ಶೀಘ್ರ ವಿಚಾರಣೆ ಮಾಡಿ ಗಲ್ಲು ಶಿಕ್ಷೆ ವಿಧಿಸಲು ಆದೇಶಿಸಬೇಕು. ಹಂತಕರಿಗೆ ಆಶ್ರಯ ನೀಡಿರುವ ವ್ಯಕ್ತಿಗಳು ಮತ್ತು ಬೆಂಬಲ ನೀಡಿರುವ ಸಂಘಟನೆ ಬಗ್ಗೆ ತನಿಖಾ ತಂಡದಿAದ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.ಪ್ರತಿಭನೆಯಲ್ಲಿ ವಿ.ಹಿಂ.ಪ ಜಿಲ್ಲಾಧ್ಯಕ್ಷರು ಜೆ.ಆರ್. ವಾಸುದೇವ್, ಕಾರ್ಯದರ್ಶಿ ನಾರಾಯಣ್ ಜೀ ವರ್ಣೇಕರ್, ನಗರಾಧ್ಯಕ್ಷ ಸತೀಶ್ ಮುಂಚೆಮನೆ, ನಗರ ಕಾರ್ಯದರ್ಶಿ ಸುಧಾಕರ ಎಸ್.ಆರ್., ಬಜರಂಗದಳ ಜಿಲ್ಲಾ ಸಂಚಾಲಕ ರಾಜೇಶ್‌ಗೌಡ, ನಗರ ಸಂಚಾಲಕ ಅಂಕುಶ್, ವಿ.ಗುರುರಾಜ್, ಹೆಚ್.ಸಿ.ಪವನ್‌ಕುಮಾರ್, ವಿ.ರಾಜೇಶ್, ಪಿ.ಉಲ್ಲಾಸ್, ಕಾಂತರಾಜ್, ವಿಜಯ್ ಇನ್ನಿತರರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…