ಕೋವಿಡ್ ಸಂಕಷ್ಟ ಕಾಲದಲ್ಲಿ ತನ್ನ ಕೈಲಾದ ಸಹಾಯ ಮಾಡುವುದರೊಂದಿಗೆ ಸಮಾಜದಲ್ಲಿ ಅರಿವು ಮೂಡಿಸುವಂತಹ ವರ್ಚುಯಲ್ ತರಬೇತಿ ಗಳನ್ನು ಹಮ್ಮಿಕೊಳ್ಳುವುದರ ಜೊತೆ ಜೊತೆಗೆ ಪರಿಸರ ಕಾಳಜಿಯನ್ನೂ ತೋರಿಸುವತ್ತ ಜೆಸಿಐ ಶಿವಮೊಗ್ಗ ಭಾವನಾ ದಿಟ್ಟ ಹೆಜ್ಜೆ ಇಟ್ಟಿದೆ . Go green , ಹಸಿರು ಕುಟುಂಬ ಎಂಬ ಶೀರ್ಷಿಕೆಯಡಿಯಲ್ಲಿ ಪರ್ಯಾವರಣ ಕಾ ಸಪ್ತಾಹ್ ಎನ್ನುವ ಹಸಿರು ಹಬ್ಬವನ್ನು ಆಚರಿಸಿದರು. ಜೆಸಿಐ ಇಂಡಿಯಾದ ವಲಯ 24 ರ ಆಶಯದಂತೆ ಕಳೆದ ಏಳು ದಿನಗಳ ಕಾಲ ಒಂದೇ ಪರಿಸರ ಒಂದೇ ಭವಿಷ್ಯ,ಮಾಲಿನ್ಯಮುಕ್ತ ಚಟುವಟಿಕೆ ,ತಾರಸಿ ತೋಟ ,ಪ್ಲಾಸ್ಟಿಕ್ ಮುಕ್ತ ಭಾರತ,ಜಲ ಸಂರಕ್ಷಣೆ , ಮಳೆ ನೀರು ಕೊಯ್ಲು ,ಪರಿಸರ ಸ್ನೇಹಿ ಮನೆ ಈ ಎಲ್ಲಾ ವಿಷಯವಾಗಿ ಪ್ರತಿದಿನ ವರ್ಚುಯಲ್ ವಿಚಾರಸಂಕಿರಣ ಮತ್ತು ಮಕ್ಕಳಿಗೆ ಪರಿಸರ ಜಾಗೃತಿ ಕುರಿತು ಚಿತ್ರಕಲಾ ಶಿಬಿರ ಆಯೋಜಿಸಿ , ಕೊನೆಯ ದಿನವಾದ ಇಂದು ವಿನೂತನವಾಗಿ ಪರಿಸರ ಹಬ್ಬ ಆಚರಿಸುತ್ತಿದ್ದೇವೆ ಎಂದು ತಿಳಿಸಿದ ಅಧ್ಯಕ್ಷೆ ಸುಗುಣಾ ಸತೀಶ್ , ಈ ದಿನದಿಂದ ನಾವು ನಮ್ಮ ಸಂಸ್ಥೆಯಲ್ಲಿನ ಸದಸ್ಯರ ಹುಟ್ಟುಹಬ್ಬವನ್ನು ‘ಕೇಕ್ ಬಿಡಿ ಗಿಡ ನೆಡಿ ‘ ಎಂಬ ಜೆಸಿಐ ವಲಯ 24ರ ಈ ಬಾರಿಯ ಘೋಷ್ಯ ವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ ಎಂದು ವಿವರಿಸಿದರು. ಈ ಬಾರಿ ಸುಮಾರು 300 ಗಿಡಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿನ ದೇವಸ್ಥಾನ , ಉದ್ಯಾನವನ , ಶಾಲೆ ಹಾಗೂ ಹಾಸ್ಟೆಲ್ ಒಳಗೊಂಡಂತೆ ವಿವಿಧೆಡೆ ಗಿಡ ನೆಡುವ ಯೋಜನೆ ಹೊಂದಿದ್ದು ಈ ದಿನ ಸಾಂಕೇತಿಕವಾಗಿ ಗಿಡ ವಿತರಿಸಲಾಯಿತು. ಗಿಡಗಳನ್ನು ಸರಿಯಾದ ಕ್ರಮದಲ್ಲಿ ನೆಡುವುದೂ ಸೇರಿದಂತೆ , ಗಾಳಿ , ಮಳೆಗೆ ಅವುಗಳಿಗೆ ಯಾವುದೇ ಹಾನಿಯಾಗದಂತೆ ನಿಗಾ ವಹಿಸಲಾಗುವುದು ಮತ್ತು ಪಾಲನೆ ಪೋಷಣೆಗೆ ಅಗತ್ಯ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಹೇಳಿದರು .

ಕಾರ್ಯಕ್ರಮದಲ್ಲಿ ಭಾಗಿಯಾದ ರೋಟರಿ ವಿಜಯಕುಮಾರ್ ಅವರು ಭಾವನಾದ ಸಮಾಜಮುಖೀ ಕೆಲಸಗಳನ್ನು ಶ್ಲಾಘಿಸಿ , ಶುಭ ಹಾರೈಸಿದರು . ಈ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಹುಟ್ಟು ಹಬ್ಬ ಆಚರಿಸಿಕೊಂಡ ಪುಷ್ಪ ಗಾಜಿಗರ್ ಮತ್ತು ಮಧುಶ್ರೀ ಜಯಂತ್ ಅತ್ಯಂತ ಸಂತಸ ಪಟ್ಟರು .
ಕಾರ್ಯದರ್ಶಿ ಪೂರ್ಣಿಮಾ ಸುನಿಲ್ , ಸಹಕಾರ್ಯದರ್ಶಿ ಕಲ್ಪನಾ ಸುಧಾಮ , ಪೂರ್ವ ಅಧ್ಯಕ್ಷರಾದ ಉಷಾ ಎನ್ ಜಿ , ಲಲಿತ ಗುರುಮೂರ್ತಿ , ಸದಸ್ಯರಾದ ಉಷಾ ಕುಲಕರ್ಣಿ ಮತ್ತು ಶಾರದಾ ಉಪಸ್ಥಿತರಿದ್ದರು .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153