ಶಿವಮೊಗ್ಗ: ನೂತನ ಶಿಕ್ಷಣ ನೀತಿ ಬಹು ಶಿಸ್ತಿನ ಕಲಿಕಾ ಕ್ರಮದ ಅಧ್ಯಯನದ ವಿಧಾನವನ್ನು ಹೊಂದಿದೆ ಎಂದು ಬಳ್ಳಾರಿ ಕೃಷ್ಣದೇವರಾಯ ವಿ.ವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ರಾಬರ್ಟ್ ಜೋಸ್ ತಿಳಿಸಿದರು.
ಅವರು ಇಂದು ಕುವೆಂಪು ವಿ.ವಿ ಇಂಗ್ಲಿಷ್ ಅಧ್ಯಯನ ಮಂಡಳಿ,ಹಾಗೂ ಇಂಗ್ಲಿಷ್ ಅಧ್ಯಾಪಕರ ವೇದಿಕೆ ಇವರ ಪ್ರಾಯೋಜಕತ್ವದಲ್ಲಿ ದಿನಾಂಕ 01.07. 2022 ರ ಶುಕ್ರವಾರದಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಇಂಗ್ಲಿಷ್ ಪಠ್ಯಕ್ರಮ ಕುರಿತುರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಇಂಗ್ಲಿಷ್ ಪಠ್ಯಕ್ರಮ ಕುರಿತು ಸಾಧ್ಯತೆಗಳು ಮತ್ತು ಸವಾಲುಗಳ ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತ ನೂತನ ಎಜುಕೇಶನ್ ಪಾಲಿಸಿಯಲ್ಲಿ ಅಧ್ಯಾಪಕರು ಒಂದು ರೀತಿಯ ಕತ್ತಲೆಯಲ್ಲಿ ಇದ್ದಾರೆ ಅವರೆಲ್ಲ ಈ ಸವಾಲಿಗಳಿಂದ ಹೊರಬರಬೇಕು ಎಂದರು.
ಉತ್ತಮಗೊಳ್ಳುವ ಕಡೆ ಎಲ್ಲರು ಶ್ರಮಿಶಬೇಕಿದೆ. ಪಠ್ಯಗಳು,ಬೋಧನೆ, ಭೌತಿಕ ತರಗತಿಗಳು ಸವಲತ್ತುಗಳನ್ನು ಸರ್ಕಾರ ನೀಡಿದೆ, ನಾವು ಕೈ ಜೋಡಿಸಿ ಸಾದಿಸಬೇಕಿದೆ ಎಂದರು.ನೂತನ ಪಾಲಿಸಿಯು ವಿದ್ಯಾರ್ಥಿಗಳು ಏನು ಕಲಿಯಬೇಕು ಎಂಬುದಕ್ಕಿಂತ ಹೇಗೆ ಕಲಿಯಬೇಕು. ಎಂಬುದನ್ನು ಕಲಿಸುವ ಉದ್ದೇಶವನ್ನು ಹೊಂದಿದೆ. ಭಾರತದ ಜ್ಞಾನಶಾಸ್ತ್ರ ಮೂಲಕ ಭಾರತದ ಪರಂಪರೆ, ತತ್ವಜ್ಞಾನವನ್ನು ಕಲಿಸುವ ಆಶಯವನ್ನು ಹೊಂದಿದೆ ಎಂದರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ ಕೆ.ಬಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಡಾ. ಅವಿನಾಶ್ ಟಿ, ಕಾರ್ಯದರ್ಶಿ ಇಂಗ್ಲಿಷ್ ಅಧ್ಯಾಪಕರ ವೇದಿಕೆ ಇವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಭಾಷಾಶಾಸ್ತ್ರದ ಬೋಧನೆ ಕುರಿತು ಡಾ. ರಾಮಪ್ರಸಾದ್ ಬಿ.ವಿ, ಇಂಗ್ಲಿಷ್ ಪ್ರಾಧ್ಯಾಪಕರು ಹಾಗೂ ಮೇಟಿ ಮಲ್ಲಿಕಾರ್ಜುನ, ಭಾಷಾಶಾಸ್ತ್ರದ ಪ್ರಾಧ್ಯಾಪಕರು ಇವರು ಪ್ರಬಂಧ ಮಂಡಿಸಿದರು. ಡಾ.ಬಿ ಎಚ್ ನಾಗ್ಯಾನಾಯ್ಕ, ಅಧ್ಯಕ್ಷರು , ಇಂಗ್ಲಿಷ್ ಅಧ್ಯಯನ ಮಂಡಳಿ, ಇವರು ಇಂಗ್ಲಿಷ್ ಪಠ್ಯಕ್ರಮವನ್ನು ರೂಪಿಸುವುದರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಇಂಗ್ಲಿಷ್ ಪಠ್ಯಕ್ರಮದ ಸಾಧಕ ಭಾದಕಗಳು, ಬೋಧನೆ ಮತ್ತು ಕಲಿಕಾ ವಿಧಾನಗಳ ಕುರಿತು ಚರ್ಚೆ, ಭಾಷಾ ಶಾಸ್ತ್ರದ ವಿಷಯ ಬೋಧನೆ ಕುರಿತು ತರಬೇತಿ, ಪರೀಕ್ಷೆ ಮತ್ತು ಮೌಲ್ಯಮಾಪನ ವಿಧಾನಗಳ ಕುರಿತ ಕಾರ್ಯಾಗಾರ, ಪಠ್ಯಕ್ರಮವನ್ನು ರೂಪಿಸುವ ಬಗೆ ಮತ್ತು ಕಲಿಕಾ ವಿಧಾನಗಳ ಕುರಿತು ನುರಿತ ಸಂನ್ಮೂಲ ವ್ಯಕ್ತಿಗಳಿಂದ ಚರ್ಚೆ ನಡೆಯಿತು.
ಕಾರ್ಯಾಗಾರದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಎಮ್.ಕೆ. ವೀಣಾ ಉಪಸ್ಥಿತರಿದ್ದರು.