ಶಿವಮೊಗ್ಗ: ಸ್ಮಾರ್ಟ್ಸಿರಟಿಯ ಕಚೇರಿ ಇರುವ ನೆಹರು ರಸ್ತೆಯ ಫುಟ್ಬಾತ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಇಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಒತ್ತಾಯಿಸಿದೆ.

ನೆಹರು ರಸ್ತೆಯ ಸ್ಮಾರ್ಟ್ಸಿಗಟಿಯಿಂದ ನಿರ್ಮಿಸಿರುವ ಫುಟ್ಬಾತ್ ಕಾಮಗಾರಿ ಕಳಪೆ ಆಗಿರುವುದಕ್ಕೆ ಸಾಕ್ಷಿ ಆಗಿ 36 ಫೋಟೋಗಳನ್ನು ಲಗತ್ತಿಸಿದ್ದೇವೆ. ಇವುಗಳಿಂದ ಸಾಬೀತಾಗುವುದೇನೆಂದರೆ ಇಡೀ ಫುಟ್ಬಾತ್ ಕಾಮಗಾರಿ ಮುಗಿದು ಐದು-ಆರು ತಿಂಗಳಲ್ಲೇ ಫುಟ್ಬಾತ್ಗೆಂ ಹಾಕಿರುವ ಟೈಲ್ ಕುಸಿದಿದೆ. ಹಾಗೆಯೇ ಸಿಮೆಂಟ್ ಕಾಮಗಾರಿಯ ಅತ್ಯಂತ ಅವೈಜ್ಞಾನಿಕ ಮತ್ತು ಕಳಪೆಯಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.ಕಾಮಗಾರಿ ಸಂಪೂರ್ಣ ತಗ್ಗು ಇಳಿತಗಳಿಂದ ಕೂಡಿದ್ದು, ಸ್ಮಾರ್ಟ್ಸಿಸಟಿಯನ್ನು ಅಣುಕಿಸುತ್ತಿದೆ. ಹಲವಾರು ಟೈಲ್ಗದಳು ಕಾಮಗಾರಿಗೆ ಮುನ್ನ ಹಾಳಾಗಿವೆ ಅಥವಾ ಬಿರುಕು ಬಿಟ್ಟಿವೆ. ಕಾಮಗಾರಿಗೂ ಮೊದಲು 24×7 ನೀರಿನ ಪೈಪುಗಳನ್ನು ಅಳವಡಿಸುವಂತೆ ನೋಡಿಕೊಳ್ಳುವುದನ್ನು ಬಿಟ್ಟು, ಓಡಾಡುವವರು ಬೀಳುವಂತೆ ಅಸಯ್ಯವಾಗಿ ಜೋಡಿಸಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಈ ಫುಟ್ಬಾತ್ನುಲ್ಲಿ ಓಡಾಡುವುದೆ ದುಸ್ತರವಾಗಲಿದೆ ಎಂದು ಅಸಮಾಧಾನ ವ್ಯಕ್ಯಪಡಿಸಲಾಗಿದೆ.

ಸ್ಮಾರ್ಟ್ಸಿಂಟಿಯ ಕಣ್ಣುಮುಂದೆ, ಅಕ್ಕ-ಪಕ್ಕ ಕಳಪೆ ಕಾಮಗಾರಿಗೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳೇ ಸಂಪೂರ್ಣ ಹೊಣೆಗಾರರು. ಇವರೆಲ್ಲರೂ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಹಾಗೂ ಕರ್ತವ್ಯ ಲೋಪ ಎಸಗಿರುವುದು ಇದರಿಂದ ಸಾಬೀತಾಗುತ್ತಿದೆ.  ಬೇಜವಾಬ್ದಾರಿಯಿಂದ ವರ್ತಿಸುವ ಸ್ಮಾರ್ಟ್ ಸಿಟಿಯ ಅಧಿಕಾರಿಗಳು, ಕಾಮಗಾರಿ ಗುಣಮಟ್ಟ ಖಾತರಿ ಪಡಿಸುವ ಏಜೆನ್ಸಿ ಹಾಗೂ ಕಾಮಗಾರಿ ನಡೆಸಿರುವ ಗುತ್ತಿಗೆದಾರರೂ ಸಹ ಜವಾಬ್ದಾರರಾಗಿರುತ್ತಾರೆ. ಹಾಗಾಗಿ ತಾವು ಸ್ಥಳ ಪರಿಶೀಲನೆ ನಡೆಸಿ, ಸರಕಾರಕ್ಕೆ ಸ್ಮಾರ್ಟ್ ಸಿಟಿಯ ಭ್ರಷ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮಕ್ಕೆ ತಕ್ಷಣ ಸೂಚಿಸಲು ಮತ್ತು ಕಾಮಗಾರಿಯನ್ನು ಸಂಪೂರ್ಣವಾಗಿ ಪುನರ್ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ. ವಸಂತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎ. ಸತೀಶ್ ಕುಮಾರ್ ಶೆಟ್ಟಿ, ಪ್ರಮುಖರಾದ ಚಂದ್ರಶೇಖರ ಗೌಡ, ಚನ್ನವೀರಪ್ಪ ಗಾಮನಗಟ್ಟಿ, ನಾಗರಾಜ, ತಿಮ್ಮಣ್ಣ, ಸುಬ್ಬಣ್ಣ, ದೇವೇಂದ್ರ ಇನ್ನಿತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…