ಕೋಣಂದೂರು ನ್ಯೂಸ್…

ಕೋಣಂದೂರ್ನಲ್ಲಿ ರೋಟರಿ ಕ್ಲಬ್ ಪದಗ್ರಹಣ ಕಾರ್ಯಕ್ರಮ ನಡೆಯಿತು.ರೋಟರಿಯಂತಹ ಸಾಮಾಜಿಕ ಸಂಸ್ಥೆಗಳು ಆದ್ಯತಾ ವಲಯಗಳನ್ನು ಕೇಂದ್ರವಾಗಿಟ್ಟುಕೊಂಡು ಕರ‍್ಯ ಪ್ರವೃತ್ತರಾಗಬೇಕು. ಸಮಾಜದಲ್ಲಿನ ಉಳ್ಳವರು ಮತ್ತು ಉಳ್ಳದಿರುವವರನ್ನು ಸಂರ‍್ಕಿಸುವ ಸೇತುವೆಯಂತೆ ಕೆಲಸ ಮಾಡಬೇಕು ’ ಎಂದು ರೋಟರಿ ಜಿಲ್ಲಾ ತರಬೇತುದಾರ ಅಭಿನಂದನ್ ಶೆಟ್ಟಿ ಅಭಿಪ್ರಾಯಪಟ್ಟರು.

ಇಲ್ಲಿನ ವಿನಾಯಕ ಮಾಂಗಲ್ಯ ಮಂದಿರದಲ್ಲಿ ಕೋಣಂದೂರು ರೋಟರಿ ಕ್ಲಬ್ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ವಿಶ್ವ ಬ್ರಾತೃತ್ವ ಸಾರುವ , ಇತರರ ಮುಖದಲ್ಲಿ ಮಂದಹಾಸ ಮೂಡಿಸುವ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಂಸ್ಥೆ ಎಂದರೆ ಅದು ರೋಟರಿ ಸಂಸ್ಥೆ. ವ್ಯಕ್ತಿಯ ಬಗೆಗೆ ನಾವು ತೋರುವ ಸಹಾನುಭೂತಿ ಇನ್ನೊಬ್ಬನ ಬದುಕನ್ನು ರೂಪಿಸಬೇಕು. ರೋಟರಿಯಂತಹ ಸಂಸ್ಥೆಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವಂತಿರಬೇಕು. ಆ ಮೂಲಕ ರಾಷ್ಟ್ರ ನರ‍್ಮಾಣದ ಕೆಲಸ ಆಗಬೇಕು. ಉತ್ತಮವಾದ ಯೋಚನೆ,ಯೋಜನೆಯಿಂದ ದೇಶಕಟ್ಟಲು ಸಂಸ್ಥೆಯ ಸದಸ್ಯರು ಸಿದ್ಧರಿರಬೇಕು.

ಈ ನೆಲದ ಋಣ ನಮ್ಮ ಮೇಲಿದೆ ಎಂಬುದನ್ನು ನಾವು ಮರೆಯಬಾರದು.ಅದನ್ನು ಸೇವೆಯ ಮೂಲಕ ಸಮಾಜಕ್ಕೆ ಮರಳಿ ಕೊಡುವ ಕೆಲಸ ನಮ್ಮಿಂದಾಗಬೇಕು. ಸುಮಾರು ೪೦ ರ‍್ಷಗಳ ಸತತ ಹೋರಾಟದಿಂದ ನಾವು ಪೋಲಿಯೋ ರೋಗದಿಂದ ಮುಕ್ತರಾಗುತ್ತಿದ್ದೇವೆ. ಇದು ಜಾಗತಿಕ ಮಟ್ಟದ ರೋಟರಿಯ ಸಾಧನೆ’ ಎಂದರು.
ಇದೇ ಸಂರ‍್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯರ‍್ಥಿಗಳು ಹಾಗೂ ಯೋಗ ಪಟು ಕಾವ್ಯ ,ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಉಡುಪಿ ಜಿಲ್ಲೆಯ ವೃತ್ತ ನಿರೀಕ್ಷಕರಾದ ಕೋಣಂದೂರು ಸಮೀಪದ ಶಂಕರಳ್ಳಿಯ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್ , ಸಾಮಾಜಿಕ ಜಾಲತಾಣಗಳನ್ನು ಬಳಸುವ ಯುವಕ-ಯುವತಿಯರು ಮತ್ತು ಮಕ್ಕಳು ಅತ್ಯಂತ ಜಾಗರೂಕರಾಗಿರಬೇಕು. ನಕಲಿ ಆಪ್ ಗಳ ಹಾವಳಿ ಹೆಚ್ಚಿದೆ.ಅವುಗಳಿಂದ ನಾವು ಮೋಸ ಹೋಗುವ ಸಾದ್ಯತೆಗಳು ಹೆಚ್ಚಿದ್ದು, ಆ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ಸರಿ ತಪ್ಪುಗಳನ್ನು ತಿಳಿ ಹೇಳಬೇಕು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ರಾಜ್ಯಪಾಲ ಗುಡದಪ್ಪ ಕಸಬಿ, ಕೋಣಂದೂರು ರೋಟರಿ ಕ್ಲಬ್ ನೂತನ ಅಧ್ಯಕ್ಷ ಎಂ.ಟಿ.ಪುಟ್ಟಪ್ಪ, ನಿಕಟಪರ‍್ವ ಅಧ್ಯಕ್ಷ ಜೆ.ಪಿ.ಕಿರಣ್, ಕರ‍್ಯರ‍್ಶಿಗಳಾದ ಟಿ.ವಿ.ವೀರಣ್ಣ, ಡಿ.ಆರ್.ಗಿರೀಶ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…