ಶಿವಮೊಗ್ಗ: ಎಎಪಿ ಪಕ್ಷಕ್ಕೆ ಇದುವರೆಗೂ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರ್ಪಡೆಗೊಳ್ಳುತ್ತಿದ್ದರು. ಇದರ ಮುಂದಿನಬಾಗವಾಗಿ ಇಂದು ಶಿವಮೊಗ್ಗದ ಡಿ.ಸಿ ಕಛೇರಿ ಪಕ್ಕದಲ್ಲಿರುವಂತಹ AAP ಪಕ್ಷದ ಕಚೇರಿಯಲ್ಲಿ ಸಂಬವನೀಯ ಅಭ್ಯರ್ಥಿ ನೇತ್ರಾವತಿ ಯವರ ಮುಂದಾಳತ್ವದಲ್ಲಿ ವಿದ್ಯಾರ್ಥಿ ಘಟಕದ ಉದ್ಘಾಟನೆ ನಡೆಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಎಎಪಿ ಪಕ್ಷವನ್ನು ಸೇರ್ಪಡೆ ಗೊಂಡರು. ಈ ವೇಳೆಯಲ್ಲಿ ಕಾರ್ಯಕ್ರಮದ ಕೇಂದ್ರ ಬಿಂದು ವಾಗಿದ್ದ ನೇತ್ರಾವತಿ ಯವರು ಮಾತನಾಡಿ ಭಾರತದೇಶದ ಮುಂದಿನ ಭವಿಷ್ಯ ಯುವಕರಾಗಿದ್ದು. ಇಂಥ ಯವಕರು ಎಎಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದರಿಂದ ಪಕ್ಷಕ್ಕೆ ನೂತನ ಚೈತನ್ಯ ಸಿಕ್ಕಂತಾಗಿದೆ ಎಂದು ಹೇಳಿದರು.
ಇನ್ನು ಇದೇ ವೇಳೆಗೆ ಮಾತನಾಡಿದ ಏಳುಮಲೈ ಮಾತನಾಡಿ ನಾವು ಹೋರಾಟದ ಮೂಲಕ ಪಕ್ಷರನ್ನು ಮುನ್ನಡೆಸಬೇಕಾಗಿದ್ದು, ಇದಕ್ಕೆ ಕಾರಣ ದೇಶ ಹಾಗೂ ರಾಜ್ಯದಲ್ಲಿ ಜನರ ನೂರಾರು ಸಮಸ್ಯಗಳು ಜೀವಂತವಾಗಿದ್ದು ಇಂಥ ಜನರ ಸಮಸ್ಯೆಗಳನ್ನು ಎಎಪಿ ಯೋರಾಟದ ಮೂಲಕ ಬಗೆಹರಿಸಿ ಜನರಿಗೆ ಹತ್ತಿರವಾಗಬೇಕಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನೇತ್ರಾವತಿ ಯವರ ಜೊತೆಯಲ್ಲಿ ಪಕ್ಷದ ಮುಖಂಡರಾದ ಏಳುಮಲೈ ಕೇಬಲ್ ಬಾಬು, ಮನೋಹರ್ ಗೌಡ , ಸುರೇಶ್ ಕೊಟೆಕರ್, ಕಿರಣ್. ಕೆ ರವಿಕುಮಾರ್ , ರವಿಕಿಶನ್,ಸೇರಿದಂತೆ ಇನ್ನು ಹಲವು ಮುಖಂಡರು ಉಪಸ್ಥಿತರಿದ್ದರು.