ಬೆಂಗಳೂರು ಜುಲೈ 11: ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಸೇವೆಸಲ್ಲಿಸುವುದಾಗಿ ಸಹಕಾರರತ್ನ ರೋಟರಿಯನ್ ಬಿ.ನಾಗರಾಜ ತಿಳಿಸಿದರು.
ರೋಟರಿ ಬೆಂಗಳೂರು ರಾಜರಾಜೇಶ್ವರಿನಗರ ಸೆಂಟೇನಿಯಲ್ ಕ್ಲಬ್ ಅಧ್ಯಕ್ಷರಾಗಿ ಸಹಕಾರರತ್ನ ರೋಟರಿಯನ್ ಬಿ.ನಾಗರಾಜ ಅವರು ಪದವಿ ಸ್ವೀಕರಿಸಿ ಮಾತನಾಡಿದರು, ರೋಟರಿ ಕ್ಲಬ್ ಸಮಾಜದ ಅಭಿವೃದ್ದಿಗಾಗಿ ಹಲವಾರು ಯೋಜನೆಗಳ ಮೂಲಕ ತನ್ನದೇ ಅದ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಈ ವರ್ಷದ ರೋಟರಿ ಇಂಟರ್‌ನ್ಯಾಷನಲ್ ಥೀಮ್ ಆಗಿರುವ “ಇಮ್ಯಾಜಿನ್ ರೋಟರಿ” ಯ ಅಡಿಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಆಡಳಿತ ಮಂಡಳಿಯ ಸದಸ್ಯರುಗಳು ಸ್ಟಾರ್ ವಾಕರ್ಸ್‌ಗಳಾಗಿ ಕಾರ್ಯನಿರ್ವಹಿಸಲಿದ್ದೇವೆ. ಅಲ್ಲದೇ, ರೋಟರಿ ಕ್ಲಬ್ ನ ಯೋಜನೆಗಳ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಜನರ ಅಭ್ಯುದಯಕ್ಕಾಗಿ ಶ್ರಮಿಸಲಿದ್ದೇವೆ ಎಂದು ಹೇಳಿದರು.
ನೂತನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ 3190 ನೇ ಜಿಲ್ಲೆಯ ಜಿಲ್ಲಾರಾಜ್ಯಪಾಲಕರಾದ ರೋಟರಿಯನ್ ಜಿತೇಂದ್ರ ಅನೇಜಾರವರು ಪ್ರಮಾಣವಚನ ಭೋಧಿಸಿದರು.
ಆಡಳಿತ ಮಂಡಳಿ…
ವಿ.ಜಿ ಕಾಸಲ್ – ಮಾಜಿ ಅಧ್ಯಕ್ಷರು, ರಾಘವೇಂದ್ರ ಇನಾಂದಾರ್ -ಉಪಾಧ್ಯಕ್ಷರಾಗಿ, ರಘುಬನ್ನೂರು-ಕಾರ್ಯದರ್ಶಿ, ಎಂ.ಜೆ ಪ್ರಶಾಂತ್ – ಪಿ.ಈ, ಎಂ.ಸುಪ್ರೀತ್ – ಜಂಟಿಕಾರ್ಯದರ್ಶಿ, ಲತಾ ಅಡಿಕೆ-ಖಜಾಂಚಿ, ಶರ್ಮಿಳಾ ಗಣೇಶ್ – ಸಾರ್ಜೆಂಟ್
ನಿರ್ದೇಶಕರುಗಳಾಗಿ ಬೀನಾ ಶ್ರೀಹರಿ, ಎಆರ್‌ಸಿ ಸಿಂದ್ಯಾ, ಟಿ.ಎಂ. ಸೂರಜ್, ಸವಿತ ಇನಾಂದಾರ್, ವಿವೇಕ್‌ಚಂದ್ರ ಸುರೇಶ್‌ಮಾದವನ್ ಮತ್ತು ಸತ್ಯನಾರಾಯಣರವರು ಆಯ್ಕೆಯಾದರು.
ಸಹಾಯಕ ರಾಜ್ಯ ಪಾಲಕರಾದ ರವಿನರಸಿಂಹನ್ ರವರು ಕ್ಲಬ್‌ನ ಸವಿ ಸಂಚಿಕೆಯನ್ನು ಬಿಡುಗಡೆಮಾಡಿದರು. ವಲಯ ರಾಜ್ಯಪಾಲಕರಾದ ಶೋಭಾ ಮುರಳಿಯವರು ಜನರ ಸೇವೆಗಾಗಿ ಹಣ ಸಂಗ್ರಹ ಮಾಡುವ ಬಗ್ಗೆ ತಿಳಿಸಿದರು. ಐದು ವರ್ಷದ ಹೆಣ್ಣುಮಗುವಾದ ಕುಮಾರಿ ದ್ಯುತಿ ಹೃದಯ ಚಿಕಿತ್ಸೆಗಾಗಿ ರೊಟೇರಿಯನ್ ಶರ್ಮಿಲಾ ಗಣೇಶ್‌ರವರು 35000 ರೂಗಳನ್ನು ದೇಣಿಗೆ ನೀಡಿದರು ಮತ್ತು 3190 ನೇ ರೋಟರಿ ಜಿಲ್ಲೆಯವರು 95000/- ರೂಗಳನ್ನು ದೇಣಿಗೆ ನೀಡಲಿದ್ದಾರೆ.