ಶಿವಮೊಗ್ಗ: ಗಂಗಾಮತ ಮಹಿಳಾ ಘಟಕದ ನೇತೃತ್ವದಲ್ಲಿ ವಿವಿಧ ಘಟಕಗಳ ಸಹಕಾರದಲ್ಲಿ ಇಂದು ತುಂಬಿದ ತುಂಗೆಗೆ ಬಾಗಿನ ಅರ್ಪಿಸುವುದರ ಜೊತೆಗೆ ಆಷಾಢಗಂಗಾ ಪೂಜೆಯನ್ನು ಭೀಮೇಶ್ವರ ದೇವಸ್ಥಾನ ಹಿಂಭಾಗದ ನದಿ ದಡದಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿತ್ತು.

ಪ್ರತಿ ವರ್ಷ ಆಷಾಢ ತಿಂಗಳಲ್ಲಿ ಗಂಗಾಮತ ಸಮಾಜದವರು. ಆಷಾಢ ಗಂಗಾ ಹೆಸರಲ್ಲಿ ಪೂಜೆ ನೆರವೇರಿಸುವರು. ಹಾಗೆಯೇ ತುಂಬಿದ ತುಂಗೆಗೆ ಬಾಗಿನ ಅರ್ಪಿಸಲಾಗುತ್ತದೆ. ಇಂದು ನಡೆದ ಈ ಕಾರ್ಯಕ್ರಮದಲ್ಲಿ ಸಮಾಜದ ಬಾಂಧವರು ಭಾಗವಹಿಸಿ ವಿಶೇಷ ಪೂಜೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಸುನಿತಾ ಅಣ್ಣಪ್ಪ, ಇದೊಂದು ಸಮಾಜದ ಕಾರ್ಯಕ್ರಮವಾಗಿದೆ. ನಾಡಿಗೆ ಒಳಿತಾಗಲಿ ಎಂಬ ಉದ್ದೇಶವಿಟ್ಟುಕೊಂಡು ಬಾಗಿನ ಅರ್ಪಿಸಲಾಗಿದೆ. ಜನರ ಕಷ್ಟಗಳು ದೂರವಾಗಲಿ. ರೈತರಿಗೆ ತೊಂದರೆಯಾಗದಿರಲಿ. ಎಲ್ಲರ ಬದುಕು ಸುಂದರವಾಗಲಿ ಎಂಬುದೇ ಈ ಪೂಜೆಯ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ ಡಿ.ಬಿ. ಕೆಂಚಪ್ಪ, ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಹಾಲೇಶಪ್ಪ, ಮಹಿಳಾ ಸಂಘದ ಅಧ್ಯಕ್ಷೆ ರೂಪಾ ಹೇಮಂತರಾಜ್, ಸಮಾಜದ ಮುಖಂಡರಾದ ವಿಶ್ವನಾಥ್ ಎಸ್.ಸಿ. ಗುರುಸ್ವಾಮಿ ಭದ್ರಾವತಿ, ಜ್ಯೋತಿ ನಟರಾಜ್, ಶಾಮಸುಂದರ್, ಜೆ. ವಿಶ್ವನಾಥ್, ಮಂಜುನಾಥ್, ಜಿ. ಕುಬೇರಪ್ಪ, ಸತ್ಯನಾರಾಯಣ್, ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…