ನಿನ್ನೆ ಶಿವಮೊಗ್ಗದ ಭದ್ರಾ ಜಲಾಶಯದಲ್ಲಿ ರೈತ ಸಂಘಟನೆಯ ನೇತೃತ್ವದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಗಂಗಾಧರ ಅವರು ಮಾತನಾಡಿ 2016- 2017 ಸಾಲಿನಲ್ಲಿ ನಡೆದ ಭದ್ರಾ ಅಣೆಕಟ್ಟು ಡ್ರಿಪ್ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು. ಹಾಕಿದ್ದ ಕಾಂಕ್ರೀಟ್ ಫ್ಲೋರ್ ನೀರಿನ ರಭಸಕ್ಕೆ ಚೂರು ಚೂರಾಗಿತ್ತು. ಬಳಸಿದ ಕಬ್ಬಿಣ ಗಳೆಲ್ಲ ಹಾಳಾಗಿವೆ. ಅಣೆಕಟ್ಟಿನ ಕೆಳಭಾಗದಲ್ಲಿ ವಸ್ತುಸ್ಥಿತಿಯನ್ನು ಗಮನಿಸಿದಾಗ ಇದು ಸರ್ಕಾರದ ಭ್ರಷ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು. ಸ್ಥಳಕ್ಕೆ ಆಗಮಿಸಿದ ಭದ್ರಾವತಿ ಶಾಸಕರಾದ ಸಂಗಮೇಶ ಅವರು ಭದ್ರಾ ಶಿವಮೊಗ್ಗದ ಜೀವನಾಡಿ ಅಂತ ಭದ್ರಾ ಅಣೆಕಟ್ಟಿನಲ್ಲಿ ಅವ್ಯವಹಾರ ನಡೆಸಿರುವುದು ನಾಚಿಕೆಗೇಡಿನ ವಿಷಯ ಎಂದು ಖಂಡಿಸಿದರು . ಸ್ಥಳಕ್ಕೆ ಆಗಮಿಸಿದ ಅಣೆಕಟ್ಟು ಸೂಪರಿಡೆಂಟ್ ಎಂಜಿನಿಯರ್ ಕೂಡ ಕಾಮಗಾರಿ ಕಳಪೆಯಾಗಿರುವುದನ್ನು ಒಪ್ಪಿಕೊಂಡರು. ಶಾಸಕರು ಸುಪರಿಡೆಂಟ್ ಇಂಜಿನಿಯರ್ ಅವರಿಗೆ ಈ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153