ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿಗುರುವಿನ ಸ್ಥಾನ ಅತ್ಯಂತ ಪ್ರಮುಖವಾದದ್ದು ಗುರು ಹಿರಿಯರನ್ನು, ತಂದೆ ತಾಯಿಗಳನ್ನು, ಶಿಕ್ಷಕರನ್ನು ಗೌರವಿಸುವುದು ನಮ್ಮ ಸಂಸ್ಕಾರದ ಪ್ರತಿರೂಪಎಂದು ಬೆಕ್ಕಿನ ಕಲ್ಮಠದಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ನಗರದ ಕಲ್ಲಳ್ಳಿ ಶಿವಗಂಗಾ ಯೋಗಾಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಗುರುಪೂರ್ಣಿಮಾ ಹಾಗೂ ಪುಸ್ತಕ ಬಿಡುಗಡೆ ಮತ್ತು ಗುರುಗಳ ಸನ್ಮಾನಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದಅವರು, ಗುರುಎಂದರೆ ಭಗವಂತನ ಮಾನವ ಸ್ವರೂಪರೂಪ. ತನ್ನಎಲ್ಲಾತ್ಯಾಗದ ಮೂಲಕ ಸಮಾಜದ, ಮನುಕುಲದ ಒಳಿತಿಗಾಗಿ ತನ್ನನ್ನುತಾನು ಸಮರ್ಪಿಸಿಕೊಂಡು ಉತ್ತಮ ಸಮಾಜ, ಒಳ್ಳೆಯ ವಾತಾವರಣ ನಿರ್ಮಾಣದಲ್ಲಿ ಶ್ರಮ ವಹಿಸುತ್ತಿರುವಗುರುವಿನ ಪಾತ್ರಎಂದೆAದಿಗೂ ಅವಿಸ್ಮರಣೀಯ ಎಂದರು.
ಶಿವಗAಗಾ ಯೋಗಾಕೇಂದ್ರಕಟ್ಟುವಲ್ಲಿಇAದು ಸಂಸ್ಕಾರಯುತ ಹಾಗೂ ಸಮಯ ಪರಿಪಾಲನೆ ಮತ್ತು ಶಿಸ್ತುಬದ್ದವಾದ ಯೋಗಕೇಂದ್ರವೆAದು ಹೆಸರು ಗಳಿಸಿದೆ ಎಂದು ಪ್ರಶಂಸಿಸಿದ ಅವರು, ಅಜ್ಞಾನ ಕಳೆದು ಜ್ಞಾನದ ಬೆಳಕನ್ನುನೀಡುವುದೇಗುರು.ಎಲ್ಲಗುರುವನ್ನುಗೌರವಿಸುವುದುಅಲ್ಲ, ನಮ್ಮ ಸಂಸ್ಕಾರ, ಗೌರವ ಹಾಗೂ ನಮಗೆ ನಾವೇ ಗೌರವಿಸುವುದು ಇರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಯೋಗ ನಮಗೆ ಸಂಸ್ಕಾರ, ಮನೋಬಲ ಹೆಚ್ಚಿಸುವುದರಜೊತೆಗೆದೈಹಿಕ, ಮಾನಸಿಕ ಸದೃಢತೆ ಹೆಚ್ಚುತ್ತದೆ. ಆಧುನಿಕಯುಗದಲ್ಲಿ ಪ್ರಪಂಚದ ೨೦೦ಕ್ಕೂ ಹೆಚ್ಚು ದೇಶಗಳು ಯೋಗವನ್ನುಒಪ್ಪಿ, ಅಪ್ಪಿಕೊಳ್ಳುತ್ತಿವೆ. ಭಾರತಗುರುಪರಂಪರೆಯಲ್ಲಿತನ್ನದೇಆದ ವಿಶೇಷ ಸ್ಥಾನಮಾನಗಳಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಲೇಖಕರು, ಅಂಕಣಕಾರರುಡಾ.ಗಾಯಿತ್ರಿದೇವಿಯವರಎರಡು ಕೃತಿಗಳಾದ `ನಾ ಕಂಡ ಆದಿ ಯೋಗಿ, ಸರ್ವಜ್ಞ ಬೆಳಗಿದ ಜ್ಞಾನ ದೀವಿಗೆ’ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಬಿಡುಗಡೆ ಮಾಡಲಾಯಿತು.
ಶಿವಗಂಗಾ ಯೋಗಾಕೇಂದ್ರದರಾಜ್ಯ ಪ್ರಶಸ್ತಿ ಪುರಸ್ಕೃತರಾದಯೋಗಾಚಾರ್ಯ ಸಿ.ವಿ.ರುದ್ರಾಚಾರ್ಯರವರು, ನಗರದ ೨೮ ಕೇಂದ್ರಗಳಿಗೆ ಉಚಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಧಕರಿಗೆ ಸನ್ಮಾನಿಸಿ, ಗೌರವಿಸಿ ಗುರುಪೂರ್ಣಿಮೆ ಮಹತ್ವವನ್ನು ತಿಳಿಸಿದರು. ನಿವೃತ್ತ ಸಂಸ್ಕೃತಉಪನ್ಯಾಸಕರಾದಡಾ.ಪದ್ಮನಾಭಅಡಿರವರುಗುರುಪೂರ್ಣಿಮೆಯ ವಿಶೇಷ ಮಹತ್ವದಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಶಿವಯೋಗಾಕೇಂದ್ರದ ಕಾರ್ಯದರ್ಶಿ ಎಸ್.ಎಸ್.ಜ್ಯೋತಿ ಪ್ರಕಾಶ್, ಟ್ರಸ್ಟಿಗಳಾದ ಹೊಸತೋಟ ಸೂರ್ಯನಾರಾಯಣ, ಎ.ಎಸ್.ಚಂದ್ರಶೇಖರ್, ಜಿ. ವಿಜಯಕುಮಾರ್, ಲವಕುಮಾರ್, ಪರಿಸರ ನಾಗರಾಜ್, ಕೇಶವಮೂರ್ತಿ ಬಸವರಾಜ್, ಸದಾಶಿವಪ್ಪ ಉಪಸ್ಥಿತರಿದ್ದರು.