ಶಿವಮೊಗ್ಗ: ಮತ್ತೆ ಮತ್ತೆ ಬಾಲ ಬಿಚ್ಚುತ್ತಿರುವ ಗೂಂಡಾಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಬೂತ್ ಕೇಂದ್ರದ ಕಾಂತರಾಜ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಷ್ಟ್ರದ್ರೋಹಿಗಳು, ಮುಸ್ಲಿಂ ಗೂಂಡಾಗಳು 6 ತಿಂಗಳ ಹಿಂದೆ ಹರ್ಷ ಎಂಬ ಹಿಂದೂ ಯುವಕನ ಕೊಲೆ ಮಾಡಿದ್ದರು. ಆಗ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳಿಗೆ ಮಾಹಿತಿ ನೀಡಿದ್ದೆವು. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯೂ ಆಗುತ್ತದೆ. ಈ ಮಧ್ಯೆಯೇ ಮತ್ತೊಂದು ಘಟನೆ ನಡೆದಿರುವುದು ಖಂಡನೀಯ ಎಂದರು.ಈ ಬಾರಿ ಹಲ್ಲೆಗೊಳಗಾದವರು ರಾಜೀವ್ ಗಾಂಧಿ ಬಡಾವಣೆಯ ಬಿಜೆಪಿ ಬೂತ್ ಅಧ್ಯಕ್ಷ ಕಾಂತರಾಜ್. ಹರ್ಷನ ಕೊಲೆಯ ಸಂದರ್ಭದಲ್ಲಿ ಈ ಬಡಾವಣೆಯ ಮುಸಲ್ಮಾನ್ ಹಿರಿಯರು ವಾಗ್ದಾನ ಮಾಡಿ ಇಂತಹ ಘಟನೆಯಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ್ದರು.

ಈ ಘಟನೆ ಕಾಂತರಾಜ್ ಕೊಲೆ ಪ್ರಯತ್ನವೇ ಸರಿ. ಕೂದಲೆಳೆ ಅಂತರದಲ್ಲಿ ಆತ ಬಚಾವಾಗಿದ್ದಾನೆ. ಮುಸ್ಲಿಂ ಗೂಂಡಾಗಳ ವರ್ತನೆ ದುರ್ವರ್ತನೆ ಮಿತಿ ಮೀರುತ್ತಿದೆ. ಹಿಂದೂ ಸಮಾಜ ಶಿವಮೊಗ್ಗದಲ್ಲಿ ಶಾಂತಿ ಬಯಸುತ್ತಿದೆ. ಅದೇ ರೀತಿ ನಡೆದುಕೊಳ್ಳುತ್ತಿದೆ. ಆದರೆ, ಕೆಲವು ಮುಸ್ಲಿಂ ಗೂಂಡಾಗಳು ಈ ರೀತಿಯಲ್ಲಿ ಶಾಂತಿ ಕದಡುತ್ತಿರುವುದನ್ನು ಹಿಂದೂ ಸಮಾಜ ಒಪ್ಪುವುದಿಲ್ಲ. ಮತ್ತೆ ಮತ್ತೆ ಹಿಂದೂಗಳ ಮೇಲೆ ಮುಸ್ಲಿಂ ಗೂಂಡಾಗಳ ಹಲ್ಲೆಯನ್ನು ಸಾಧ್ಯವಿಲ್ಲ ಎಂದರು.ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ. ಕೆಲವು ಆರೋಪಿತರನ್ನು ಬಂಧಿಸಲಾಗಿದೆ. ಆದರೆ, ಇದರ ಹಿಂದಿರುವ ದೊಡ್ಡ ಶಕ್ತಿಗಳನ್ನು ಹುಡುಕಬೇಕಾಗಿದೆ. ಕೆಲವು ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕೆ. ಇ. ಕಾಂತೇಶ್, ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…