ಪರಿಸರಕ್ಕೆ ಕಳಸಪ್ರಾಯವಾಗಿರುವ ರಾಗಿಗುಡ್ಡದ ಬುಡವನ್ನು ಸುಮಾರು ಐದೂವರೆ ಎಕರೆಯಷ್ಟು ಅಗೆದು ಜಿಲ್ಲಾಡಳಿತದ ಅನುಮತಿ ಇಲ್ಲದೆ ಮಣ್ಣನ್ನು ಅಕ್ರಮವಾಗಿ ಬೇರೆಡೆಗೆ ಸ್ಥಳಾಂತರ ಮಾಡಲಾಗಿರುವುದನ್ನು ಖಂಡಿಸಿ ಪರಿಸರವಾದಿಗಳು ಪ್ರತಿಭಟನೆ ನಡೆಸಿದರು.
ರಾಗಿ ಗುಡ್ಡದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕಾಗಿ ಅಕ್ರಮವಾಗಿ ಜೆಸಿಬಿ ಬಳಸಿ ಗುಡ್ಡ ಅಗೆಯುತ್ತಿರುವುದನ್ನು ಜಿಲ್ಲಾಡಳಿತದ ಮತ್ತು ಗಣಿ ಇಲಾಖೆಯ ಗಮನಕ್ಕೆ ತಂದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ‌. ಆದ್ದರಿಂದ ಈ ಮಣ್ಣು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕೆವಿ ವಸಂತಕುಮಾರ್, ಡಾ. ಸತೀಶ್ ಕುಮಾರ್ ಶೆಟ್ಟಿ, ಎಸ್ ಬಿ ಅಶೋಕ್ ಕುಮಾರ್, ಪುಷ್ಪ ಶೆಟ್ಟಿ, ಪರಿಸರ ರಮೇಶ್, ಸೀತಾರಾಮ್, ವೆಂಕಟೇಶ್ ಹಾಗೂ ಗೋ ಗ್ರೀನ್ ಪರಿಸರ ತಂಡದ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153