ಪ್ರಕೃತಿಮಾತೆಯ ಐಸಿರಿ ಅರಿಯಲು ಕಾಡು, ಗುಡ್ಡ, ಬೆಟ್ಟ ಹತ್ತಿ ಸೌಂದರ್ಯದೊಂದಿಗೆ ಬೆರೆತು ದೇಹಕ್ಕೆ ಶ್ರಮ ಕೊಡುವುದರೊಂದಿಗೆ, ಆರೋಗ್ಯ ವೃದ್ಧಿಸಿಕೊಳ್ಳಲು ಚಾರಣಿಗರು ಎಂದೆಂಗೂ ಮುಂದು ಎಂದು ತರುಣೋದಯ ಘಟಕದ ಛೇರ್ಮನ್ ಎಸ್.ಎಸ್.ವಾಗೇಶ್ ನಗರದ ವಾಜಪೇಯಿ ಬಡಾವಣೆಯ ಕ್ಯಾದಿಗೆಕಟ್ಟೆ ಕೆರೆ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮತ್ತು ಸಸಿನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಗರ ಪ್ರದೇಶಗಳಲ್ಲಿ ಈ ರೀತಿಯಲ್ಲಿ ಕೆರೆಕಟ್ಟೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಮುಂದಿನ ಪೀಳಿಗೆಗೆ ನಮ್ಮ ಕೊಡುಗೆಯಾಗಿ ಉಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಈ ರೀತಿ ಎಲ್ಲಾ ಊರು, ಗ್ರಾಮ ಗಳಲ್ಲಿಯೂ ಅಭಿವೃದ್ಧಿ ಪಡಿಸುವುದು ಅವಶ್ಯಕತೆ ಇದೆ. ಕಾಡಿದ್ದರೆ ನಾಡು, ಪ್ರಾಣಿ ಪಕ್ಷಿಗಳಿಗೆ ಉತ್ತಮ ಪರಿಸರ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಅದನ್ನು ಅರಿತು ಶಿವಮೊಗ್ಗದ ಪರಿಸರ ಆಸಕ್ತರು ಸೇರಿ, ಸ್ವಯಂ ಪ್ರೇರಿತರಾಗಿ ಮುಚ್ಚಿ ಹೋಗಿದ್ದ ಕೆರೆಯನ್ನು ಪುನಃ ಚೇತನ ಗೊಳಿಸುತ್ತಿರುವುದು ಅಭಿನಂದನಾರ್ಹ. ಈ ಕಾರ್ಯದಲ್ಲಿ ತರುಣೋದಯ ಘಟಕದ ಸದಸ್ಯರು ಅಳಿಲು ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ರಾಜ್ಯ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡುತ್ತಾ, ವೈಹೆಚ್ ಐಎ ಪ್ರಕೃತಿ ಪ್ರಿಯರನ್ನು ಒಂದೆಡೆ ಸೇರಿಸಿ ಪ್ರತೀ ವರ್ಷ ರಾಷ್ಟ್ರಾದ್ಯಂತ ಕಾರ್ಯಕ್ರಮ ಆಯೋಹಿಸುತ್ತದೆ. ಎಲ್ಲಾ ರಾಜ್ಯಗಳಲ್ಲಿಯೂ ಚಾರಣಕ್ಕೆ ಹೇಳಿ ಮಾಡಿಸಿದ ಪ್ರಕೃತಿ ಸೌಂದರ್ಯ ಹೊಂದಿದೆ, ಹವಾಮಾನಕ್ಕೆ ಅನುಗುಣವಾಗಿ ವರ್ಷ ಪೂರ್ತಿ ಚಾರಣ ಏರ್ಪಡಿಸಲಾಗುತ್ತಿದೆ. ಆಸಕ್ತರು ಅತ್ಯಂತ ಕಡಿಮೆ ವೆಚ್ಚದಲ್ಲಿ ಹಾಗೂ ಸುರಕ್ಷತೆಯಿಂದ ಕರೆದು ಕೊಂಡು ಹೋಗಿ ಬರಲಾಗುತ್ತದೆ. ನಮ್ಮ ನಗರದಿಂದ ಹಲವಾರು ಚಾರಣಿಗರು ದೇಶದ ಎಲ್ಲಾ ಪ್ರದೇಶಗಳಿಗೂ ಪ್ರತಿ ವರ್ಷ ಬೇಟಿ ನೀಡುತ್ತಿದ್ದಾರೆ ಎಂದರು.

ಹೊಸನಗರದ ಸಮೀಪದ ಹಳ್ಳಿಯ ಸಾರ್ವಜನಿಕರು ಸೇರಿ ನಿರ್ಮಿಸಿದ ಕೆರೆಯನ್ನು ನೀಡಿ ಶಿವಮೊಗ್ಗದ ಪ್ರಕೃತಿ ಪ್ರಿಯರು ನಗರದ ಸುತ್ತ ಮುತ್ತಲ ಕೆರೆಗಳ ಅಭಿವೃದ್ಧಿಗೆ ಪ್ರಯತ್ನಿಸುತ್ತಿರುವಾಗ ಈ ಕೆರೆ ಮುಚ್ಚಿ ಹೊಗಿರವ ವಿಚಾರ ತಿಳಿದು ಪುನಃ ಇದನ್ನು ಅಭಿವೃದ್ಧಿ ಪಡಿಸಲು ತೀರ್ಮಾನ ತೆಗೆದುಕೊಂಡು ಎಲ್ಲರೂ ಕೈಜೋಡಿಸಿ ಸರ್ಕಾರದ ನೆರವಿಲ್ಲದೆ ಎಂಟು ಲಕ್ಷ ಇಪ್ಪತ್ತೈದು ಸಾವಿರ ಇದುವರೆವಿಗೂ ವೆಚ್ಚ ಮಾಡಲಾಗಿದೆ, ಎರಡು ಎಕರೆ ಕೆರೆ ಉಳಿದ ಬಾಗದ ಸಾವಿರ ಸಸಿಗಳನ್ನು ನೆಡುವ ಕಾರ್ಯ ಬರದಿಂದ ಸಾಗಿದ್ದು ಎಲ್ಲಾ ಪ್ರಕೃತಿ ಪ್ರಿಯರು ಆಗಮಿಸಿ ಅವರ ಶಕ್ತಾನುಸಾರ ಶ್ರಮದಾನ ಮಾಡಬಹುದಾಗಿದೆ ಎಂದು ತ್ಯಾಗರಾಜ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಚಾರಣಕ್ಕೆ ಅವಕಾಶ ವಿಲ್ಲದಿದ್ದರೂ, ಸಂದರ್ಭಾನುಸಾರ ಸಾಮಾಜಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಸದಸ್ಯರು ಸದಾ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಮಾಡಲು ತರುಣೋದಯ ಘಟಕ ಶ್ರಮಿಸುತ್ತಿದೆ ಎಂದು ಕಾರ್ಯದರ್ಶಿ ಸುರೇಶ್ ಕುಮಾರ್ ತಿಳಿಸಿದರು.
ಮಳೆಗಾಲ ಪ್ರಾರಂಭ ವಾಗುವುದಕ್ಕಿಂತ ಮುಂಚೆ ಈ ಕೆರೆ ಕಾರ್ಯ ಪೂರ್ಣಗೊಳಿಸುವ ಸಲುವಾಗಿ ಜೆ.ಸಿ.ಬಿ. ಯಂತ್ರೋಪಕರಣಗಳನ್ನು ಉಪಯೋಗಿಸಿ ಎರಡು ತಿಂಗಳಲ್ಲಿ ಇಷ್ಟು ಕಾರ್ಯ ಮಾಡಲು ಸಾಧ್ಯ ವಾಗಿದೆ. ಈ ಕಾರ್ಯದಲ್ಲಿ ಸದಾ ತಮ್ಮ ಸಮಯವನ್ನು ನೀಡುತ್ತಿರುವ, ಪ್ರೋ.ಚಂದ್ರಶೇಖರ್, ಬಾಲುನಾಯ್ಡು, ರಂಗನಾಥ್, ಪ್ರಕಾಶ್ ಹಾಗೂ ಅವರ ಸಂಗಡಿಗರು ಪಣತೊಟ್ಟಿ ನಿಂತಿರುವುದು ಉತ್ತಮ ಕಾರ್ಯ ಮಾಡಲು ಸಾದ್ಯವಾಗಿದೆ ಎಂದು ಎಸ್. ಉಮೇಶ್ ತಿಳಿಸಿದರು.

ಶಿವಮೊಗ್ಗದ ಪರಿಸರ ಪ್ರಿಯರು, ದಾನಿಗಳು ಹಲವಾರು ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಿರುವುದು ಹಾಗೂ ಇಂದು ಯೂತ್ ಹಾಸ್ಟೆಲ್ಸ್ ತರುಣೋದಯ ಘಟಕದ ಸದಸ್ಯರು ಆಗಮಿಸಿ ಶ್ರಮ ದಾನ ಮಾಡಿರುವುದರಿಂದ ಪಾರ್ಕ್ ಹೊರ ಆವರಣವು ಶುಚಿ ಗೊಂಡಿದ್ದು, ಮುಂದೆ ನಗರಾಭಿವೃದ್ಧಿ ಮಂಡಳಿ ಮತ್ತು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಇನ್ನೂ ಉತ್ತಮ ಕಾರ್ಯ ಮಾಡುವ ಹೊಣೆ ನಮ್ಮದಾಗಿದೆ ಎಂದು ಬಾಲುನಾಯ್ಡು ತಿಳಿಸಿದರು. ಉತ್ತಮ ಕಾರ್ಯಕ್ಕೆ ಶಿವಮೊಗ್ಗ ನಗರದ ನಾಗರೀಕರು ಸದಾ ಸ್ವಂದಿಸುತ್ತಾರೆ, ಎಲ್ಲರ ನೆರವಿನಿಂದ ಇಷ್ಟರ ಮಟ್ಟಿಗೆ ಕಾರ್ಯಸಾದಿಸಲು ಸಾಧ್ಯವಾಗುತ್ತಿದೆ ಎಂದು ಪ್ರೋ.ಎ.ಎಸ್.ಚಂದ್ರಶೇಖರ್ ತಿಳಿಸಿದರು. ಈ ಸಂಧರ್ಭದಲ್ಲಿ ಅಭಿಷೇಕ್, ಪೃಥ್ವಿ, ಡಾ.ಪ್ರಕೃತಿ ಮಂಚಾಲೆ, ಶಣೈ, ಪ್ರಕಾಶ್ ಉಪಸ್ಥಿತರಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153