ಶಿವಮೊಗ್ಗ ಜಿಲ್ಲಾ ಅಕ್ಕಿ-ಗಿರಣಿ ಮಾಲಿಕರ ಸಂಘ ಹಾಗೂ ಶಿವಮೊಗ್ಗ ದಿನಸಿ ವರ್ತಕರ ಸಂಘದ ವತಿಯಿಂದ ಜುಲೈ 16ರಂದು ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ಸಾಗರ ರಸ್ತೆ ಎ.ಪಿ.ಎಂ.ಸಿ ಗೇಟ್ ಮುಂಭಾಗದ ಆವರಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುವ ಕಾರ್ಯಕ್ರಮ ೧೨.೦೦ ಘಂಟೆಗೆ ಮನವಿಯನ್ನು ಸಲ್ಲಿಸಲಾಗುವುದು.
ಈಗಾಗಲೆ ಅನೇಕ ದಶಕಗಳಿಂದ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಜನರ ಅತ್ಯಾವಶ್ಯಕ ಆಹಾರವಾದ ಅಕ್ಕಿ ಮತ್ತು ದವಸಧಾನ್ಯದ ತೆರಿಗೆಯ ವ್ಯಾಪ್ತಿಯಿಂದ ಹೊರಗಿಟ್ಟಿದ್ದು. ಈಗ ಕೇಂದ್ರ ಸರ್ಕಾರವು ಅಕ್ಕಿ ಮತ್ತು ದವಸ ಧಾನ್ಯಗಳ ಮೇಲೆ ೫% ಜಿ.ಎಸ್.ಟಿ ತೆರಿಗೆಯನ್ನು ಪ್ರಸ್ತಾಪಿಸಿದ್ದು (ಬ್ರಾಂಡೆಡ್ ಮತ್ತು ಅನ್-ಬ್ರಾಂಡೆಡ್) ಅಕ್ಕಿ ಸೇವಿಸುವ ಭಾರತ ಜನಸಂಖ್ಯೆಯ ಸುಮಾರು ೬೦-೭೦ರಷ್ಟು ಅಕ್ಕಿ ಮತ್ತು ದವಸಧಾನ್ಯ ಸೇವಿಸುವ ಇಡೀ ಸಮುದಾಯ, ಮತ್ತು ಅಕ್ಕಿಮತ್ತು ದವಸ ಧಾನ್ಯಗಳ ಉಧ್ಯಮವು ಊಹಿಸಲಾಗದ ಸಂಕಷ್ಟಕ್ಕೆ ಸಿಲುಕುತ್ತದೆ.
ಅಕ್ಕಿ ಮತ್ತು ದವಸಧಾನ್ಯ ಸೇವಿಸುವ ಸಮುದಾಯ ಮತ್ತು ಉದ್ದಿಮೆದಾರರನ್ನು ಉಳಿಸಲು ಮತ್ತು ಅಕ್ಕಿ ಮತ್ತು ದವಸಧಾನ್ಯಗಳ ಮೇಲಿನ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಹಿಂಪಡೆಯುವAತೆ ಒತ್ತಾಯಿಸಲು, ಕರ್ನಾಟಕ ರಾಜ್ಯ ಅಕ್ಕಿ-ಗಿರಣಿ ಮಾಲಿಕರ ಸಂಘ ಮತ್ತು ದಿನಸಿ ವರ್ತಕರ ಸಂಘದ ಕರೆಯ ಮೇರೆಗೆ, ನಾವೆಲ್ಲರೂ ಜೊತೆಗೂಡಿ ದಿನಾಂಕ:ಜುಲೈ ೧೫ ಮತ್ತು ೧೬ರಂದು ನಮ್ಮೆಲ್ಲ ವ್ಯಾಪಾರ-ವಹಿವಾಟನ್ನು ಸಂಪುರ್ಣ ಬಂದ್ ಮಾಡಿ ಅಕ್ಕಿ ಮತ್ತು ದವಸ ಧಾನ್ಯಗಳ ಮೇಲೆ ಕರ ಹೇರುವ ಯೋಜನೆಯನ್ನು ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ.

ಈ ಪ್ರತಿಭಟನೆಗೆ ಜನಸಾಮಾನ್ಯರಿಗೆ ಹೊರೆಯಾಗುತ್ತಿರುವುದರಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸಂಪೂರ್ಣ ಬೆಂಬಲ ನೀಡಿದೆ. ಈ ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕಷರಾದ ಎನ್. ಗೋಪಿನಾಥ್, ಉಪಾಧ್ಯಕ್ಷರಾದ ಬಿ. ಗೋಪಿನಾಥ್,ಕಾರ್ಯದರ್ಶಿ ವಸಂತ್ ಹೋಬಳಿದಾರ್,ಜಂಟಿಕಾರ್ಯರ್ಶಿ ಜಿ. ವಿಜಯಕುಮಾರ್, ಶಿವಮೊಗ್ಗ ಜಿಲ್ಲಾ ಅಕ್ಕಿ-ಗಿರಣಿ ಮಾಲಿಕರ ಸಂಘದ ಅಧ್ಯಕ್ಷರಾದ ಶಿವಮೂರ್ತಿ ಕೆ.ಎಸ್. ಕಾರ್ಯದರ್ಶಿ ನಾಗೇಶ್ ಎನ್.ಟಿ. ಶಿವಮೊಗ್ಗ ದಿನಸಿ ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಟಿ.ಎನ್ ಲಕ್ಷಿö್ಮಕಾಂತ್, ನಿರ್ದೇಶಕ ಉಮೇಶ್,ವಾಣಿಜ್ಯ ಸಂಘದ ನಿರ್ದೇಶಕರುಗಳು, ಸದಸ್ಯರುಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…