ರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರು ಗ್ರಾಮದ  ಮಧ್ಯಮ ವರ್ಗದ ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದಿರುವ  ಕೃಷಿಕ ದಂಪತಿ ತಿಮ್ಮಪ್ಪ ಗೌಡ, ಜಯಂತಿ ಅವರ ಪುತ್ರನಾಗಿದ್ದು,ಅಪ್ಪಟ ಹಳ್ಳಿ ಪ್ರತಿಭೆ ಡಾ| ಪ್ರೇಮಕುಮಾರ ಅವರ ಇಂದಿನ ಯಶಸ್ಸು ಇಡೀ ಗ್ರಾಮಕ್ಕೆ ಮಾದರಿ ತರುವಂತಹದು!!
ಹೌದು ಬಹುತೇಕ ಯುವಕರು ಉನ್ನತ ವ್ಯಾಸಂಗ ಮಾಡಿ, ನಗರ ಜೀವನಕ್ಕೆ ಮಾರುಹೋಗಿರುವ ಇಂದಿನ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಓದಿ, ಪೋಷಕರ ಕನಸನ್ನ ಸಾಕಾರ ಮಾಡಿರುವ ಹೆಗ್ಗಳಿಕೆ ಪ್ರೇಮ ಕುಮಾರ್ ಅವ್ರಿಗೆ ಸಲ್ಲುತ್ತದೆ.

ಇಂದು ನಗರ ಪ್ರದೇಶದ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸೆಡ್ಡು ಹೊಡೆದು ವೈದ್ಯಕೀಯ ವ್ಯಾಸಂಗ ಮಾಡಿ ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಸಾಧನೆಗೈಯಬಹದು ಎನ್ನುವುದಕ್ಕೆ ಉತ್ತಮ ನಿದರ್ಶನರಾಗಿದ್ದಾರೆ.!!
ಪ್ರಾಥಮಿಕ, ಹಾಗೂ ಪ್ರೌಢ ಶಿಕ್ಷಣವನ್ನ ಕಲ್ಲೂರು ಹೆದ್ದಾರಿಪುರ ಶಾಲೆ ರಿಪ್ಪನ್ ಪೇಟೆಯಲ್ಲಿ ಪಡೆದು, ಪದವಿಪೂರ್ವ ಶಿಕ್ಷಣವನ್ನ ಅಮೃತ ಕಾಲೇಜು ಗರ್ತಿಕೆರೆ ಪಡೆದು ನಂತರ ವೈದ್ಯಕೀಯ ಪದವಿಗೆ ಅರ್ಹತೆ ಪಡೆದು ಬೆಂಗಳೂರಿನ ಪ್ರತಿಷ್ಠಿತ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್ ನಲ್ಲಿ ಪದವಿ ಪಡೆದಿರುತ್ತಾರೆ.ಪ್ರಸ್ತುತವಾಗಿ ಬೆಂಗಳೂರುನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮಿಳುನಾಡು ಚೆನೈ ನಲ್ಲಿ ನೆಡೆದ ಇಂಡಿಯನ್ ಎಂಪೇರ್ ಯುನಿನಿವರ್ಸಿಟಿ UDC ಕೊಡಮಾಡುವ “ವೈದ್ಯಭೂಷಣ ಪ್ರಶಸ್ತಿ” ಹಾಗೂ ಸಾಮಾಜಿಕವಾಗಿ ಸೇವೆಗಾಗಿ ನೀಡುವ ಡಾಕ್ಟರೇಟ್ ಗೌರವ ನೀಡಿ  ಪುರಸ್ಕಾರ ನೀಡಿದ್ದು ಹೊಸನಗರ -ತೀರ್ಥಹಳ್ಳಿ ಕೀರ್ತಿಯನ್ನ ಹೆಚ್ಚಿಸಿದ್ದಾರೆ.ರಿಪ್ಪನ್ ಪೇಟೆಯ ಗ್ರಾಮೀಣ ಯುವ ವೈದ್ಯನ ಅಭೂತಪೂರ್ವ ಸಾಧನೆಗೆ ತೀರ್ಥಹಳ್ಳಿ-ಹೊಸನಗರ ಭಾಗದ ಗಣ್ಯರು, ಸ್ನೇಹಿತರು, ಸಂಬಂಧಿಕರು, ಸಂತಸ ವ್ಯಕ್ತಪಡಿಸಿದ್ದು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವೈದ್ಯಕೀಯ ಸಾಧನೆಗಳು…


›››2018 ರ 4ನೇ ವರ್ಷದ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕೇರಳ – ಕರ್ನಾಟಕ ರಾಜ್ಯದಲ್ಲಿ ತೀವ್ರತರದ ಪ್ರವಾಹ ಉಂಟಾದ ಸಂದರ್ಭದಲ್ಲಿ ಸ್ವ ಆಸಕ್ತಿ ಮೇರೆಗೆ, ಪ್ರವಾಹ ಪೀಡಿತ ಸ್ಥಳಕ್ಕೆ ನೇರವಾಗಿ ಕೊಡಗು ಹಾಗೂ ಕೇರಳದ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿ health on Wheels ಎಂಬ ಉಚಿತ ಅರೋಗ್ಯ ಶಿಬಿರ ಏರ್ಪಡಿಸಿ ಅಲ್ಲಿನ ಜನರ ಅರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸಿರುತ್ತಾರೆ.
ಇವೆಲ್ಲದರ ಮದ್ಯೆ ಇಡೀ ವಿಶ್ವ ಸಮುದಾಯವನ್ನ ಬೆಚ್ಚಿ ಬೀಳಿಸಿದ ಕೋವಿಡ್ ಮಹಾಮಾರಿ, ದೇಶಕ್ಕೆ ಅಪ್ಪಲಿಸಿದ ಸಂದರ್ಭದಲ್ಲಿ ಅದೆಷ್ಟೋ ವೈದ್ಯರುಗಳು ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದು ಅತ್ಯಂತ ಗಮನಾರ್ಹವಾದುದು.

ಕೋವಿಡ್ ಮಹಾಮಾರಿಯಂತಹ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಬೆಂಗಳೂರು ದಕ್ಷಿಣ ವಾರ್ ರೂಮ್ ಮೇಲ್ವಿಚಾರಕರಾಗಿ ಮಹತ್ತರ ಜವಾಬ್ದಾರಿಯನ್ನ ಅತ್ಯುತ್ತಮವಾಗಿ ನಿರ್ವಹಣೆ ಮಾಡಿ,ಸ್ಯಾಂಪಲ್ ಪರೀಕ್ಷೆ, ರೋಗಿಗಳಿಗೆ ಸೂಕ್ತ ಆಸ್ಪತ್ರೆಯಾ ಬೆಡ್ ಹೊಂದಿಸುವಿಕೆ, ಸರಿಯಾದ ಸಮಯಕ್ಕೆ ರೋಗಿಗಳಿಗೆ ಬೇಕಾದ ಸೌಲಭ್ಯ, ಹಾಗೂ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ರೋಗಿಗಳ ಇನ್ನೊಂದೆಡೆಗೆ ಸ್ಥಳಾತರ, ಮುಂತಾದ ಪ್ರಕ್ರಿಯೆಗಳಲ್ಲಿ ಬೆಂಗಳೂರು ದಕ್ಷಿಣ ವಾರ್ ರೂಮ್ ನಲ್ಲಿ ದಿನದ 24 ಗಂಟೆಯೂ ಸಹ ಸೇವೆ ಸಲ್ಲಸಿದ್ದು ಗಮನಾರ್ಹವಾದುದು…
›››ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ನಂತರ ಸರ್ಕಾರ ಕೋವಿಡ್ ಹತೋಟಿ ತರುವ ನಿಟ್ಟಿನಲ್ಲಿ ಲಸಿಕೆ ನೀಡಲು ತಯಾರಿ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರು ಲಸಿಕೆ ತಗೆದುಕೊಳ್ಳಲು ಹಿಂದೇಟು ಹಾಕುತ್ತಿದುದು ಕೆಲವೊಂದು ಕಡೆಗೆ ಸರ್ವೇ ಸಾಮಾನ್ಯವಾಗಿತ್ತು,ಇಂತಹ ಸಂದರ್ಭದಲ್ಲಿ ಜನರಿಗೆ ಪೂರ್ಣ ಆರೋಗ್ಯ ಅರಿವು ಮೂಡಿಸಿ ಬೆಂಗಳೂರು ನಗರ ಜಿಲ್ಲೆ 100% ಲಸಿಕೆ ನೀಡುವಿಕೆಯಲ್ಲಿ ಸಾಧನೆಗೈದ ವೈದ್ಯರ ತಂಡದಲ್ಲಿ ಸೇವೆ ಸಲ್ಲಿಸಿದ್ದು.ಡಾ ಪ್ರೇಮಕುಮಾರ ಅವರ ವೈದ್ಯಕೀಯ ಜೀವನದ ಬಹುದೊಡ್ಡ ಮೈಲುಗಲ್ಲು ಆಗಿದೆ ಎಂದರೆ ತಪ್ಪಾಗಲಾರದು.!!!

›››ಕೋವಿಡ್ ಮಹಾಮಾರಿ ಸಂದರ್ಭ ರಾಜ್ಯದಲ್ಲಿ ಆಕ್ಸಿಜನ ಸಿಗದೇ ಹಲವಾರು ಕಡೆಗೆ ಸಾಕಷ್ಟು ಜನರು ಸಾವಿನಪ್ಪಿದ ಘಟನೆಗಳು ನೆಡೆದಿವೆ.ಆದ್ದರಿಂದ ಅನೇಕ ಕಡೆಗೆ ಸ್ವಯಂ ಪ್ರೇರಿತವಾಗಿ ಸಂಘ ಸಂಸ್ಥೆಗಳು ಸರ್ಕಾರಕ್ಕೆ ಇಲಾಖೆಗೆ ಸಹಕಾರ ನೆಡಿದ್ದು ಅದರಂತೆ ತವರು ಜಿಲ್ಲೆ ತೀರ್ಥಹಳ್ಳಿ ‘ಟೀಮ್ ಉಸಿರು “ಎಂಬ ತಂಡದಲ್ಲಿ ಗುರುತಿಸಿಕೊಂಡು ತುರ್ತು ಪರಿಸ್ಥಿತಿ ರೋಗಿಗಳಿಗೆ ಒಕ್ಸಿಜನ್ ಪೂರೈಸುವ ಯೋಜನೆಯಲ್ಲಿ ಸಹ ಪಾತ್ರ ವಹಿಸಿ ಸಾಮಾಜಿಕವಾಗಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.
››ಕರ್ನಾಟಕದ ಹಲವಾರು ಕಡೆ, ಹಾಗೂ ಬೆಂಗಳೂರು ಸುತ್ತ -ಮುತ್ತ ಹಲವಾರು ಉಚಿತ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡು ವೈದ್ಯಕೀಯ ಸೇವೆ ನೀಡಿದ್ದಾರೆ.

›››ಆರೋಗ್ಯವೇ ಜೀವನದ ಬಹುದೊಡ್ಡ ಭಾಗ್ಯ ಹಾಗಾಗಿ ನಿತ್ಯ ಉತ್ತಮ ದಿನಚರಿ ನಮ್ಮ ಅರೋಗ್ಯ ದೃಢವಾಗಿರಲು ಸಹಕಾರಿಯಾಗಲಿದ್ದು ವೈದ್ಯರಾಗಿ ಬಿಡುವಿಲ್ಲದ ಸಮಯದಲ್ಲಿಯೂ ಸಹ ಜಿಮ್, ಯೋಗದಲ್ಲಿಯೂ ತಮ್ಮನ್ನ ತೊಡಗಿಸಿಕೊಂಡು, 5 ನಿಮಿಷ 45 ಸೆಕೆಂಡ್ ಗಳ ಕಾಲ ಸರ್ವಾಂಗಾಸನ ಮಾಡಿ HWR ನಿಂದ (Certificate Of Recognition – Youngest Indian Doctor To Hold Sarvangasana for 5 min 45  seconds) ಯೋಗದಲ್ಲಿಯೂ ಸಹ ದಾಖಲೆ ಮಾಡಿದ್ದಾರೆ..
ಇದೆ ಸಂದರ್ಭದಲ್ಲಿ ಡಾ ಪ್ರೇಮಕುಮಾರ್ ಮಾತನಾಡಿ ಇಂತಹ ಸೇವೆ ಮಾಡಲು ಅವಕಾಶ ನೀಡಿದ ಗುರುಗಳಿಗೂ ಸದಾ ಜೊತೆಗೆ ಇದ್ದು ಸಲಹೆ ನೀಡಿ ಬೆನ್ನು ತಟ್ಟಿದ ಸ್ನೇಹಿತರಿಗೂ, ಕುಟುಂಬ ಬಳಗಕ್ಕೂ,ಹೃದಯಪೂರ್ವಕ ಅಭಿನಂದನೆಗಳುಗಳನ್ನ ಸಲ್ಲಿಸಿದ್ದಾರೆ.
ತಾನು ಬೆಳೆದ ಹುಟ್ಟೂರಿನ ಜನತೆಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಆಗಬೇಕು,ನಮ್ಮ ಸೇವೆ ನಮ್ಮ ಊರಿನ ಜನರಿಗೂ ಲಭಿಸಬೇಕು ಎನ್ನುವುದು ನನ್ನ ಮಹದಾಸೆ ಎನ್ನುತ್ತಾರೆ ಡಾ ಪ್ರೇಮಕುಮಾರ್….

ಮಾಹಿತಿ :ಅಜಿತ್ ಗೌಡ ಬಡೇನಕೊಪ್ಪ…