ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಶ್ರೇಷ್ಠವಾದ ದಾನ ರಕ್ತದಾನವಾಗಿದೆ ರಕ್ತದ ಕೊರತೆಯಿಂದಾಗಿ ಇಂದು ಬಹಳಷ್ಟು ಜನ ಪ್ರಾಣ ನೀಡಿದ್ದಾರೆ ಎಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಗೀತಾ ಲಕ್ಷ್ಮಿಯು ಇವರು ನುಡಿದರು. ಅವರು ರೋಟರಿ ಪೂರ್ವ ಸಂಸ್ಥೆ ರಾಜೇಂದ್ರ ನಗರ ಇದರ ವಾರದ ಸಭೆಯಲ್ಲಿ ಭಾಗವಹಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಮುಂದುವರಿದರು ಸಹ ಇಂದಿಗೂ ರಕ್ತ ಹಾಗೂ ಚರ್ಮವನ್ನು ಕೃತಕವಾಗಿ ಉತ್ಪಾದನೆ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ವೈದ್ಯಕೀಯ ವಿಜ್ಞಾನಕ್ಕೆ ಇದು ಅತ್ಯಂತ ದೊಡ್ಡ ಸವಾಲಾಗಿದೆ ನಾವು ಮಾಡುವ ರಕ್ತದಾನ ಮೂರು ಜನರ ಜೀವವನ್ನು ಉಳಿಸುತ್ತದೆ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಆದ್ದರಿಂದ ಪುರುಷರು ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಒಳ್ಳೆಯದು. ರಕ್ತದಾನ ಮಾಡುವುದರಿಂದ ಕೊಬ್ಬಿನ ಅಂಶ ಹೊರ ಹೋಗುತ್ತದೆ ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು ರಕ್ತದಾನ ಯಾರು ಮಾಡಬಹುದು ಪ್ರಪಂಚದಲ್ಲಿ ರಕ್ತದ ಕೊರತೆಯಿಂದ ಪ್ರತಿನಿತ್ಯ ಪ್ರಾಣ ನೀಡುತ್ತಿರುವವರ ಹೃದಯ ಸಂಬಂಧಿ ರಕ್ತದೊತ್ತಡ ಹಾಗೂ ಇತರೆ ಕಾಯಿಲೆ ಇರುವವರು ಕೂಡ ವೈದ್ಯರ ಬಳಿ ತಪಾಸಣೆ ನಡೆಸಿ ರಕ್ತದಾನ ಮಾಡಬಹುದು.
ಇಂದು ಜಿಲ್ಲಾ ಮೆಗನ್ ಆಸ್ಪತ್ರೆಯಲ್ಲಿ ಶೇಕಡ 50ರಷ್ಟು ರೋಗಿಗಳಿಗೆ ನೀಡಲು ರಕ್ತದ ಕೊರತೆ ಇದೆ ಆದ್ದರಿಂದ ಯುವಕರು ಸಂಘ ಸಂಸ್ಥೆಯವರು ಹಾಗೂ ರೋಟರಿ ಇಂತಹ ಸೇವಾ ಸಂಸ್ಥೆಯವರು ರಕ್ತದಾನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಹೆಚ್ಚು ಹೆಚ್ಚು ಜನರಿಗೆ ರಕ್ತದಾನ ಮಾಡಲು ಪ್ರೋತ್ಸಾಹಿಸಬೇಕಾಗಿದೆ. ಎಂದು ಡಾಕ್ಟರ್ ಗೀತಾ ಲಕ್ಷ್ಮಿ ಅವರು ರಕ್ತದಾನ ಮಾಡಲು ಕರೆ ನೀಡಿದರು.
ರೋಟರಿ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಿ ಕುಮಾರಸ್ವಾಮಿ ಅವರು ಪ್ರಪಂಚದಲ್ಲಿ ರಕ್ತ ಹೀನತೆಯಿಂದ ಬಹಳಷ್ಟು ಜನ ಸಾವಿಗೀಡಾಗುತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಅತಿ ಹೆಚ್ಚು ರಕ್ತ ಹೀನತೆ ಕಂಡುಬರುತ್ತಿದೆ ನಮ್ಮ ಆರೋಗ್ಯ,ಆಹಾರ ಪದ್ಧತಿ, ಇವುಗಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗಿದೆ,ರಕ್ತದಾನ ಮಾಡಿ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರೋಣ. ರೋಟರಿ ಸಂಸ್ಥೆಯ ಮೂಲಕ ಹೆಚ್ಚು ಹೆಚ್ಚು ಜನರಿಗೆ ರಕ್ತದಾನ ಮಾಡಲು ಪ್ರೋತ್ಸಾಹಿಸಿ ಅವಶ್ಯಕತೆ ಇರುವವರಿಗೆ ಸಹಾಯ ನೀಡೋಣ.
ಶಾಲಾ ಕಾಲೇಜುಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಆದ್ದರಿಂದ ನಮ್ಮ ಸಂಸ್ಥೆಯಿಂದ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಾರ ಹಾಗೂ ಶಿಬಿರಗಳನ್ನು ಏರ್ಪಡಿಸಿ ರಕ್ತದಾನ ದ ಮಹತ್ವವನ್ನು ಸಮಾಜಕ್ಕೆ ತಿಳಿಸಿ ಕೊಡುವ ಕಾರ್ಯಕ್ಕೆ ಸಂಸ್ಥೆಯು ಈ ವರ್ಷದಲ್ಲಿ ಯೋಜನೆಗಳನ್ನು ರೂಪಿಸಿದ್ದು ಸಂಸ್ಥೆಯ ವತಿಯಿಂದ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು ಮಾಜಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ವಿಜಯಕುಮಾರ್ ಕೆ ಕಾರ್ಯದರ್ಶಿಯರಾದ ಕುಮಾರಸ್ವಾಮಿ ಕೆ ಇನ್ನರ್ ವೀಲ್ ಅಧ್ಯಕ್ಷರಾದ ಮಧುರ ಮಹೇಶ್ ನಿಕಟಪುರುವ ಅಧ್ಯಕ್ಷರಾದ ಜಯಂತಿ ವಾಲಿ ಕಾರ್ಯದರ್ಶಿಯವರಾದ ಬಿಂದು ವಿಜಯ ಕುಮಾರ್ ಉಪಸ್ಥಿತರಿದ್ದರು.