ಶಿವಮೊಗ್ಗ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಹಲವು ಮನೆಗಳು ಹಾನಿಗೀಡಾಗಿದ್ದು, ಸರ್ಕಾರ ಯಾವುದೇ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥಗೌಡ ಆರೋಪಿಸಿದರು.

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಗರವಳ್ಳಿ ಸುತ್ತಮುತ್ತ ಹಲವರ ಮನೆಗಳು ಬಿದ್ದಿವೆ. ಕೊಟ್ಟಿಗೆಗಳು ನಾಶವಾಗಿವೆ. ಇಷ್ಟೊಂದು ಹಾನಿಯಾದರೂ ಅಧಿಕಾರಿಗಳಾಗಲೀ, ಶಾಸಕರಾಗಲೀ ಭೇಟಿ ನೀಡಿಲ್ಲ. ಮನೆ ಸಂಪೂರ್ಣ ಹಾನಿಗೊಳಗಾದರೆ 6 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ.

ಆದರೆ, ಇದುವರೆಗೂ ಯಾರಿಗೂ ಹಣ ನೀಡಿಲ್ಲ. ಬಡವರ ಕಣ್ಣೀರು ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಆರೋಪಿಸಿದರು.ಈ ತಿಂಗಳ ಅಂತ್ಯದೊಳಗೆ ಸಂತ್ರಸ್ಥರಿಗೆ ಪರಿಹಾರ ನೀಡದಿದ್ದರೆ ತಾಲೂಕು ಕಚೇರಿ ಎದುರು ನಾನು ಪ್ರತಿಭಟನೆ ನಡೆಸುವುದಲ್ಲದೇ ಅಲ್ಲೇ ಮಲಗಬೇಕಾಗುತ್ತದೆ ಎಂದರು.

ವರದಿ ಮಂಜುನಾಥ್ ಶೆಟ್ಟಿ…