ಶಿಕಾರಿಪುರದ ಗ್ರಾಮವೊಂದರ ಯುವತಿ ನಾಪತ್ತೆಯಾಗಿದ್ದು ಆ ವಿಚಾರಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕ್ ನಾಯ್ಕ್ ರವರು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಿಎಸ್ಐ ರವಿಕುಮಾರ್ ರವರು ಅವಾಚ್ಯ ಶಬ್ದದಿಂದ ನಿಂದಿಸಿ ಜಾತಿ ನಿಂದನೆ ಮಾಡಿರುತ್ತಾರೆ ಇವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ ಮಲಿಕ್ ನಾಯಕ್ ರವರಿಂದ ಸ್ಟೇಷನ್ ಮುಂಭಾಗದಲ್ಲೇ ಧರಣಿ ಕುಳಿತಿದ್ದಾರೆ.

ಮಲಿಕ್ ನಾಯಕ್ ರವರು ಗೃಹ ಸಚಿವರ ತವರು ಜಿಲ್ಲೆಯಲ್ಲೇ ಪೋಲಿಸ್ ರವರ ದುರಾಡಳಿತ ಇತರ ಆದರೆ ರಾಜ್ಯದ ಗತಿಯೇನು ನಮ್ಮ ಗ್ರಾಮದ ಹೆಣ್ಣು ಮಗಳನ್ನು ಹುಡುಕಿಕೊಡಿ ಎಂದು ಠಾಣೆಗೆ ದೂರು ಕೊಡಲು ಹೋಗಿದ್ದೆ ತಪ್ಪಾ (ಗ್ರಾಮ ಪಂಚಾಯ್ತಿ ಸದಸ್ಯನ ಪತಿಯ ) ಸ್ಥಿತಿ ಹೀಗಾದರೆ ಜನಸಾಮಾನ್ಯರ ಸ್ಥಿತಿ ಏನಾಗಬಹುದು ಎಂದು ಹೇಳಿದ್ದಾರೆ.ಈ ಪಿಎಸ್ಐ ರವಿಕುಮಾರ್ ಅವರನ್ನು ಅಮಾನತುಗೊಳಿಸಿ ಎಂದು ಆಗ್ರಹ ರಾತ್ರಿ ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಣಿ ಮಾಲತೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ನರಸಿಂಗನಾಯ್ಕ್ , ಯುವನಾಯಕರಾದ ರಾಘವೇಂದ್ರ ನಾಯಕ್ ,ಪುರಸಭಾ ಸದಸ್ಯರಾದ ಪ್ರಕಾಶ್ ,ಗೋಪಿ, ಮಂಜು ನಾಯ್ಕ್ ,ಬನ್ನೂರು ಚರಣ ,ಶ್ರೀಕಾಂತ್ ಹಾಗೂ ಸಾಕಷ್ಟು ಮುಖಂಡರು ಪಾಲ್ಗೊಂಡಿದ್ದರು.