ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಸಂಘದ ಶಾಂತಲಾ ಸ್ಫೇರೋಕ್ಯಾಸ್ಟ್ ಸಭಾಂಗಣದಲ್ಲಿ ದಿನಾಂಕ: ೨೧ ಮತ್ತು ೨೨ನೇ ಜುಲೈ ೨೦೨೨ರಂದು ಬೆಳಿಗ್ಗೆ ೧೦.೦೦ ಘಂಟೆಯಿAದ ಸಂಜೆ ೪.೦೦ ಘಂಟೆಯವರೆಗೆ ಎರಡು ದಿನಗಳು ವರ್ತಕರುಗಳಿಗೆ, ಉದ್ಯಮಿದಾರರಿಗೆ ಅಗತ್ಯವಾಗಿ ಬೇಕಾಗಿರುವ ”ಉದ್ದಿಮೆ ಪರವಾನಗಿ” (ಟ್ರೇಡ್ ಲೈಸೆನ್ಸ್) ಬೃಹತ್ ಮೇಳವನ್ನು ಎರಡನೇ ಬಾರಿಗೆ ಹಮ್ಮಿಕೊಳ್ಳಲಾಗಿ, ಇಂದು ಬೆಳಿಗ್ಗೆ ೧೦ ಘಂಟೆಗೆ ಸಂಘದ ಕಾರ್ಯದರ್ಶಿ ಶ್ರೀ ವಸಂತ್ ಹೋಬಳಿದಾರ್‌ರವರು ಸಾಂಕೇತಿಕವಾಗಿ ಮೇಳವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಹ-ಕಾರ್ಯದರ್ಶಿ ಜಿ.ವಿಜಯಕುಮಾರ್, ಗಣೇಶ್ ಎಂ. ಅಂಗಡಿ, ಮಹಾನಗರಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕ ವಸಂತ್ ಕುಮಾರ್, ಕಿರಿಯ ಆರೋಗ್ಯ ನಿರೀಕ್ಷಕ ಶಿವಮೂರ್ತಪ್ಪ÷ ಲಕ್ಕಣ್ಣನವರ್, ಸಿಬ್ಬಂಧಿಗಳಾದ ನಾಗರಾಜ್, ನವೀನ್, ರೇಣುಕಾ, ತೇಜಸ್ವಿನಿ, ಅನುಷಾ. ಶರತ್, ಪರಶುರಾಮ್, ಶ್ರೀನಿವಾಸ್ ಮುಂತಾದವರು ಇದ್ದರು.
ಕಳೆದ ಬಾರಿ ಸುಮಾರು ೫೫೦ಕ್ಕೂ ಹೆಚ್ಚು ಸದಸ್ಯರು ಪರವಾನಗಿ ಪಡೆದಿದ್ದು ಸದಸ್ಯ ಉದ್ದಿಮೆದಾರರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈ ಸಾರಿ ಹೆಚ್ಚು ಕಂಪ್ಯೂಟರ್‌ಗಳನ್ನು ಅಳವಡಿಸಿ ಮಹಾನಗರಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯೋನ್ಮುಖರಾಗಿದ್ದಾರೆ. ಆದಕಾರಣ ಸಂಘದ ಸದಸ್ಯರು, ನಗರದ ವರ್ತಕರುಗಳು ಹಾಗೂ ಉದ್ದಿಮೆದಾರಾರರು ಈ ಎರಡು ದಿನಗಳಂದು ಪರವಾನಗಿ ಪಡೆದು ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಹಾಗೂ ಕಳೆದ ಸಾರಿ ಅರ್ಜಿ ಸಲ್ಲಿಸಿ ಪರವಾನಗಿ ಪಡೆಯದೆ ಇದ್ದವರು, ಈ ಬಾರಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ಕೋರಲಾಗಿದೆ.