ಶಿಕಾರಿಪುರ ನ್ಯೂಸ್…
ಮಾಜಿ ಸಿಎಂ ಯಡಿಯೂರಪ್ಪ ಅವರು ಸ್ವಕ್ಷೇತ್ರ ಶಿಕಾರಿಪುರವನ್ನು ಪುತ್ರ ಬಿ.ವೈ. ವಿಜಯೇಂದ್ರ ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.ಶಿಕಾರಿಪುರ ತಾಲೂಕು ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡುವುದಾಗಿ ಬಗ್ಗೆ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ನಾನು ಕ್ಷೇತ್ರ ಬಿಟ್ಟುಕೊಡುತ್ತಿದ್ದರಿಂದ ಬಿ.ವೈ.ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಎಂದು ಹೇಳಿದ್ದಾರೆ.ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಇಲ್ಲಿ ಸ್ಥಾನ ತೆರವಾಗುವುದರಿಂದ ಅವರು ಸ್ಪರ್ಧಿಸುತ್ತಾರೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದು, ಶಿಕಾರಿಪುರ ಜನತೆ ಬೆಂಬಲ ನೀಡಬೇಕಾಗಿ ಮನವಿ ಮಾಡಿದ್ದಾರೆ.ಇಡಿ ತನಿಖೆ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ನಿಶ್ಚಿತ. ಇಲ್ಲಸಲ್ಲದ ಕಾರಣ ಹೇಳಿ ಕಾಂಗ್ರೆಸ್ ಗಲಾಟೆ ಎಬ್ಬಿಸುತ್ತಿದೆ. ಇಡಿ ತನ್ನ ಕರ್ತವ್ಯ ಮಾಡುತ್ತಿದೆ. ಅವರ ಕರ್ತವ್ಯಕ್ಕೂ ಅಡ್ಡಿ ಆತಂಕ ತರುವುದು ಶೋಭೆ ತರಲ್ಲ ಎಂದರು.
ಅವರು ತಪ್ಪೇ ಮಾಡದಿದ್ದರೆ ಚಿಂತೆ ಮಾಡೋದೇಕೆ…? ಎಂದು ಪ್ರಶ್ನಿಸಿದ ಬಿ.ಎಸ್.ವೈ., ಕಾಂಗ್ರೆಸ್ ಏನೇ ಸರ್ಕಸ್ ಮಾಡಿದರೂ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ. ರಾಜ್ಯದಲ್ಲಿ ಬಿಜೆಪಿಯವರೇ ಮುಖ್ಯಮಂತ್ರಿ ಆಗ್ತಾರೆ. ಭ್ರಮೆಯಲ್ಲಿ ನಾನೇ ಸಿಎಂ ಅಂತ ಇಬ್ಬರು ಕಚ್ಚಾಟ ಮಾಡ್ತಿರೋದನ್ನು ಜನ ನೋಡ್ತಾ ಇದ್ದಾರೆ. ಅವರು ಹಾಗೇ ಕಚ್ಚಾಡುತ್ತಿರಲಿ, ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು.ರಮೇಶ ಕುಮಾರ್ ಹೇಳಿಕೆಯಿಂದ ಕಾಂಗ್ರೆಸ್ ಬೆತ್ತಲೆಯಾಗಿದೆ. ನಾವು ಬೇಕಾದಷ್ಟು ಹಣ ಮಾಡಿದ್ದೇವೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಭ್ರಷ್ಟಾಚಾರಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ನಾನು ಹೇಳಿದ್ದು ನಿಜ ಅಂತ ರಮೇಶಕುಮಾರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸರ್ಕಾರದ ಖಜಾನೆ ಲೂಟಿ ಮಾಡಿದ್ದು ಸ್ಪಷ್ಟವಾಗಿದೆ. ಹಗಲು ದರೋಡೆ ಮಾಡಿರುವುದು ಸ್ಪಷ್ಟವಾಗಿದೆ. ರಾಜ್ಯದ ಉದ್ದಗಲಕ್ಕೂ ಇದೇ ವಿಷಯ ಇಟ್ಕೊಂಡು ಹೋಗ್ತೇವೆ. ರಾಜ್ಯದ ಜನತೆ ಮುಂದೆ ಈ ವಿಷಯ ಇಡ್ತೇವೆ. ಹಗಲು ರಾತ್ರಿ ದರೋಡೆ ಮಾಡಲು ಮತ್ತೆ ಕಾಂಗ್ರೆಸ್ ಬೇಕಾ ಎಂಬುದರ ಬಗ್ಗೆ ರಾಜ್ಯದ ಜನತೆ ಈ ಬಗ್ಗೆ ತೀರ್ಮಾನಿಸಲಿ ಎಂದು ಯಡಿಯೂರಪ್ಪ ಹೇಳಿದರು.ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲಿನ್ ಚಿಟ್ ನೀಡಿದ ವಿಚಾರದ ಬಗ್ಗೆ ಮಾತನಾಡಿ, ಈಶ್ವರಪ್ಪನವರಿಗೆ ರಿಲೀಫ್ ಸಿಕ್ಕಿದೆ. ನಿರಪರಾಧಿ ಎಂದು ಸಾಬೀತಾಗಿದೆ. ನಾನು ಮೊನ್ನೆನೇ ಅವರ ಜೊತೆ ಮಾತಾಡಿ, ಅಭಿನಂದನೆ ಸಲ್ಲಿಸಿದ್ದೇನೆ. ಮತ್ತೇ ಸಂಪುಟಕ್ಕೆ ಸೇರ್ಪಡೆ ಮಾಡೋದು ಸಿಎಂ ತೀರ್ಮಾನ. ಸಿಎಂ ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ಮಾಡ್ತಾರೆ ಎಂದು ಹೇಳಿದರು.