ದೆಹಲಿ ನ್ಯೂಸ್…

ಮಲೆನಾಡಿನ ರೈತರ ಪಾಲಿಗೆ ತೂಗುಗತ್ತಿಯಾಗಿರುವ
ಕಸ್ತೂರಿ ರಂಗನ್ ವರದಿ ಯನ್ನು ಅನುಷ್ಠಾನ ಮಾಡದಂತೆ ಹಾಗು ಮಲೆನಾಡಿನ ರೈತರ ಕೋರಿಕೆಯಂತೆ
ಪ್ರತ್ಯಕ್ಷ ಸರ್ವೇ ನಡೆಸುವಂತೆ ಕೇಂದ್ರ ಅರಣ್ಯ ಸಚಿವರಾದ ಶ್ರೀ ಭೂಪೆಂದ್ರ ಯಾದವ್ ಅವರನ್ನು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ರವರು ಹಾಗೂ ಕೇಂದ್ರ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ರವರು,ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಶ್ರೀ ಸಿ ಟಿ ರವಿರವರು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್, ರವರು ಸಚಿವರಾದ ಶ್ರೀ ಆರಗ ಜ್ಞಾನೇಂದ್ರರವರು *ಶ್ರೀ ಗೋವಿಂದ್ ಕಾರಜೋಳ ರವರು,ಸಂಸದರಾದ *ಶ್ರೀ ಬಿ ವೈ ರಾಘವೇಂದ್ರರವರು,ಶ್ರೀ ಪ್ರತಾಪ್ ಸಿಂಹರವರು, ಎಂಎಸ್ ಐಎಲ್ ಅಧ್ಯಕ್ಷರು ಶಾಸಕರಾದ ಶ್ರೀ ಹರತಾಳು ಹಾಲಪ್ಪನವರು ಶ್ರೀ ಜೀವರಾಜ್ ರವರು
ಅವರ ನೇತೃತ್ವದ ರಾಜ್ಯ ನಿಯೋಗದೊಂದಿಗೆ ಭೇಟಿಮಾಡಿ ಚರ್ಚೆ ನಡೆಸಿದರು.

ಮನವಿಯನ್ನು ಪುರಸ್ಕರಿಸಿದ ಶ್ರೀ ಭೂಪೆಂದ್ರ ಯಾದವ್ ರವರು ಸಮಿತಿ ರಚಿಸಿ, ಎಲ್ಲ ರಾಜ್ಯಗಳ ಸಲಹೆಗಳನ್ನು ಸ್ವೀಕರಿಸಿ, ರೈತರ ಹಿತ ಕಾಯುವ ವರದಿಯನ್ನು ಮುಂದಿನ ಒಂದು ವರ್ಷದ ಒಳಗಾಗಿ ಸಚಿವಾಲಯಕ್ಕೆ ಸಲ್ಲಿಸಲು ಸೂಚಿಸಿದ್ದಾರೆ .ಈ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…