ಶಿವಮೊಗ್ಗ ನಗರದಲ್ಲಿ ಜೂನ್ 10ರಂದು ನಂಜಪ್ಪ ಆಸ್ಪತ್ರೆ ಹಿಂಭಾಗ ನಿಲ್ಲಿಸಿದ್ದ ಕೆ ಎ 14 ಇ ಯು 4625 ನೋಂದಣಿ ಸಂಖ್ಯೆಯ ಸ್ಪ್ಲೆಂಡರ್‌ ಪ್ಲಸ್‌ ದ್ವಿ ಚಕ್ರ ವಾಹನವನ್ನು ಕಳ್ಳತನವಾಗಿರುತ್ತದೆ. ನಂತರ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0047/2022 ಕಲಂ 379 ಐಪಿಸಿ ರೀತ್ಯಾ ಪ್ರಕಣ ದಾಖಲಿಸಿಕೊಳ್ಳಲಾಗಿರುತ್ತದೆ.

ಜಯನಗರ ಪೊಲೀಸ್‌ ಠಾಣೆಯ ಪಿಐ, ಪಿಎಸ್‌ಐ ಮತ್ತು ಸಿಬ್ಬಂಧಿಗಳ ತಂಡವು ಸದರಿ ಪ್ರಕರಣದ ತನಿಖೆ ಕೈಗೊಂಡು ದಿನಾಂಕಃ-25-07-2022 ರಂದು ಪ್ರಕರಣದ ಆರೋಪಿತರಾದ 1)ರಾಹುಲ್‌ @ ಬ್ರಹ್ಮಾಂಡ, 21 ವರ್ಷ, ಹೊಸಮನೆ, ಶಿವಮೊಗ್ಗ, 2)ಹರ್ಷ 18 ವರ್ಷ, ಕಾಮಾಕ್ಷಿ ಬೀದಿ ಶಿವಮೊಗ್ಗ ಮತ್ತು ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದು, ಅರೋಪಿತರಿಂದ ಕಳ್ಳತನ ಮಾಡಿದ ಅಂದಾಜು ಮೌಲ್ಯ 4,80,000/- ರೂಗಳ ಒಟ್ಟು 10 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ…