ಕಳೆದೆರಡು ವರ್ಷಗಳಿಂದ ಕೊರೊನ ಮಹಾಮಾರಿ ಮತ್ತು ಲಾಕ್ ಡೌನ್ ನಿಂದ ಕೂಲಿ ಕಾರ್ಮಿಕರು , ವ್ಯಾಪಾರಸ್ಥರು , ಬಡವರು ಎಲ್ಲ ವರ್ಗದವರು ಆರ್ಥಿಕವಾಗಿ ಸಂಕಷ್ಟ ಕೀಡಾಗಿದ್ದಾರೆ ಅದರಂತೆ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಕೊಳಚೆ ಪ್ರದೇಶಗಳಿದ್ದು ಸುಮಾರು 25 ಸಾವಿರ ಬಡ ಅಸಂಘಟಿತ ಕಾರ್ಮಿಕ ಕುಟುಂಬಗಳು ಹಾಗೂ ಬಡ ಜನತೆ ಲಾಕ್ ಡೌನ್ ನಿಂದ ಕೆಲಸವಿಲ್ಲದೆ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿರುತ್ತದೆ ಬಡವರಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಗೋಧಿ ಮಾತ್ರ ಸಿಗುತ್ತದೆ ಆದರೆ ಮುಖ್ಯವಾಗಿ ಬೇಕಾಗಿರುವುದು ಅಡಿಗೆ ಅನಿಲ , ಅಡುಗೆ ಎಣ್ಣೆ ಇಂತಹ ಸಂದರ್ಭದಲ್ಲಿ ಅಡುಗೆ ಅನಿಲ ರೂ.850, ಅಡುಗೆ ಎಣ್ಣೆ ರೂ .50 ಇದೆ , ನಮ್ಮ ಭದ್ರಾವತಿ ನಗರ ವ್ಯಾಪ್ತಿಯಲ್ಲಿ ಸುಮಾರು ಇಪ್ಪತ್ತೇಳು ಸಾವಿರದ ಐನೂರು ಬಿಪಿಎಲ್ ಮತ್ತು ಸಾವಿರದ ಐನೂರು ಅಂತ್ಯೋದಯ ಪಡಿತರ ಚೀಟಿ ಹೊಂದಿ ಹೊಂದಿದೆ ಮೂವತ್ತು ಸಾವಿರ ಕುಟುಂಬಗಳು ವಾಸಿಸುತ್ತಿದ್ದು , ಈ ಮೇಲ್ಕಂಡ ಎಲ್ಲ ಮೂವತೈದು ಸಾವಿರ ಕುಟುಂಬಗಳಿಗೆ ಆರ್ಥಿಕವಾಗಿ ನೆರವಾಗಲು ಜಿಲ್ಲಾಧಿಕಾರಿಗಳ ವಿಶೇಷ ಅನುದಾನದಲ್ಲಿ ರೂ.3 ಕೋಟಿ ಹಣವನ್ನು ಭದ್ರಾವತಿ ನಗರಸಭೆಗೆ ನೀಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮೂವತ್ತೈದು ಸಾವಿರ ಬಡ ಕುಟುಂಬಗಳ ಖಾತೆಗೆ 1ಸಾವಿರ ರುಪಾಯಿಗಳನ್ನು ನಗರಸಭೆ ವತಿಯಿಂದ ಪಾವತಿಸಿ ನೊಂದ ಬಡವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಸಂಯುಕ್ತ ಜನತಾದಳದ ವತಿಯಿಂದ ಮನವಿ ಮಾಡಿಕೊಂಡರು .
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153