ಕರ್ನಾಟಕ ರಾಜ್ಯ ಚಾಣಕ್ಯ ಸೇವಾ ಸಂಘದ ವತಿಯಿಂದ ಭಾರತರತ್ನ ಸಂವಿಧಾನಶಿಲ್ಪಿ ಡಾ॥ ಭೀಮ್ ರಾವ್ ಅಂಬೇಡ್ಕರ್ ರವರ 130 ನೇ ಜಯಂತಿಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದಲ್ಲಿ ಹಲವಾರು ಕ್ರಮಗಳು ನೆರವೇರಿಸಬೇಕೆಂದು ಜಿಲ್ಲಾಧಿಕಾರಿಗಳೊಂದಿಗೆ ಮನವಿ ಮಾಡಿಕೊಂಡರು.
1. ಡಾ॥ ಭೀಮ್ ರಾವ್ ಅಂಬೇಡ್ಕರ್ ರವರ 105 ಅಡಿ ಎತ್ತರವುಳ್ಳ ಅಂಬೇಡ್ಕರ್ ಪ್ರತಿಮೆಯನ್ನು ವಿಮಾನ ನಿಲ್ದಾಣದ ಆವರಣದಲ್ಲಿ ಸ್ಥಾಪಿಸಬೇಕು.
2.ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಸಮಾಜ ಕಲ್ಯಾಣ ಇಲಾಖೆಯ ಹೆಸರಿನ ಬದಲಿಗೆ ಭಾರತರತ್ನ ಸಂವಿಧಾನಶಿಲ್ಪಿ ಡಾ॥ ಭೀಮ್ ರಾವ್ ಅಂಬೇಡ್ಕರ್ ಅವರ ಹೆಸರು ನಮೂದಿಸಬೇಕು.
3.ಕರ್ನಾಟಕ ರಾಜ್ಯದಲ್ಲಿ ನಿರ್ಮಿತವಾಗಿರುವ ವಿವಿಧ ನಿಗಮಗಳಿಗೆ ಭಾರತರತ್ನ ಸಂವಿಧಾನಶಿಲ್ಪಿ ಡಾ॥ ಭೀಮ್ ರಾವ್ ಅಂಬೇಡ್ಕರ್ ಭೋವಿ ಅಭಿವೃದ್ಧಿ ನಿಗಮ ಎಂದು ನಮೂದಿಸಬೇಕು .
4.ಕರ್ನಾಟಕ ರಾಜ್ಯದಲ್ಲಿ ನಿರ್ಮಿತವಾಗಿರುವ ಈ ನಿಗಮಗಳಿಗೆ ಭಾರತರತ್ನ ಸಂವಿಧಾನ ಶಿಲ್ಪಿ ಡಾ॥ ಭೀಮ್ ರಾವ್ ಅಂಬೇಡ್ಕರ್ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವೆಂದು ನಮೂದಿಸಬೇಕು .
5.ಕರ್ನಾಟಕ ರಾಜ್ಯದಲ್ಲಿ ನಿರ್ಮಿತವಾಗಿರುವ ವಿವಿಧ ನಿಗಮಗಳಿಗೆ ಭಾರತರತ್ನ ಸಂವಿಧಾನಶಿಲ್ಪಿ ಡಾ॥ಭೀಮ್ ರಾವ್ ಅಂಬೇಡ್ಕರ್ ಲಂಬಾಣಿ ತಾಂಡ ಅಭಿವೃದ್ಧಿ ನಿಗಮವೆಂದು ನಮೂದಿಸಬೇಕು.
ಎಲ್ಲಾ ಇಲಾಖೆಗಳಿಗೆ ಭಾರತರತ್ನ ಸಂವಿಧಾನಶಿಲ್ಪಿ ಡಾ॥ಭೀಮ್ ರಾವ್ ಅಂಬೇಡ್ಕರ್ ಹೆಸರಿಡಬೇಕು ಎಂದು ಕೋರಿದರು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲು ಮುಂದಾಗುವುದಾಗಿ ಮನವಿಯ ಮೂಲಕ ವಿನಂತಿಸಿಕೊಂಡರು .
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153