ಶಿವಮೊಗ್ಗ: ಇಂದು ವಾರ್ಡ್ ನಂಬರ್ 35 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಏಳುಮಲೈ ಕೇಬಲ್ ಬಾಬು ನೇತೃತ್ವದಲ್ಲಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಇಂದು ಸಂಜೆ ಸರಿಸುಮಾರು 4.30 ಸಮಯದಿಂದ 7.00 ಗಂಟೆಯವರೆಗೂ ಈ ಪ್ರಚಾರ ಕಾರ್ಯಕ್ರಮವನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಯುವಕರ ತಂಡ ಎಎಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಈ ಪ್ರಚಾರ ಕಾರ್ಯಕ್ರಮದಲ್ಲಿ ಎಎಪಿ ಪಕ್ಷದ ಕಾರ್ಯಕರ್ತರು ಜನರ ಮನೆಗಳಿಗೆ ತೆರಳಿ ಎಎಪಿ ಪಕ್ಷವು ದೆಹಲಿ ಹಾಗೂ ಪಂಜಾಬ್ ನಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮನಮುಟ್ಟುವಂತೆ ತಿಳಿಸಿದರು. ಇದರಿಂದ ಉತ್ಸಾಹಗೊಂಡ 90 ಜನ ಯುವಕರು ಎಎಪಿ ಪಕ್ಷ ಸೇರ್ಪಡೆಗೊಂಡರು. ಇದೇ ಸಂಧರ್ಭದಲ್ಲಿ ನಿನ್ನೆಯಷ್ಟೇ ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ಸೈಯದ್ ಸಲೀಮ್ ರನ್ನು ವಾರ್ಡ್ ನಂಬರ್ 35 ರ ಅಧ್ಯಕ್ಷರನ್ನಾಗಿ ಏಳುಮಲೈ ಕೇಬಲ್ ಬಾಬು ರವರು ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಸೈಯದ್ ಸಲೀಮ್ ಪಕ್ಷ ನನಗೆ ನೀಡಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಾನು ನಿಭಾಯಿಸುತ್ತೇನೆ ಹಾಗೂ ಈ ವಾರ್ಡಿನ ಜನರ ಸಮಸ್ಯೆಯನ್ನು ಬಗೆಹರಿಸಲು ಸದಾ ಸಿದ್ಧನಾಗಿರುತ್ತೇನೆ ಎಂಬ ಭರವಸೆಯನ್ನು ಜನರಿಗೆ ನೀಡಿದರು.ಇದರೊಂದಿಗೆ ನೂತನವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ 90 ಜನ ಯುವಕರಿಗೆ ಸ್ವಾಗತವನ್ನು ಕೋರಿದರು.
ನಂತರ ಮಾತನಾಡಿದ ಎಎಪಿ ಪಕ್ಷದ ಮುಖಂಡರಾದ ಏಳುಮಲೈ ಕೇಬಲ್ ಬಾಬು ರವರು ವಾರ್ಡ್ ನಂಬರ್ 35 ರಲ್ಲಿ ಸುಮಾರು ನಲವತ್ತು ವರ್ಷಗಳಿಂದ ಸಾಕಷ್ಟು ಮನೆಗಳಿಗೆ ಸರ್ಕಾರದ ವತಿಯಿಂದ ಹಕ್ಕುಪತ್ರಗಳನ್ನು ನೀಡದೆ, ಜನರ ಜೀವನವನ್ನು ಅತಂತ್ರದಲ್ಲಿ ಇರುವಂತೆ ಸರ್ಕಾರ ನಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಜನರ ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಹೇಳುವುದರ ಜತೆಯಲ್ಲೇ ಸರ್ಕಾರ ಈ ಸಮಸ್ಯೆಯ ಬಗ್ಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಏಳುಮಲೈ ಕೇಬಲ್ ಬಾಬು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮುಖಂಡ ಕಿರಣ್ ಪಕ್ಷದ ಮುಖಂಡರುಗಳಾದ ಕೆ ,ಲಕ್ಷ್ಮೀಶ್ ,ಮಾರ್ಕ್ ,ಸೈಯದ್ ಸಲೀಮ್ ,ಮೊಹಮ್ಮದ್ ಅಫ್ರೋಜ್ ,ರಿಯಾಝ್ ,ಸದ್ದಾಂ ಸೇರಿದಂತೆ ಇನ್ನೂ ಹಲವು ಜನರು ಭಾಗಿಯಾಗಿದ್ದರು.