ರಕ್ತದಾನ ಮಾಡಲು ಯಾವುದೇ ಭಯ, ಹಿಂಜರಿಕೆ ಅನುಮಾನ ಬೇಡ, ಆರೋಗ್ಯಂತ ಮನುಷ್ಯ ಪ್ರತಿ ೩ತಿಂಗಳಿಗೊAದು ಬಾರಿ ವೈದ್ಯರ ಸಲಹೆ ಮೇರೆಗೆ ನಿರಂತರವಾಗಿ ರಕ್ತದಾನ ಮಾಡಬಹುದು ಎಂದು ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಗಳ ಅಧ್ಯಕ್ಷ ಹಾಗೂ ೧೦೮ ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ನುಡಿದರು. ಅವರು ಇಂದು ಬೆಳಿಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ರಕ್ದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದು ಜಿಲ್ಲೆಯಲ್ಲಿ ಶೇ. ೫೦% ರಕ್ತದ ಕೊರತೆ ಇದೆ. ಇದನ್ನು ನೀಗಿಸಲು ದಾನಿಗಳಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ನೀವೆಲ್ಲರೂ ರಕ್ತದಾನಿಗಳಾಗಿ ಉತ್ತಮ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಿ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಗಳ ಮಾಜಿ ಅಧ್ಯಕ್ಷ ಹಾಗೂ ರೋಟರಿ ವಲಯ ೧೧ರ ಮಾಜಿ ಸಹಾಯಕ ಗರ‍್ನರ್ ಜಿ.ವಿಜಯಕುಮಾರ್ ಮಾತನಾಡುತ್ತಾ ನಮ್ಮ ದೇಹದಲ್ಲಿ ೫ ೧/೨ ಲೀ. ರಕ್ತ ಇರುತ್ತದೆ. ಬದುಕಲು ಕೇವಲ ೪ ೧/೨ ಲೀ. ರಕ್ತ ಸಾಕು. ಆದ್ದರಿಂದ ಯಾವುದೇ ಮೂಢನಂಬಿಕೆ ಇಲ್ಲದೇ ರಕ್ತದಾನ ಮಾಡಿ. ರಕ್ತದಾನ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಜಾಸ್ತಿ ಆಗಿ ಓದಿಗೆ ಅನುಕೂಲವಾಗುತ್ತದೆ. ಹಾಗೂ ಹೊಸ ರಕ್ತ ಉತ್ಪತ್ತಿಯಾಗುವುದರಿಂದ ನಮ್ಮ ಆರೋಗ್ಯ ಸದಾ ಲವಲವಿಕೆಯಿಂದ ಇರುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ರಕ್ತದಾನಿಗಳು ಹಾಗೂ ಮಾಜಿ ಅಧ್ಯಕ್ಷರಾದ ಆರ್.ಗಿರೀಶ್‌ರವರು ಮಾತನಾಡುತ್ತಾ ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ರಕ್ತದಾನದಿಂದ ಶೇ.೮೦% ಹೃದಯಾಘಾತ ಕಡಿಮೆಯಾಗುತ್ತದೆ. ಆದ್ದರಿಂದ ನಾವುಗಳು ರಕ್ತದಾನ ಮಾಡಲು ಯಾವುದೇ ಅನುಮಾನ ಬೇಡ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಡಾ|| ರೇಷ್ಮಾ, ರವಿ, ಉಪನ್ಯಾಸಕರುಗಳು ನಾಳೆ ನಮ್ಮ ಪ್ರಾಂಶುಪಾಲರು ನಿವೃತ್ತರಾಗುತ್ತಿದ್ದು, ಅವರ ಸವಿ ನೆನಪಿಗೆ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ತಾವೆಲ್ಲೂ ರಕ್ತದಾನ ಮಾಡಿ ಸಮಾಜದಲ್ಲಿ ನಿಜವಾದ ಹೀರೋಗಳಾಗಬೇಕು. ಎಂದು ಸಲಹೆ ನೀಡಿದರು.
ನಾಳೆ ಬೆಳಿಗ್ಗೆ ೧೦.೦೦ ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ ರಕ್ತದಾನ ಶಿಬಿರಕ್ಕೆ ಎಲ್ಲರೂ ಹಾಜರಾಗಿ ರಕ್ತದಾನ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ.

ವರದಿ ಮಂಜುನಾಥ್ ಶೆಟ್ಟಿ…