ಶಿವಮೊಗ್ಗ: ಪ್ರತಿ ನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ಸಂಸ್ಕಾರ ಸಂಸ್ಕೃತಿಯ ಅರಿವಿನ ಜತೆಯಲ್ಲಿ ಆರೋಗ್ಯ ವೃದ್ಧಿಯಾಗುತ್ತದೆ. ಇಂದು ಪ್ರಪಂಚದ 200ಕ್ಕೂ ಹೆಚ್ಚು ದೇಶಗಳು ಯೋಗಕ್ಕೆ ಪ್ರಾಮುಖ್ಯತೆ ನೀಡುತ್ತಿವೆ ಎಂದು ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಹೇಳಿದರು.
ಶಿವಮೊಗ್ಗ ನಗರದ ಲಕ್ಷಿö್ಮÃಪುರದ ನಾಗಲಿಂಗೇಶ್ವರ ಸಮುದಾಯ ಭವನದಲ್ಲಿ ಶಿವಗಂಗಾ ಯೋಗಕೇಂದ್ರದ 30ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಯೋಗ ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿ ಇಡುವ ಜತೆಯಲ್ಲಿ ಯುವಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಖಿನ್ನತೆ ಹಾಗೂ ಮಾನಸಿಕ ಖಾಯಿಲೆಗಳನ್ನು ಹೋಗಲಾಡಿಸುತ್ತದೆ. ಸದಾ ಉತ್ಸಾಹದ ಮನಸ್ಸಿನಿಂದ ಇರುವಂತೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.
ಯೋಗ ಶಾಖೆ ನಡೆಸಲು ಸ್ಥಳೀಯರು ಮುಂದಾಗಿರುವುದು ಅಭಿನಂದನೀಯ, ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವ ಎಲ್ಲರಿಗೂ ಧನ್ಯವಾದಗಳು. ಸಮುದಾಯ ಭವನಗಳಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಯೋಗ ಪ್ರಾಣಾಯಾಮದಂತಹ ಕಾರ್ಯಕ್ರಮಗಳು ನಡೆದಲ್ಲಿ ಸಕರಾತ್ಮಕ ವಾತಾವರಣ ರೂಪುಗೊಳ್ಳುತ್ತದೆ. ಎಲ್ಲರೂ ದಿನನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದರು.
ಲೇಖಕ ಡಾ. ಪದ್ಮನಾಭ ಅಡಿಗ ಮಾತನಾಡಿ, ಯೋಗದಿಂದ ಅನೇಕ ಕಾಯಿಲೆಗಳು ದೂರವಾಗುವುದರ ಜತೆಗೆ 40 ವರ್ಷದ ನಂತರ ಬರಬಲ್ಲ ಸಾಮಾನ್ಯ ಕಾಯಿಲೆಗಳನ್ನು ನಿಯಂತ್ರಿಸುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರತಿ ದಿನ ತಪ್ಪದೇ ಯೋಗ ಅಭ್ಯಾಸ ಮಾಡಬೇಕು. ಯೋಗ ಅಭ್ಯಾಸದಿಂದ ರೋಗ ದೂರ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಭೆಯ ನಂತರ ಯೋಗಗುರುಗಳು ಯೋಗಾಸನ, ಪ್ರಾಣಾಯಾಮ, ಧ್ಯಾನ ಶಿಬಿರಕ್ಕೆ ಚಾಲನೆ ನೀಡಿದರು. ಪ್ರತಿಯೊಂದು ಆಸನದ ಪ್ರಯೋಜವನ್ನು ತಿಳಿಸಿಕೊಟ್ಟರು. ಯೋಗ ಶಿಕ್ಷಕರಾದ ರಾಜಶೇಖರ್, ಜಿ.ಎಸ್.ಓಂಕಾರ್, ಚಂದ್ರಶೇಖರ್, ನಾಗರಾಜ್, ಜಿ.ವಿಜಯ್‌ಕುಮಾರ್, ಬಸವರಾಜ್, ಲವಕುಮಾರ್, ಸುನಂದಾ, ನಾಗರತ್ನ, ತ್ರಿವೇಣಿ, ಶಶಿಕಲಾ ಹಾಗೂ 100ಕ್ಕೂ ಹೆಚ್ಚು ಶಿಬಿರಾರ್ಥಿಗಳು ಹಾಜರಿದ್ದರು.