ಎಲ್ಲಾ ದಾನಗಳಿಗಿಂತ ಅತ್ಯಂತ ಶ್ರೇಷ್ಟ ದಾನ ರಕ್ತದಾನ. ಪ್ರಪಂಚದಲ್ಲಿ ರಕ್ತದಾನಕ್ಕಿಂತ ಶ್ರೇಷ್ಠದಾನ ಬೇರೊಂದಿಲ್ಲ. ರಕ್ತದಾನದಿಂದ ನಮ್ಮ ದೇಹ, ಮನಸ್ಸು ಆರೋಗ್ಯ ಸದೃಢವಾಗಿರುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ|| ಧನಂಜಯ ಬಿ.ಆರ್.ರವರು ಹೇಳಿದರು.

ಅವರು ಇಂದು ಬೆಳಿಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆ ಹಾಗೂ ಎನ್.ಎಸ್.ಎಸ್. ಘಟಕಗಳ ವತಿಯಿಂದ ನಿವೃತ್ತಿಯಾಗುತ್ತಿರುವ ಪ್ರಾಂಶುಪಾಲರಾದ ಪ್ರೊ|| ಧನಂಜಯ ಬಿ.ಆರ್. ರವರ ಸೇವೆಯನ್ನು ಗುರುತಿಸಿ ವಿದ್ಯಾರ್ಥಿಗಳು ಬಹತ್ ರಕ್ತದಾನ ಮಾಡುವ ಮುಖಾಂತರ ಗುರುವಿನ ಸೇವೆಯನ್ನು ತೀರಿಸಲು ಮುಂದಾಗಿದ್ದು, ಮನಃತುಂಬಿ ಬಂದಿದೆ ಎಂದು ನುಡಿದರು. ಇಂದು ಜಿಲ್ಲೆಯಲ್ಲಿ ಸಾಕಷ್ಟು ರಕ್ತದ ಕೊರತೆ ಇದೆ. ಅದನ್ನು ನೀಗಿಸಲು ಅದನ್ನು ನೀಗಿಸಲು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವರ್ಷದಲ್ಲಿ ೨ ಬಾರಿ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡುವ ಮುಖಾಂತರ ಮನುಕುಲದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದೇವೆ ಎಂದು ನುಡಿದರು. ಈಗಾಗಲೇ ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ಎಲ್ಲಾ ಸಮಾಜಮುಖಿ ಸೇವಾಕಾರ್ಯಗಳು ನಡೆಯುವುದರ ಜೊತೆಗೆ ವಿದ್ಯಾರ್ಥಿಗಳು ಸಂಸ್ಕಾರಯುತರನ್ನಾಗಿ ಮಾಡಿದ್ದೇವೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕಾಲೇಜು ವತಿಯಿಂದ ೧೦೮ ಬಾರಿ ರಕ್ತದಾನ ಮಾಡಿ ರಾಜ್ಯಪುರಸ್ಕಾರಕ್ಕೆ ಒಳಗಾಗಿರುವ ರಕ್ತದಾನಿ ಧರಣೇಂದ್ರ ದಿನಕರ್‌ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿಯೋಜಿತ ಪ್ರಾಂಶುಪಾಲರಾದ ಡಾ|| ವಿಷ್ಣುಮೂರ್ತಿ ಯವರು ಮಾತನಾಡುತ್ತಾ ರಕ್ತದಾನದಿಂದ ನಾವು ಸದಾ ಲವಲವಿಕೆಯಿಂದ ಇರಲು ಸಾಧ್ಯ. ಹಾಗೂ ರಕ್ತದಾನ ಮಾಡುವುದರಿಂದ ದೀರ್ಘಾಯುಷ್ಯವುಳ್ಳವರಾಗುತ್ತೇವೆ. ಅಲ್ಲದೇ ನಮ್ಮ ಬಳಿ ಯಾವುದೇ ಖಾಯಿಲೆ ಸುಳಿಯುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ರಕ್ತದಾನ ಮಾಡುವುದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ರಕ್ತದ ಗುಂಪನ್ನು ತಪಾಸಣೆ ಮಾಡಿ ಪರೀಕ್ಷಿಸಿ ಗುರುತಿನ ಚೀಟಿಯನ್ನು ಪಡೆದರು.
ಈ ಬೃಹತ್ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಿ.ವಿಜಯಕುಮಾರ್, ಆರ್.ಗಿರೀಶ್, ಹಾಗೂ ಧರಣೇಂದ್ರ ದಿನಕರ್‌ರವರು ರಕ್ತದಾನ ಮಹತ್ವದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ|| ವೀಣಾ ಎಂ.ವಿ., ಡಾ|| ಪೂರ್ಣಿಮಾ ಎಸ್.ವಿ, ಸ್ಕೌಟ್ ವಿಭಾಗದ ರೋವರ್ ಆಫೀಸರ್ ಬಸವಣ್ಯಪ್ಪ, ದೈಹಿಕ ನಿರ್ದೇಶಕರಾದ ಜಯಕೀರ್ತಿ, ಹರೀಶ್, ಎನ್.ಎಸ್.ಎಸ್ ಆಫೀಸರ್ ಗಳಾದ ಡಾ|| ರೇಷ್ಮಾ, ಡಾ|| ಸೋಮಶೇಖರ್, ಡಾ|| ಪರಿಸರ ನಾಗರಾಜ್, ರೆಡ್‌ಕ್ರಾಸ್‌ನ ಪದಾಧಿಕಾರಿಗಳಾದ ಪ್ರಸನ್ನ, ರವಿ, ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…