ಶಿವಮೊಗ್ಗ: ದೇಹವೆಂಬ ಬಂಡಿಗೆ ವಿವೇಕ ಎಂಬ ಕಡಿಗೀಲು ಇದ್ದಾಗ ಮಾತ್ರ ಅದು ಸರಿದಾರಿಯಲ್ಲಿ ಹೋಗುತ್ತದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.
ಶ್ರೀಗಳು ನಿನ್ನೆ ಶಂಕರಮಠ ರಸ್ತೆ ಶ್ರೀ ಓಂ ಗಣೇಶ್ ಟ್ರೈಲರ್ಸ್ ಆವರಣದಲ್ಲಿ ಶ್ರೀ ಮುರುಘ ರಾಜೇಂದ್ರ ಮಹಾಸಂಸ್ಥಾನ ಮಠ ಟ್ರಸ್ಟ್, ಗುರುಬಸವ ಅಧ್ಯಯನ ಪೀಠ, ಶ್ರೀ ಬೆಕ್ಕಿನ ಕಲ್ಮಠ ವತಿಯಿಂದ ಜುಲೈ 29ರಿಂದ ಸೆ.10ರವರೆಗೆ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿರುವ ಶ್ರಾವಣ ಚಿಂತನ ಕಾರ್ಯಕ್ರಮದ ಉದ್ಘಾಟನಾ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಅರಿಷಡ್ವರ್ಗಗಳು ಹಾಗೂ ಪಂಚೇಂದ್ರಿಯಗಳು ನಮ್ಮ ದೇಹವನ್ನು ಅವುಗಳದ್ದೇ ಆದ ದಾರಿಯಲ್ಲಿ ಒಯ್ಯಲು ಪ್ರಯತ್ನಿಸುತ್ತವೆ. ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊAಡು ಉತ್ತಮ ಮಾರ್ಗದಲ್ಲಿ ನಡೆಯಲು ಅಧ್ಯಾತ್ಮ ಚಿಂತನೆ ಅವಶ್ಯಕ. ಅಂತಹ ಚಿಂತನೆಗೆ ಶ್ರಾವಣ ಮಾಸ ಅತ್ಯಂತ ಪ್ರಶಸ್ತವಾಗಿದ್ದು, ಕಳೆದ ನಲವತ್ತು ವರ್ಷಗಳಿಂದ ಶಿವಮೊಗ್ಗ ನಗರದ ವಿವಿಧ ಸ್ಥಳಗಳಲ್ಲಿ ಹಾಗೂ ಭಕ್ತರ ನಿವಾಸಗಳಲ್ಲಿ ಶ್ರಾವಣ ಚಿಂತನ ಕಾರ್ಯ ಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಶ್ರೀಗಳು ಹೇಳಿದರು.
ಇಂದಿನ ಆಧುನಿಕ ಕಾಲದ ಪ್ರಭಾವ ಮತ್ತು ಪ್ರಲೋಭನೆಗಳಿಂದಾಗಿ ದೇವರು ನೀಡಿರುವ ಚಿಂತನಾ ಶಕ್ತಿಯನ್ನು ಮನುಷ್ಯ ಕಳೆದುಕೊಂಡು ಪೈಶಾಚಿಕವಾಗಿ ವರ್ತಿಸುತ್ತಿದ್ಧಾನೆ. ಪರಸ್ಪರ ನಂಬಿಕೆ, ವಿಶ್ವಾಸಗಳು ದೂರವಾಗಿವೆ. ಇಂತಹ ಸಂದರ್ಭದಲ್ಲಿ ಅಧ್ಯಾತ್ಮ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ದೇವರನ್ನು ನಮ್ಮ ನಮ್ಮಲ್ಲೇ ಕಂಡುಕೊAಡು ತಾನೂ ಉತ್ತಮನಾಗಿ, ಸಮಾಜವನ್ನು ಉತ್ತಮಗೊಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯ ಸಹ ಕಾರ್ಯವಾಹ ಪಟ್ಟಾಭಿರಾಮ್ ಮಾತನಾಡಿ, ತನ್ನ ವೈಯಕ್ತಿಕ ಬೆಳವಣಿಗೆಯ ಜೊತೆಗೆ ಸಮಾಜದ ಅಭಿವೃದ್ಧಿಯನ್ನು ಬಯಸುವವರು. ಭಾರತದ ಪರಂಪರೆ. ಪ್ರಪಂಚಕ್ಕೇ ಬೆಳಕನ್ನು ಕೊಡುವ, ಸಾಕ್ಷಾತ್ ಭಗವಂತನೇ ಅವತಾರ ವೆತ್ತಿದ ಸ್ಥಳ ಭಾರತ. ಹೀಗಾಗಿ ದೇಶದ ಮೇಲೆ ಎಷ್ಟೇ ಆಕ್ರಮಣಗಳು ನಡೆದರೂ ಅವುಗಳನ್ನು ಮೀರಿ ಮತ್ತೆ ಸದೃಢವಾಗಿ ನಿಲ್ಲುವ ಶಕ್ತಿ ನಮ್ಮ ದೇಶದ್ದು ಎಂದು ಅಭಿಪ್ರಾಯಪಟ್ಟರು.
ಆತ್ಮೋದ್ಧಾರ ಭಗವತ್‌ಚಿಂತನೆಗೆ ಶ್ರಾವಣ ಮಾಸ ಅತ್ಯಂತ ಪೂರಕ. ಇಂತಹ ಸಂದರ್ಭದಲ್ಲಿ ಶ್ರೀಗಳು ಶ್ರಾವಣ ಚಿಂತನ ಕಾರ್ಯಕ್ರಮದ ಮೂಲಕ ಜನರಲ್ಲಿ ಅಧ್ಯಾತ್ಮ ಜಾಗೃತಿಯನ್ನುಂಟು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರಪ್ಪ, ಹೊಳಲೂರು ಲಿಂಗಪ್ಪ, ಭಾಸ್ಕರ ಜಿ. ಕಾಮತ್, ಹರ್ಷ ಬಿ. ಕಾಮತ್ ವೇದಿಕೆಯಲ್ಲಿದ್ದರು. ಪಾಲಿಕೆ ಸದಸ್ಯ ಇ. ವಿಶ್ವಾಸ್ ಉಪಸ್ಥಿತರಿದ್ದರು.ವಚನ ಗಾಯನ ಕಾರ್ಯ ಕ್ರಮವನ್ನು ಸುಮಾ ಹೆಗಡೆ ನಡೆಸಿಕೊಟ್ಟರು. ನಿರೂಪಣೆಯನ್ನು ದೀಕ್ಷಾ ಕಾಮತ್ ನಿರ್ವಹಿಸಿದರು. ವಂದನಾರ್ಪಣೆಯನ್ನು ವಿಶ್ವಾಸ್ ಕಾಮತ್ ಮಾಡಿದರು. ಪ್ರಾರ್ಥನೆಯನ್ನು ದಾಮಿನಿ ಪೈ, ಮನ್ವಿತಾ ಪೈ ಮಾಡಿದರು.