ಶಿವಮೊಗ್ಗ: ಚಿಟ್ ಫಂಡ್ ಸೇವೆಗಳ ಮೇಲೆ ಪಾವತಿಸುವ ಸರಕು ಮತ್ತು ಸೇವಾ ತೆರಿಗೆ ( ಜಿ ಎಸ್ ಟಿ ) ವಿನಾಯಿತಿ ನೀಡುವಂತೆ ಶಿವಮೊಗ್ಗ ಜಿಲ್ಲಾ ಚಿಟ್ ಸ್ರ‍್ಸ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಜಿ ಎಸ್ ಟಿ ಸಮಿತಿ 47ನೇ ಸಮಿತಿ ಸಭೆಯಲ್ಲಿ ಚಿಟ್ ಪ್ರವರ್ತಕರು ನೀಡುವ ಸೇವೆಗಳ ಮೇಲೆ ಶೇ. 12 ಜಿ ಎಸ್ ಟಿಯಿಂದ ಶೇ. 18ರವರೆಗೆ ಹೆಚ್ಚಿಸಲಾಗಿದೆ. ಹೆಚ್ಚಳದಿಂದ ಚಿಟ್ ಪಾವತಿದಾರರಿಗೆ ಮತ್ತು ಚಿಟ್ ಮುಖ್ಯಸ್ಥರಿಗೆ ಆಘಾತ ತರುವಂತಾಗಿದೆ.
ಈವರೆಗೂ ಬ್ಯಾಂಕ್, ಮ್ಯೂಚುಯಲ್ ಫಂಡ್, ಎನ್‌ಬಿಎಫ್‌ಸಿ ತರಹದ ಆರ್ಥಿಕ ಸಂಸ್ಥೆಗಳು ಒದಗಿಸುವ ಸೇವೆಗಳ ತರಹವೇ ಚಿಟ್ ಫಂಡ್ ಸೇವೆಗಳನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಿ ಎಂದು ಸರ್ಕಾರವನ್ನು ಕೇಳಲಾಗುತ್ತಿದೆ. ಚಿಟ್ ಫಂಡ್‌ಗಳನ್ನು ಆರ್ ಬಿ ಐ, ಎನ್ ಬಿ ಎಫ್ ಸಿ ಎಂದು ವರ್ಗೀಕರಿಸಿದ್ದರೂ ಜಿ ಎಸ್ ಟಿ ಪಾವತಿಸಲು ಪ್ರತ್ಯೇಕಗೊಳಿಸಲಾಗಿದೆ.
ಶೇ. 18 ಜಿ ಎಸ್ ಟಿ ಪಾವತಿಸಬೇಕೆಂಬ ಪ್ರಸ್ತಕ ನಿರ್ಧಾರ ಬ್ಯಾಂಕಿAಗ್ ಸೇವೆ ಆರಂಭವಾಗುವುದಕ್ಕೆ ಮುನ್ನ ಇದ್ದ ಸಾಂಪ್ರದಾಯಿಕ ಸಂಸ್ಥೆಗಳು ಸರ್ಕಾರ ವಿಧಿಸಿರುವ ಜಿ ಎಸ್ ಟಿಯಿಂದ ಚಿಟ್ಸ್ ಉದ್ಯಮಕ್ಕೆ ತುಂಬಾ ಅನ್ಯಾವಾಗುತ್ತಿದೆ ಎಂದು ಆರೋಪಿಸಿದರು.
ಎನ್ ಬಿ ಎಫ್ ಸಿ ಅವರಿಗೆ ನೀಡಿರುವ ತರಹ ಚಿಟ್ಸ್ ಉದ್ಯಮಕ್ಕೂ ಜಿ ಎಸ್ ಟಿಯಿಂದ ವಿನಾಯಿತಿ ನೀಡಬೇಕು ಎಂದು ಶಿವಮೊಗ್ಗ ಜಿಲ್ಲಾ ಚಿಟ್ ಸ್ರ‍್ಸ್ ಅಸೋಸಿಯೇಷನ್ ವತಿಯಿಂದ ಮನವಿ ಸಲ್ಲಿಸಲಾಯಿತು. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಅಶೋಕ್‌ನಾಯ್ಕ್, ಡಿ.ಎಸ್.ಅರುಣ್, ಎಸ್.ರುದ್ರೇಗೌಡ ಅವರಿಗೆ ಮನವಿ ನೀಡಲಾಯಿತು.
ಶಿವಮೊಗ್ಗ ಸಹ್ಯಾದ್ರಿ ಚಿಟ್ಸ್ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್ ಮಾತನಾಡಿ, ಸರ್ಕಾರ ವಿಧಿಸಿರುವ ಜಿ ಎಸ್ ಟಿ ಹೊರೆಯಿಂದ ಚಿಟ್ಸ್ ಉದ್ಯಮಕ್ಕೆ ಭಾರಿ ಹೊಡೆತ ಬೀಳುತ್ತಿದೆ. ನೋಂದಾಯಿತ ಚಿಟ್ಸ್ ಸಂಸ್ಥೆಗಳಿಗೆ ಸಂಕಷ್ಟ ಎದುರಾಗಿದೆ. ಆದ್ದರಿಂದ ಜಿ ಎಸ್ ಟಿ ಹೊರೆಯನ್ನು ಸಂಪೂರ್ಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಚಿಟ್ಸ್, ಸಹ್ಯಾದ್ರಿ ಚಿಟ್ಸ್, ಮಲ್ಲಿಕಾರ್ಜುನ ಚಿಟ್ಸ್, ನಾಗತೀರ್ಥ. ಗೋಕುಲಮ್ ಚಿಟ್ಸ್ನ ಮಹಾಲಿಂಗಶಾಸ್ತಿç, ಶಿವರಾಜ್ ಉಡಗಣಿ, ಬದರೀನಾಥ್, ಆದಿತ್ಯ, ಜಿ.ವಿಜಯ್‌ಕುಮಾರ್, ಮಂಜುನಾಥ್, ಅನೂಪ್, ರವೀಂದ್ರನಾಥ ಐತಾಳ್ ಹಾಗೂ ಚಿಟ್ಸ್ ಕಂಪನಿಗಳ ಪ್ರಮುಖರು ಹಾಜರಿದ್ದರು.