(PROJECT MANAGEMENT CONSULTANCY ) ಗೆ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ 26 ಕೋಟಿ 95 ಲಕ್ಷ ಬಿಡುಗಡೆ ಆಗಿದ್ದು ಈಗಾಗಲೇ 17 ಕೋಟಿ 92 ಲಕ್ಷ ರೂ ಹಣವನ್ನು ನೀಡಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಯು ಪೂರ್ಣಗೊಳ್ಳುವ ತನಕ ಮುಂದಿನ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಸ್ಮಾರ್ಟ್ ಸಿಟಿ ಕಾಮಗಾರಿಯು ಶಿವಮೊಗ್ಗ ನಗರದಲ್ಲಿ ಅತ್ಯಂತ ಕಳಪೆ ಕಾಮಗಾರಿಯಾಗಿರುತ್ತದೆ. ಪ್ರತಿ ವರ್ಷ ಮಳೆಯ ನೀರು ಮನೆಗಳಿಗೆ, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗುತ್ತಾ ಇರುವುದು ಇದರಿಂದ ಸಾರ್ವಜನಿಕರಿಗೆ ಮೇಲಿಂದ ಮೇಲೆ ತೊಂದರೆ ಆಗುತ್ತಿರುವುದು ತಮಗೆ ಗೊತ್ತಿರುವ ವಿಚಾರವಾಗಿದೆ. ಆದರೆ ಇದರ ಮೇಲ್ ವಿಚಾರಣೆ ನೋಡುತ್ತಿರುವ ಪಿ.ಎಂ.ಸಿ. ಯವರಿಗೆ ಒಟ್ಟು ಕಾಮಗಾರಿಯ ಬಿಲ್ ನಲ್ಲಿ ಶೇಕಡವಾರು ಅನುಪಾತದಲ್ಲಿ 17 ಕೋಟಿ 92 ಲಕ್ಷ ರೂಪಾಯಿ ಬಿಡುಗಡೆ ಮಾಡಿರುತ್ತಾರೆ. ಆದರೆ ಇಷ್ಟು ಹಣ ಪಡೆದಿರುವ ಪಿ.ಎಂ.ಸಿ ಅವರು ನೀರು ನುಗ್ಗಿದ ಸಂದರ್ಭದಲ್ಲಿ ಪಾತ್ರವೇನು ಎಂಬುದು ತಿಳಿದಿರುವುದಿಲ್ಲ.
ಇವರಿಗೆ ಕೊಡುವ ಹಣ ವ್ಯರ್ತವೆಂದು ತಿಳಿಯುತ್ತದೆ. ಆದ್ದರಿಂದ ಆಗಿರುವ ಅನಾಹುತಕ್ಕೆ ಪಿ.ಎಂ.ಸಿ. ಯವರು ಸಹ ನೇರವಾದ ಕಾರಣರಾಗಿರುತ್ತಾರೆ. ಆದ್ದರಿಂದ ಕಾಮಗಾರಿಯು ಸಂಪೂರ್ಣ ಸರಿ ಆಗುವ ತನಕ ಪಿ.ಎಂ.ಸಿ. ಅವರಿಗೆ ಯಾವುದೇ ಹಣವನ್ನು ಬಿಡುಗಡೆ ಮಾಡಬಾರದೆಂದು ಕೇಳಿಕೊಳ್ಳುತ್ತೇವೆ. ಹಾಗೂ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಈಗಾಗಲೇ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುವ ವಾರ್ಡ್ ಗಳ ಸಭೆಯನ್ನು ಕರೆದಿರುವುದಿಲ್ಲ ತಮ್ಮ ನೇತ್ರತ್ವದಲ್ಲಿ ತುರ್ತಾಗಿ ಸ್ಮಾರ್ಟ್ ಸಿಟಿ ಕಾಮಗಾರಿ ಮಾಡುತ್ತಿರುವ ವಾರ್ಡ್ ಸದಸ್ಯರ ಸಭೆಯನ್ನು ಕರೆಯಬೇಕಾಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್ , ನಾಗರಾಜ್ ಕಂಕಾರಿ, ಮಾಜಿ ಉಪ ಮೇಯರ್ ಎಚ್ ಪಾಲಾಕ್ಷಿ , ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ಎಂ. ಪ್ರವೀಣ್ ಕುಮಾರ್, ಎಚ್ ಪಿ ಗಿರೀಶ್ , ಬಿ ಲೋಕೇಶ್, ಎಸ್ ಕುಮಾರೇಶ್ , ರಂಗೆಗೌಡ, ಮೋಹನ್ ಇತರರು ಇದ್ದರು.