ಶಿವಮೊಗ್ಗ ನಗರದ, ಮಹಾನಗರ ಪಾಲಿಕೆ, ವಿರೋಧ ಪಕ್ಷದ ನಾಯಕಿಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ರೇಖಾ ರಂಗನಾಥ ರವರಿಗೆ, ಒಕ್ಕೂಟದಿಂದ ಸಾಲನ್ನು ಹೊದಿಸಿ, ಸುಗಂಧರಾಜ ಹೂವಿನ ಹಾರವ ಹಾಕಿ, ಹೂವಿನ ಗುಚ್ಚವ ನೀಡಿ ಆಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಶ್ರೀ ಯುತ ಚನ್ನವೀರಪ್ಪ ಗಾಮನಗಟ್ಟಿ ರವರು, ಈ ಹಿಂದೆ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು, ಪ್ರಗತಿಪರ ಸಂಘಟನೆಯ ಸಹಕಾರದಿಂದ ಈ ಹಿಂದೆ ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಸ್ಥರ ಒಕ್ಕೂಟ ಪಟ್ಟಿಯಲ್ಲಿ, ಶಿವಮೊಗ್ಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಒಕ್ಕೂಟದ ಹೆಸರು ಮೊದಲೇಯ ಸ್ಥಾನದಲ್ಲಿ ಇತ್ತು.
ಇಂದು NASVI (national association of street vendors, of india) ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಒಕ್ಕೂಟ ಹೆಸರು ಮೊದಲನೆ ಸ್ಥಾನದಲ್ಲಿ ಇದೆ. ಒಕ್ಕೂಟಕ್ಕೆ ಸಹಕರಿಸಿದ ಜನ ಪ್ರತಿನಿಧಿಗಳಿಗೂ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ, ಪ್ರಗತಿಪರ ಸಂಘಟನೆಯ ಮುಖಂಡರಿಗೆ, ಜಿಲ್ಲೆಯ ಬೀದಿಬದಿ ವ್ಯಾಪಾರಸ್ಥರಿಗೂ, ಪ್ರತೇಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಆಭಿನಂದನೆ ಸಲ್ಲಿಸುವೆ, ಹಾಗೆ ತಮ್ಮ ಸಹಕಾರವೂ ಬೀದಿಬದಿ ವ್ಯಾಪಾರಸ್ಥರಿಗೆ ಸದಾ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಕ್ಕೂಟದ ದಿನೇಶ್, ರಂಗಮ್ಮ, ಮಣಿ, ಹನುಮಂತಪ್ಪ, ನಾಗರಾಜ್, ರಾಜೇಶ್, ಜ್ಯೋತಿ, ಹಾಗೂ ಬೀದಿಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.