ರಾಜ್ಯಮಟ್ಟದ ವರ್ಬ್ಯಾಟಲ್ ಡಿಬೇಟ್ ಚಾಂಪಿಯನ್ ಶಿಪ್ ನ ಕರ್ನಾಟಕ 2022ರ ನ 18ನೆಯ ಆವೃತ್ತಿಯಲ್ಲಿ ವಿದ್ಯಾಶಿಲ್ಪ ಅಕಾಡೆಮಿ ಯ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬಿಗಿನರ್ಸ್ ವಿಭಾಗದಲ್ಲಿ ಪಿಯಾ ಹಾಗೂ ತಾಶಿ ಮತ್ತು ಜ್ಯೂನಿಯರ್ ವಿಭಾಗದಲ್ಲಿ ಆದ್ಯಾ ಹಾಗೂ ಆಯ್ಮನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ವರ್ಬ್ಯಾಟಲ್ ಸಂಸ್ಥೆಯ ಸಂಸ್ಥಾಪಕ ದೀಪಕ್ ತಿಮ್ಮಯ ಮಾತನಾಡಿ, ಬಿಗಿನರ್ಸ್ ವಿಭಾಗದಲ್ಲಿ ಒಟ್ಟು 47 ಮಂದಿ ಪಾಲ್ಗೊಂಡಿದ್ದರು ಹಾಗೂ ಜ್ಯೂನಿಯರ್ ವಿಭಾಗದಲ್ಲಿ 173 ಮಂದಿ ಪಾಲ್ಗೊಂಡಿದ್ದರು. ಒಟ್ಟು 51 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ರಾಮಕೃಷ್ಣ ಉಪಾಧ್ಯಾಯ, ಸುನಿಲ್ ರಾಜಶೇಖರ್, ಹಂಸ್ವರ್ಧನ್, ವಿನಾಯಕ ರಾಮಕೃಷ್ಣ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಬಿಗಿನರ್ ವಿಭಾಗದ ವಿಜೇತರಿಗೆ 20,000 ಹಾಗೂ ಜ್ಯೂನಿಯರ್ ವಿಭಾಗದ ವಿಜೇತರಿಗೆ 1ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಲಾಯಿತು. ಎಂಟರಿಂದ 12 ವರ್ಷದ ಮಕ್ಕಳು ಬಿಗಿನರ್ ವಿಭಾಗದಲ್ಲೂ 12ರಿಂದ 16ರ ವಯಸ್ಸಿನ ಮಕ್ಕಳು ಜ್ಯೂನಿಯರ್ ವಿಭಾಗದಲ್ಲೂ ಪಾಲ್ಗೊಂಡಿದ್ದರು ಎಂದರು.