ಮಾಜಿ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಂಗವಾಗಿ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಅಮೃತ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದು 20 ಲಕ್ಷ ಜನ ಸೇರಿ ಯಶಸ್ವಿಯಾಗಿದೆ.ಶ್ರೀ ಸಿದ್ದರಾಮಯ್ಯ ನವರ ಕುರಿತಾದ ಅಭಿಮಾನ,ಕಾಂಗ್ರೆಸ್ ಪಕ್ಷದ ಕುರಿತಾದ ವಿಶ್ವಾಸ ಮತ್ತು ಹಾಲಿ ಬಿಜೆಪಿ ಸರ್ಕಾರದ ದುರ್ನಡತೆ ವಿರುದ್ದದ ಜನಾಕ್ರೋಶವಾಗಿ ಸಮಾವೇಶ ವ್ಯಕ್ತವಾಗಿದೆ.
ಈ ಅಮೃತ ಮಹೋತ್ಸವದ ಯಶಸ್ಸಿಗೆ ಕಾರಣರಾದ ಪ್ರಮುಖರಿಗೆ ಕಾರ್ಯಕರ್ತರಿಗೆ ಹಾಗೂ ಶಿವಮೊಗ್ಗ ಜಿಲ್ಲೆ ಮತ್ತುನಗರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಪಕ್ಷದ ವತಿಯಿಂದ ಹಾಗೂ ವೈಯಕ್ತಿಕವಾಗಿ ಧನ್ಯವಾದಗಳು.ಶಿವಮೊಗ್ಗ ನಗರದಿಂದ ಹತ್ತಾರು ಸಾವಿರ ಜನ ಸಮಾವೇಶದಲ್ಲಿ ಭಾಗವಹಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು ಎಲ್ಲರಿಗೂ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.